More

    ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಶಿಕ್ಷಕರ ಮನವಿ

    ವಿಜಯವಾಣಿ ಸುದ್ದಿಜಾಲ ಗದಗ
    ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಜಿಲ್ಲಾ ಶಿಕ್ಷಕರ ವತಿಯಿಂದ ಸೋಮವಾರ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲಿಸಲಾಯಿತು.
    ಮನವಿ ಸಲ್ಲಿಸಿ ಮಾತನಾಡಿದ ಸಂದ ಅಧ್ಯಕ್ಷ ಎಂ. ಕೆ. ಲಮಾಣಿ, ಉತ್ತರ ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳು, ಮಠಮಾನ್ಯಗಳು ಸರ್ಕಾರದಿಂದ ಅನುಮತಿ ಪಡೆದು ಹಲವು ಶಿಕ್ಷಣ ಸಂಸ್ಥೆಗಳನ್ನು ತೆರೆದು ವಿದ್ಯಾಥಿರ್ಗಳಿಗೆ ಶಿಕ್ಷಣ ನೀಡುತ್ತಿವೆ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿ ವಿದ್ಯಾಥಿರ್ಗಳು, ರಾಜಕೀಯದಲ್ಲಿ, ಸರ್ಕಾರದ ವಿವಿಧ ಉನಗನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ, ಆದರೆ, ಈ ಭಾಗದ ಶಿಕ್ಷಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ. ದಿನಕ್ಕೊಂದು ಅವಥಜ್ಞಾನಿಕ ಆದೇಶಗಳನ್ನು ಹೊರಡಿಸುತ್ತಿರುವ ಸರ್ಕಾರ ಶಿಕರಿಗೆ ತೊಮದರೆ ಕೊಡುತ್ತಿದೆ. ಸರ್ಕಾರಿ, ಖಾಸಗಿ ಶಿಕ್ಷಕರ ಎಂಬ ತಾರತಮ್ಯ ತೋರುತ್ತೊದೆ. ಸಮಾನತೆ ಮರೀಚಿಕೆಯಾಗಿದೆ. ಕನಿಷ್ಠ ವೇತನ ಇಲ್ಲ. ಇನ್ನು ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಸ್ಥಿತಿ ಅದೋಗತಿಗೆ ಸಾಗುತ್ತಿದೆ ಎಂದು ಆರೋಪಿಸಿದರು.
    ಎನ್​ಪಿಎಸ್​ ರದ್ದುಗೊಳಿಸಿ ಓಪಿಎಸ್​ ಕೂಡಲೇ ಜಾರಿಗೆ ತರುವು, ಅನುದಾನಿತ ಶಾಲೆಗಳಲ್ಲಿ ಕಾಲೇಜುಗಳಲ್ಲಿ 2015 ರಿಂದ 2022 ರವರೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡುವುದು. ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ಯೋಜನೆಯನ್ನು ಖಾಸಗಿ ಶಿಕ ಸಿಬ್ಬಂದಿಗೂ ವಿತರಿಸಬೇಕು. ಅನುಮೋದನೆಗೊಂಡಿರುವ 93 ಚಿತ್ರಕಲಾ ಶಿಕರನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸದರು.
    ಸಭಾಪತಿ ಬಸವರಾಜ ಹೊರಟ್ಟೊ ಅವರು ಶಿಕರ ಮನಸ್ಥಿತಿ ಹಾಗೂ ಸಮಸ್ಯೆಗಳನ್ನು ಅರಿತು, ಇಲ್ಲಿನ ಶಿಕ್ಷಕ್ಷ ಸಮಸ್ಯೆ ಬಗೆಹರಿಸಲು ಮತ್ತು ಬೇಡಿಕೆ ಈಡೇರಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ಒತ್ತಾಯಿಸಿದ್ದರು. ಈ ದಿಸೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಮಸ್ಯೆಗೆ ಸ್ಪಂಧಿಸಬೇಕು ಎಂದು ಲಮಾಣಿ ಆಗ್ರಹಿಸಿದರು.
    ಎ. ಎಸ್​. ಪಾಟೀಲ, ಡಿ. ಎನ್​. ಮರಡ್ಡಿ, ನವೀನ ಬಸವರಡ್ಡಿ, ಬಿ. ಕೆ. ಯರಗೊಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts