More

    ಧಾರ್ಮಿಕ ಕಾರ್ಯಗಳಿಂದ ಬಾಂಧವ್ಯ ಹೆಚ್ಚಳ

    ಗಂಗಾವತಿ: ಸಾಮೂಹಿಕ ಮದುವೆಗಳು ಆರ್ಥಿಕ ಸಂಕಷ್ಟ ದೂರ ಮಾಡಲಿದ್ದು, ಸೌಹಾರ್ದತೆಯನ್ನು ಹೆಚ್ಚಿಸಲಿವೆ ಎಂದು ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿದರು.

    ಇದನ್ನೂ ಓದಿ: ಹಣಕ್ಕಿಂತ ಧಾರ್ಮಿಕ ಸಂಸ್ಕಾರ ಅವಶ್ಯ

    ನಗರದ 31ನೇ ವಾರ್ಡ್ ಹರಿಜನವಾಡಾದ ಶ್ರೀ ಅಖಂಡೇಶ್ವರ ದೇವಿಯ ಜಾತ್ರಾಮಹೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ವಿಶೇಷ ಪೂಜೆ ಮತ್ತು ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಜಾತ್ರೆ ಮತ್ತು ಉತ್ಸವಗಳು ಸಮುದಾಯದ ಬಾಂಧವ್ಯಗಳನ್ನು ಹೆಚ್ಚಿಸುತ್ತಿದೆ. ಲೋಕಕಲ್ಯಾಣಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಪ್ರತಿ ವರ್ಷ ಹಲವು ಕಾರ್ಯಕ್ರಮಗಳು ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದರು.

    ರಾಯಚೂರು ಕೃಷಿ ವಿವಿ ವ್ಯವಸ್ಥಾಪನೆ ಮಂಡಳಿ ಸದಸ್ಯ ಜಿ.ಶ್ರೀಧರ್, ನಗರಸಭೆ ಸದಸ್ಯ ನವೀನ್ ಮಾಲಿ ಪಾಟೀಲ್, ಮಾಜಿ ಅಧ್ಯಕ್ಷೆ ಸಣ್ಣ ಹುಲಿಗೆಮ್ಮ ಕಾಮದೊಡ್ಡಿ, ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ,
    ಮಾಜಿ ಸದಸ್ಯ ಅಕ್ಕಿರೊಟ್ಟಿ ದುರುಗೇಶ, ಮುಖಂಡರಾದ ಹುಲಿಗೇಶ,
    ಎಚ್.ಬಾಲಪ್ಪ ಕಾಮದೊಡ್ಡಿ, ದೇವರಮನಿ, ದೇವಪ್ಪ ಮಾಸ್ತರ್, ಶಿವಕುಮಾರ, ಮಲ್ಲಿಕಾರ್ಜುನ ದೇವರಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts