More

    ಏಕೀಕರಣಕ್ಕೆ ಶ್ರಮಿಸಿದವರ ಸ್ಮರಣೆ ಎಲ್ಲರ ಕರ್ತವ್ಯ

    ಮುಂಡರಗಿ: ಹಲವರ ತ್ಯಾಗದಿಂದ ಕರ್ನಾಟಕದ ಏಕೀಕರಣದ ಕನಸು ನನಸಾಗಿದೆ. ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಇವರೆಲ್ಲರ ಆಶಯದಂತೆ ಕನ್ನಡತನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಗ್ಗೂಡಿಕೊಂಡು ಕೆಲಸ ಮಾಡುವ ಅಗತ್ಯವಿದೆ ಎಂದು ಡಾ.ಡಿ.ಸಿ. ಮಠ ಹೇಳಿದರು.
    ಪಟ್ಟಣದ ಅನ್ಮೋಲ್ ಯೋಗ ಮತ್ತು ಆಯುರ್ವೆದ ಚಿಕಿತ್ಸಾ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಸಂಭ್ರಮ-50 ಹಾಗೂ ಅನ್ಮೋಲ್ ವರ್ಷದ ಹರ್ಷ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ವೀಣಾ ಪಾಟೀಲ ಮಾತನಾಡಿದರು.
    ಅನ್ಮೋಲ್ ಸಂಸ್ಥೆ ಹಿರಿಯ ಯೋಗ ಸಾಧಕ ಕರಬಸಪ್ಪ ಹಂಚಿನಾಳ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಕಲಾತ್ಮಕ ಯೋಗ ಪ್ರದರ್ಶನಗಳನ್ನು ನಡೆಯಿತು. ನಾಗಪ್ಪ ಇಟಗಿ ಅಧ್ಯಕ್ಷತೆ ವಹಿಸಿದ್ದರು.
    ಸುನಂದಾ ಸಜ್ಜನರ, ಸರೋಜಾ ಹಂಚಿನಾಳ, ಡಾ. ನಿಂಗು ಸೊಲಗಿ, ಸುರೇಶ ಬೆಟಗೇರಿ, ಡಾ. ಜ್ಯೋತಿ ಕೊಪ್ಪಳ, ವಾಸವಿ ಅಬ್ಬಿಗೇರಿ, ಶೃತಿ ಸಜ್ಜನರ, ಪಲ್ಲವಿ ಕೆ.ಎಂ., ಗುರುರಾಜ ಜಿ.ಎಲ್., ಪೂರ್ಣಿಮಾ ತಾವರಗೇರಿ, ಸುರೇಶ ಬೆಟಗೇರಿ, ಹೇಮಾದ್ರಿ ಅಳವಂಡಿ, ಮುತ್ತೇಶ ಮಾಳಾಪುರ ಉಪಸ್ಥಿತರಿದ್ದರು.
    ಸಂಸ್ಥೆಯ ನಿರ್ದೇಶಕಿ ಡಾ.ಮಂಗಳಾ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಡಾ. ಚಂದ್ರಕಾಂತ ಇಟಗಿ ಹಾಗೂ ಸಹನಾ ಶಿದ್ಲಿಂಗ್ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts