More

    ಕರೊನಾ ಸೇನಾನಿಗಳ ಪಟ್ಟಿಗೆ ಹಾಸ್ಟೆಲ್ ಸಿಬ್ಬಂದಿಯನ್ನು ಸೇರಿಸಲು ಮನವಿ

    ಗುಬ್ಬಿ: ಸರ್ಕಾರಿ ಹಾಸ್ಟೆಲ್‌ಗಳ ಕ್ವಾರಂಟೈನ್ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನೂ ಕರೊನಾ ಸೇನಾನಿಗಳಾಗಿ ಘೋಷಿಸಿ ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಬುಧವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಡಾ.ಪ್ರದೀಪ್‌ಕುಮಾರ್‌ಗೆ ಮನವಿ ಪತ್ರ ಸಲ್ಲಿಸಿದರು.

    ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ 50ಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ, ಕಾವಲುಗಾರರು ಹಾಗೂ ವಾರ್ಡನ್‌ಗಳು ಕ್ವಾರಂಟೈನ್ ಕೇಂದ್ರಗಳಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜತೆಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹಾಸ್ಟೆಲ್ ನಿರ್ವಹಣೆಗೆ ನೇಮಿಸಲಾಗಿದೆ. ಅವರನ್ನೂ ಕರೊನಾ ಸೇನಾನಿಗಳ ಪಟ್ಟಿಗೆ ಸೇರಿಸಿ, ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂದು ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣ್ ಒತ್ತಾಯಿಸಿದರು.

    ಕ್ವಾರಂಟೈನ್ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಸರ್ಕಾರ ಮರೆತಿರುವುದು ವಿಷಾದನೀಯ. ಈ ಕೂಡಲೇ ಕರೊನಾ ಸೇನಾನಿಗಳ ಪಟ್ಟಿಯಲ್ಲಿ ಎಲ್ಲ ಹಾಸ್ಟೆಲ್ ಸಿಬ್ಬಂದಿಯನ್ನು ಸೇರಿಸಿ, ವಿಶೇಷ ಭತ್ಯೆ, ಮೃತಪಟ್ಟರೆ ಪರಿಹಾರ ನೀಡಿ ಆತ್ಮಸ್ಥೈರ್ಯ ತುಂಬಬೇಕು ಎಂದು ನೌಕರರ ಸಂದ ತಾಲೂಕು ನಿರ್ದೇಶಕ ರಮೇಶ್ ಮನವಿ ಮಾಡಿದರು.

    ತಾಲೂಕು ಒಬಿಸಿ ಇಲಾಖೆ ವಿಸ್ತರಣಾಧಿಕಾರಿ ಜಯಸಿಂಹ, ವಾರ್ಡನ್‌ಗಳಾದ ಅನಂತಕುವಾರ್, ಪವಿತ್ರಾ, ಭಾಗ್ಯಮ್ಮ, ಸುರೇಶ್ ಕಾರ್ವೆಕರ್, ಮಂಜಮ್ಮ, ಸಿ.ಬಸವರಾಜು, ನರಸಿಂಹಮೂರ್ತಿ, ಮುದ್ದಹನುಮಯ್ಯ, ಗಂಗಾಧರಯ್ಯ, ವಿನಾಯಕ ದೊಡ್ಡಮನಿ, ಲಕ್ಕಪ್ಪ ಸನದಿ, ಹಬೀಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts