More

    ಮರಳುಗಾರಿಕೆ ವಿರೋಧಿಸಿ ಪ್ರತಿಭಟನೆ

    ಗುತ್ತಲ: ಹಟ್ಟಿ ಚಿನ್ನದ ಗಣಿ ಸಂಸ್ಥೆಗೆ ಹಾವನೂರ ಗ್ರಾಮದಲ್ಲಿ ಗುತ್ತಿಗೆ ನೀಡಲಾದ ಮರಳು ಗಣಿಗಾರಿಕೆ ವಿರೋಧಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
    ಪ್ರತಿಭಟನಾಕಾರರು ಮಾತನಾಡಿ, ಈಗಾಗಲೇ ಸರ್ಕಾರ ಗುರ್ತಿಸಿರುವ ಹಾವನೂರ ಗ್ರಾಮದ ತುಂಗಭದ್ರಾ ನದಿ ಪ್ರದೇಶದಲ್ಲಿ ಮರಳು ಗಣಿಗಾರಿಕೆ ಬೇಡ. ಗ್ರಾಮದ ಬೇರೆಡೆಗೆ ಮರಳು ಗಣಿಗಾರಿಕೆ ಮಾಡಲು ನಮ್ಮ ಅಭ್ಯಂತರ ಇಲ್ಲ. ಈವರೆಗೂ ಇಲ್ಲಿ ಮರಳನ್ನು ತೆಗೆಯಲು ಬಿಟ್ಟಿಲ್ಲ. ಈಗ ಸರ್ಕಾರ ಮರಳು ಗಣಿಗಾರಿಕೆಗೆ ಗುತ್ತಿಗೆ ನೀಡಿದೆ ಎಂದು ಇಲ್ಲಿ ಮರಳು ಗಣಿಗಾರಿಕೆ ಮಾಡಲು ಬಂದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
    ಇಲ್ಲಿ ಗಣಿಗಾರಿಕೆ ಮಾಡಿದರೆ ಜಾನುವಾರುಗಳು, ಪ್ರತಿ ಅಮಾವಾಸ್ಯೆ ಹಾಗೂ ಜಾತ್ರೆಗೆ ಬರುವ ಗ್ರಾಮದೇವತೆ ಭಕ್ತರಿಗೆ ತೊಂದರೆಯಾಗುತ್ತದೆ. ಈ ಪ್ರದೇಶದಲ್ಲಿ ಜಾತ್ರೆ ವೇಳೆ ಸಾವಿರಾರು ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡುತ್ತಾರೆ. ಅಲ್ಲದೆ, ಸಂಕ್ರಾಂತಿ ಸಮಯದಲ್ಲೂ ವಿವಿಧ ಗ್ರಾಮಗಳ ಜನರು ಆಗಮಿಸುತ್ತಾರೆ. ಗಣಿಗಾರಿಕೆ ಮಾಡಿ ಬೃಹತ್ ಗುಂಡಿಗಳು ನಿರ್ಮಾಣವಾಗಿ ಜನರು ಮುಳುಗಿ ಮೃತಪಟ್ಟರೆ ಯಾರು ಹೊಣೆ ? ಎಂದ ಗ್ರಾಮಸ್ಥರು ಪ್ರಶ್ನಿಸಿದರು.
    ತಹಸೀಲ್ದಾರ್ ಶಂಕರ ಜಿ.ಎಸ್. ಮಾತನಾಡಿ, ಇಲ್ಲಿ ಸರ್ಕಾರದಿಂದ ಮರಳು ಗಣಿಗಾರಿಕೆ ನಡೆಸಲು ಅನೇಕ ಬಾರಿ ಸಭೆಗಳಾಗಿವೆ. ಸರ್ಕಾರ ಸ್ವಾಯತ್ತ ಸಂಸ್ಥೆಯಾದ ಹಟ್ಟಿ ಚಿನ್ನದ ಗಣಿಗೆ ಇಲ್ಲಿ ಮರಳು ಗಣಿಗಾರಿಕೆ ಮಾಡಲು ಅನುಮತಿ ನೀಡಿದೆ. ನೀವು ವಿರೋಧ ಮಾಡುವುದ ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವೆ ಎಂದರು. ಅದಕ್ಕೆ ಜಿಲ್ಲಾಧಿಕಾರಿಗಳನ್ನು ಹಾವನೂರ ಗ್ರಾಮಕ್ಕೆ ಕರೆಸಿ ನಾವೆಲ್ಲರೂ ಅವರಿಗೆ ಇಲ್ಲಿ ಗಣಿಗಾರಿಕೆ ಬೇಡವೆಂದು ಮನವರಿಕೆ ಮಾಡುತ್ತೇವೆ ಎಂದರು.
    ಆಗ ತಹಸೀಲ್ದಾರ್ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ನಿಮಗೆ ತಿಳಿಸುತ್ತೇವೆ. ಸದ್ಯ ಈಗ ಗಣಿಗಾರಿಕೆಯನ್ನು ನಿಲ್ಲಿಸುತ್ತೇವೆ’ ಎಂದು ಭರವಸೆ ನೀಡಿದರು. ಬಳಿಕ ಅಲ್ಪ ಪ್ರಮಾಣದಲ್ಲಿ ಗಣಿಗಾರಿಕೆ ಮಾಡಿದ್ದ ನಾಲ್ಕೈದು ಗುಂಡಿಗಳನ್ನು ಜೆಸಿಬಿ ಯಂತ್ರದಿಂದ ಮುಚ್ಚಲಾಯಿತು.
    ಗ್ರಾಪಂ ಸದಸ್ಯ ಗೋಪಾಲ ಗೊಣ್ಣಿ, ಶಾಂತಪ್ಪ ಗೊಣ್ಣಿ,, ಭೋಜಪ್ಪ ತೇಜಪ್ಪನವರ, ಗಣೇಶ ಕೆಂಗನಿಂಗಪ್ಪನವರ, ಕವಿತಾ ಕೆಂಗನಿಂಗಪ್ಪನವರ, ಪರಶುರಾಮ ಮಲಿಯನ್ನನವರ, ಮಾಲತೇಶ ಉದಗಟ್ಟಿ, ಹೊನ್ನಮ್ಮ ಬುಳ್ಳಬುಳ್ಳಿ, ನಿಂಗಪ್ಪ ಕೆಂಗನಿಂಗಪ್ಪನವರ, ದುರಗಪ್ಪ ಉದಗಟ್ಟಿ, ಅಭಿಷೇಕ ಬೆಂಡಿಗೇರಿ, ಉದಯ ಜೋಗ, ಶಿವನಗೌಡ ಗೌಡಪ್ಪನವರ, ನಿಂಗರಾಜ ಚಾವಡಿ, ಬಸವರಾಜ ದೊಡ್ಡಿರಪ್ಪನವರ, ನಿಂಗಮ್ಮ ಗೊಣ್ಣಿ, ಅಕ್ಕಮ್ಮ ಗೊಣ್ಣಿ, ಗಂಗವ್ವ ಬನ್ನಿಮಟ್ಟಿ, ಗಂಗವ್ವ ಮಟ್ಟಿ, ಲೆಕ್ಕವ್ವ ಕತ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
    ತಹಸೀಲ್ದಾರ್ ಶಂಕರ ಜಿ.ಎಸ್., ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಡಿ.ಎಚ್. ಷಣ್ಮುಖಪ್ಪ, ಪಿಎಸ್‌ಐ ಶಂಕರಗೌಡ ಪಾಟೀಲ, ಉಪತಹಶೀಲ್ದಾರ್ ಎಂ.ಡಿ. ಕಿಚಡೇರ, ಭೂ ವಿಜ್ಞಾನಿ ಬಿ. ಕುಮಾರ ನಾಯ್ಕ, ಶಬ್ಬೀರ ಅಹ್ಮದ ದಿಡಗೂರ, ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ಗ್ರಾಮ ಲೆಕ್ಕಿಗರಾದ ಪ್ರಕಾಶ ಉಜ್ಜನಿ, ಪ್ರಶಾಂತ ಸ್ಥಳದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts