More

    ಅಲ್ಕೋಹಾಲ್​ ಮಿಶ್ರಿತ ಸ್ಯಾನಿಟೈಸರ್​ ಬಳಕೆಯಿಂದ ಧಾರ್ಮಿಕ ತಾಣಗಳು ಅಪವಿತ್ರ….!

    ನವದೆಹಲಿ: ಅಲ್ಕೋಹಾಲ್​ ಹೊಂದಿದ ಸ್ಯಾನಿಟೈಸರ್​ ಬಳಸಬೇಡಿ. ಇಸ್ಲಾಂನಲ್ಲಿ ಅದಕ್ಕೆ ನಿಷೇಧವಿದೆ ಎಂದು ಭಕ್ತರಿಗೆ ಉತ್ತರಪ್ರದೇಶದ ಬರೇಲಿಯ ದರ್ಗಾವೊಂದು ನಿರ್ದೇಶನ ನೀಡಿದೆ.

    ಸುನ್ನಿ ಮರ್ಕಜ್​ ದಾರೂಲ್​ ಇಫ್ತಾ ದರ್ಗಾದ ಮುಪ್ತಿ ನಷ್ತಾರ್​ ಫಾರೂಖಿ ಇಂಥದ್ದೊಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಇಲ್ಸಾಂನಲ್ಲಿ ಅಲ್ಕೋಹಾಲ್​ಗೆ ನಿಷೇಧವಿದೆ. ಹೀಗಾಗಿ ಅಲ್ಕೋಹಾಲ್​ ಬಳಸಿ ತಯಾರಿಸಿರುವ ಸ್ಯಾನಿಟೈಸರ್​ ಅನ್ನು ಮುಸ್ಲಿಮರು ಉಪಯೋಗಿಸಬಾರದೆಂದು ಹೇಳಿದ್ದಾರೆ.

    ಇದನ್ನೂ ಓದಿ; ಬಿಸಿಲಲ್ಲಿ ಒಣಗೋದಕ್ಕೂ ಕರೊನಾ ತಗಲೋದಕ್ಕೂ ಸಂಬಂಧ ಇದೆ….!

    ಒಂದು ವೇಳೆ ಅಂಥದ್ದೊಂದು ಸ್ಯಾನಿಟೈಸರ್​ ಬಳಸಿದರೆ, ಮಸೀದಿ ಅಪವಿತ್ರವಾಗುತ್ತದೆ. ದೇವರ ಆಲಯವನ್ನು ನಾವು ಅಪವಿತ್ರವಾಗಲು ಬಿಡುವುದಿಲ್ಲ. ಅಲ್ಲದೇ, ಅಪವಿತ್ರವಾದ ಸ್ಥಳದಲ್ಲಿ ನಮಾಜ್​ ಮಾಡುವಂತಿಲ್ಲ. ಇದನ್ನು ತಿಳಿದು ಅಪವಿತ್ರಗೊಳಿಸುವುದು ಪಾಪವಿದ್ದಂತೆ. ಮಸೀದಿಗಳ ಇಮಾಮ್​ಗಳು ಹಾಗೂ ಮಸೀದಿಯ ಸಮಿತಿಗಳಿಗೆ ಇದರಿಂದ ದೂರವಿರುವಂತೆ ತಿಳಿಸಿದ್ದಾಗಿ ಎಂದು ಮುಫ್ತಿ ಹೇಳಿದ್ದಾರೆ. ಅಲ್ಕೋಹಾಲ್​ ಆಧಾರಿತ ಸ್ಯಾನಿಟೈಸರ್​ ಬದಲು, ಸೋಪ್​, ಶಾಂಪೂ, ಸೋಪಿನಪುಡಿ ಬಳಸಬಹುದು ಎಂದು ಪರ್ಯಾಯವನ್ನೂ ಅವರು ಸೂಚಿಸಿದ್ದಾರೆ.

    ಮಥುರಾದ ಕೆಲ ಪ್ರಮುಖ ದೇವಾಲಯಗಳ ಅರ್ಚಕರು ಅಲ್ಕೋಹಾಲ್​ ಹೊಂದಿದ ಸ್ಯಾನಿಟೈಸರ್​ ಬಳಸಲು ನಿರಾಕರಿಸಿದ ಬೆನ್ನಲ್ಲೇ ಮುಫ್ತಿ ಈ ಹೇಳಿಕೆ ನೀಡಿದ್ದಾರೆ. ಇಸ್ಕಾನ್​, ಬಾಂಕೆ ಬಿಹಾರಿ, ಮುಕುಟ್​ ಮುಖಾರವಿಂದ್​, ಶ್ರೀ ರಂಗನಾಥ ದೇಗುಲಗಳಲ್ಲಿ ಇದರ ಬಳಕೆಗೆ ವಿರೋಧ ವ್ಯಕ್ತವಾಗಿದೆ.

    ಇದನ್ನೂ ಓದಿ; ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ

    ಅಲ್ಕೋಹಾಲ್​ ಆಧಾರಿತ ಸ್ಯಾನಿಟೈಸರ್​ ಬಳಕೆ ಕಡ್ಡಾಯವೆಂದು ಸರ್ಕಾರ ಘೋಷಿಸಿದ ಹಿನ್ನೆಲೆಯಲ್ಲಿ ದೇಗುಲದ ಬಾಗಿಲು ತೆರೆಯದಿರಲು ವೃಂದಾವನದಲ್ಲಿ ನಿರ್ಧರಿಸಲಾಗಿದೆ.

    ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts