More

    ಟ್ಯಾಕ್ಸಿಗಳಿಗೂ ಟಕ್ಕರ್ ಕೊಟ್ಟ ಕರೊನಾ

    ಪವನ ದೇಶಪಾಂಡೆ ಕೊಡೇಕಲ್
    ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಎಂಬ ಡಿವಿಜಿ ಅವರ ಮಂಕುತಿಮ್ಮನ ಕಗ್ಗದಂತಾಗಿದೆ ಸಧ್ಯ ಟ್ಯಾಕ್ಸಿ ಚಾಲಕರ ಬದುಕು.

    ಇಡೀ ವಿಶ್ವದ ನಿದ್ದೆಗೆಡಿಸಿರುವ ಕರೊನಾ ಹೆಮ್ಮಾರಿ ಇದೀಗ ಖಾಸಗಿ ವಾಹನಗಳ ಮಾಲೀಕರ (ಚಾಲಕರ)ನ್ನು ಆತಂಕಕ್ಕೆ ದೂಡಿದೆ. ಸರ್ಕಾರ ನಿರುದ್ಯೋಗ ಯುವಕರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಸೇರಿ ವಿವಿಧ ನಿಗಮಗಳಿಂದ ಟ್ಯಾಕ್ಸಿ ಖರೀದಿಗೆ ಸಬ್ಸಿಡಿ ಆಧಾರದ ಮೇಲೆ ಸಾಲದ ವ್ಯವಸ್ಥೆ ಮಾಡಿದೆ. ಆಯಾ ರಾಷ್ಟ್ರೀಕೃತ ಬ್ಯಾಂಕ್ಗಳು ವಾಹನ ಖರೀದಿಗೆ ಸಾಲ ನೀಡುತ್ತವೆ.

    ಹೀಗೆ ಸಾಲ ಪಡೆದುಕೊಂಡು ವಾಹನ ಖರೀದಿಸುವ ಚಾಲಕರು ನಿತ್ಯ ಬಾಡಿಗೆ ಆಧಾರದ ಮೇಲೆ ಟ್ಯಾಕ್ಸಿ ಓಡಿಸಿ ಅದರಿಂದ ಬಂದ ಹಣದಲ್ಲಿ ಪ್ರತಿ ತಿಂಗಳು ಸಾಲದ ಕಂತು ಪಾವತಿಸುತ್ತಿದ್ದಾರೆ. ಆದರೆ ಈ ಕರೊನಾ ವೈರಸ್ ಟ್ಯಾಕ್ಸಿಗಳಿಗೂ ಇದೀಗ ಟಕ್ಕರ್ ಕೊಟ್ಟಿದ್ದು, ಲಾಕ್ಡೌನ್ ಆದೇಶ ಜಾರಿಯಾದ ಹಿನ್ನೆಲೆಯಲ್ಲಿ ಕೊಡೇಕಲ್ ವಲಯದಲ್ಲಿನ ಕಾರುಗಳು ರಸ್ತೆಗಳಿಯುತ್ತಿಲ್ಲ.

    ಕರೊನಾ ವೈರಸ್ನಿಂದ ಬಾಡಿಗೆ ಬರುತ್ತಿಲ್ಲ, ಯಾವುದಾದರೂ ತುರ್ತ ಪರಿಸ್ಥಿತಿ ಸಂದರ್ಭದಲ್ಲಿ ಕರೆದೂ ಪೋಲಿಸ್ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ವಾಹನಗಳನ್ನು ಸೀಜ್ ಮಾಡಿ ಹಾಕಲಾಗುತ್ತಿದೆ. ಪ್ರತಿ ತಿಂಗಳು 10ರಿಂದ 15ರ ಒಳಗಾಗಿ ವಾಹನದ ಲೋನ್ ಕಟ್ಟಬೇಕು. ಇಲ್ಲವಾದಲ್ಲಿ ಇದರ ಬಡ್ಡಿ ದುಪ್ಪಟ್ಟಾಗಿ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಎಂಬ ಆತಂಕ ಸಧ್ಯ ಟ್ಯಾಕ್ಸಿ ಚಾಲಕರದ್ದು, ಒಟ್ಟಾರೆ ಅತ್ತ ಬಾಡಿಗೆಯೂ ಇಲ್ಲ, ಇತ್ತ ನೆಮ್ಮದಿಯೂ ಇಲ್ಲ ಎಂಬಂತಾಗಿದೆ ಚಾಲಕರ ಸ್ಥಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts