More

    ಸಂಶೋಧಕ ಡಾ.ಚಿದಾನಂದ ಮೂರ್ತಿಗೆ ಬಳ್ಳಾರಿ, ಕಂಪ್ಲಿಯಲ್ಲಿ ನುಡಿನಮನ

    ಬಳ್ಳಾರಿ: ಸಂಶೋಧಕ ನಾಡೋಜ ಡಾ.ಎಂ.ಚಿದಾನಂದಮೂರ್ತಿ ಅವರ ಕನ್ನಡ ಭಾಷಾ ಪ್ರೇಮ ಅಗಾಧ. ಅವರನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

    ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಲೋಕೋಪಯೋಗಿ ಇಲಾಖೆಯ ಎಇ ಮಂಜುನಾಥ, ಉಪನ್ಯಾಸಕ ಡಾ.ಕೆ.ಬಸಪ್ಪ, ಕಸಾಪ ಬಳ್ಳಾರಿ ತಾಲೂಕು ಅಧ್ಯಕ್ಷ ಕೆ.ಸುಂಕಪ್ಪ, ವಿಮ್ಸ್‌ನ ನೇತ್ರಾಧಿಕಾರಿ ಡಾ.ಸಿ.ಎಂ.ವೀರಭದ್ರಯ್ಯ, ಉಪನ್ಯಾಸಕ ಡಾ.ಯು.ಶ್ರೀನಿವಾಸಮೂರ್ತಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕರಡಕಲ್ ವೀರೇಶ್ ಮಾತನಾಡಿದರು. ಕಸಾಪ ಸಂಘ-ಸಂಸ್ಥೆಗಳ ಪ್ರತಿನಿಧಿ ಸಿದ್ಮಲ್ ಮಂಜುನಾಥ, ಕಸಾಪ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ, ಶಿವಾನಂದ, ನಾಗರಾಜ, ಬೆಣಕಲ್ಲು ಬಸಪ್ಪ, ಕೆ.ಶಿವಶರಣ, ಈ.ಗೋವರ್ಧನರೆಡ್ಡಿ, ಗೋಪಾಲ್, ಶಿವರುದ್ರಯ್ಯ, ಸೋಮಶೇಖರ್, ಪಿ.ಎನ್.ನಾಗರಾಜ್ ಇತರರಿದ್ದರು.

    ಕನ್ನಡಪರ ಹೋರಾಟಗಾರರಾಗಿ ಸೇವೆ
    ಕಂಪ್ಲಿ: ಪಟ್ಟಣದ ಸಾಹಿತ್ಯ ಸಿರಿ ಪ್ರತಿಷ್ಠಾನದ ಕಚೇರಿ ಆವರಣದಲ್ಲಿ ಡಾ.ಚಿದಾನಂದ ಮೂರ್ತಿಗೆ ನುಡಿನಮನ ಸಲ್ಲಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಎಸ್.ಜಿ.ಚಿತ್ರಗಾರ್, ಅಧ್ಯಕ್ಷ ಜಿ.ಪ್ರಕಾಶ್, ಎಸ್.ಡಿ.ಬಸವರಾಜ, ಈರಪ್ಪ ಸೊರಟೂರ, ವೀರಮ್ಮ ನಾಗರಾಜ್, ಎಸ್.ಶ್ಯಾಂಸುಂದರ್, ರುಕ್ಮಣಬಾಬುರಾಜ ಶ್ರೀಖಂಡೆ, ಮಹ್ಮದ್ ಹನೀಫ್, ಎ.ಶಂಕರ್, ರಾಜು ಬಿಲಂಕರ್ ಇತರರಿದ್ದರು. ಪಟ್ಟಣದ ಕನ್ನಡ ಹಿತರಕ್ಷಕ ಸಂಘದ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು. ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಅಧ್ಯಕ್ಷ ಬೂದಗುಂಪಿ ಅಂಬಣ್ಣ, ಮುಖಂಡರಾದ ಜಿ.ಜಿ.ಆನಂದಮೂರ್ತಿ, ಬೂದಗುಂಪಿ ಹುಸೇನ್‌ಸಾಬ್, ಸಿ.ಯಂಕಪ್ಪ, ಕೆ.ಮೆಹಬೂಬ್, ಮಾ.ಶ್ರೀನಿವಾಸ್, ಕ.ಯಂಕಾರೆಡ್ಡಿ, ಕವಿತಾಳ್ ಬಸವರಾಜ್, ಕರೇಕಲ್ ಶಂಕ್ರಪ್ಪ ಇದ್ದರು. ಕುರುಗೋಡಿನ ಸಾಹಿತ್ಯ-ಸಂಸ್ಕೃತಿ ಪ್ರತಿಷ್ಠಾನದ ಕಚೇರಿಯಲ್ಲಿ ಸಂಶೋಧಕ ಎಂ.ಚಿದಾನಂದ ಮೂರ್ತಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಚೇಗೂರು ಷಣ್ಮುಖ, ಸಂಸ್ಥಾಪಕ ಅಧ್ಯಕ್ಷ ವಾಗೀಶ ಕುರುಗೋಡು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts