More

    ಮುಳುಗುತ್ತಿದ್ದ ಫಿಶಿಂಗ್ ಬೋಟ್‌ನಲ್ಲಿದ್ದ ನಾಲ್ವರ ರಕ್ಷಣೆ

    ಭಟ್ಕಳ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್ ಫೈಬರ್ ಹಾರಿ ಹೋಗಿ ಮುಳುಗುತ್ತಿದ್ದ ಫಿಶಿಂಗ್ ಬೋಟ್‌ನಿಂದ ನಾಲ್ವರು ಮೀನುಗಾರರು ಹಾಗೂ ಬೋಟ್ ಅನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಎಳೆದು ತಂದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

    ಭಟ್ಕಳ ಮಾವಿನ ಕುರ್ವೆ ನಿವಾಸಿ ನರಸಿಂಹ ಗೋವಿಂದ ಖಾರ್ವಿ ಎಂಬುವವರ ಫಿಶಿಂಗ್ ಬೋಟ್ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.


    ಬುಧವಾರ ಮೀನುಗಾರಿಕೆಗೆಂದು ತೆರಳಿದ್ದಾಗ ಬೋಟ್ ಫೈಬರ್ ಹಾರಿ ಹೋಗಿತ್ತು. ಇದರಿಂದ ಬೋಟ್‌ನಲ್ಲಿ ನೀರು ಸಂಗ್ರಹವಾಗಿ ಬೋಟ್ ಮುಳುಗವ ಹಂತಕ್ಕೆ ಬಂದಿದೆ. ಪಕ್ಕದಲ್ಲೇ ಮೀನುಗಾರಿಕೆಯಲ್ಲಿ ನಿರತವಾಗಿದ್ದ ಇತರ ಬೋಟ್‌ನವರು ಇದನ್ನು ಗಮನಿಸಿ, ಮೊದಲು ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಿಸಿದ್ದಾರೆ. ಬಳಿಕ ಬೋಟ್ ಅನ್ನು ಎಳೆದು ದಡದಲ್ಲಿ ತಂದು ನಿಲ್ಲಿಸಿದ್ದಾರೆ.


    ಶುಕ್ರವಾರ ಅಮಾವಾಸ್ಯೆ ಇದ್ದುದ್ದರಿಂದ ಬಂದರಿನಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿತ್ತು. ಆಗ ಬಂದರಿನಲ್ಲಿ ಲಂಗರು ಹಾಕಿದ ನರಸಿಂಹ ಖಾರ್ವಿ ಅವರ ಬೋಟ್ ಬುಡಕ್ಕೆ ಬಂದು ಮರಳಿನ ಮೇಲೆ ನಿಂತು ವಾಲಿದೆ. ಸಮುದ್ರ ನೀರು ಏರುತ್ತಿದ್ದಂತೆ ವಾಲಿದ ಬೋಟ್ ನೀರಿನಲ್ಲಿ ಮುಳುಗಿದೆ. ಇದರಿಂದ 6 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
    ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts