More

    ರಿಲಯನ್ಸ್​ ಇಂಡಸ್ಟ್ರೀಸ್​ ಈಗ ಸಂಪೂರ್ಣ ಸಾಲಮುಕ್ತ

    ಮುಂಬೈ: ಮುಖೇಶ್​ ಅಂಬಾನಿ ನೇತೃತ್ವದ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ (ಆರ್​ಐಎಲ್​) ಇದೀಗ ಸಂಪೂರ್ಣ ಸಾಲಮುಕ್ತವಾಗಿರುವುದಾಗಿ ಶುಕ್ರವಾರ ಘೋಷಿಸಲಾಗಿದೆ. ಕಂಪನಿಯನ್ನು ಸಾಲಮುಕ್ತಗೊಳಿಸಲು ವಿಧಿಸಿಕೊಂಡಿದ್ದ ಗಡವಿನೊಳಗೆ ಈ ಕಾರ್ಯಸಾಧನೆ ಮಾಡಿದ್ದಾಗಿ ಆರ್​ಐಎಲ್​ ಹೆಮ್ಮೆಪಟ್ಟುಕೊಂಡಿದೆ.

    ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮುಖೇಶ್​ ಅಂಬಾನಿ, 2021ರ ಮಾರ್ಚ್​ 31ಕ್ಕೂ ಮುನ್ನ ಕಂಪನಿಯನ್ನು ಸಾಲಮುಕ್ತಗೊಳಿಸುವುದಾಗಿ ಷೇರುದಾರರಿಗೆ ಮಾತುಕೊಟ್ಟಿದೆ. ಆ ಅವಧಿಗಿಂತಲೂ ಮುನ್ನವೇ ಈ ಕಾರ್ಯಸಾಧನೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಲೇಹ್​ ಮತ್ತು ಶ್ರೀನಗರ ನೆಲೆಗಳಿಗೆ ಯುದ್ಧವಿಮಾನಗಳನ್ನು ರವಾನಿಸಿದ ಭಾರತ

    ವಾಸ್ತವವಾಗಿ 2019ರ ಆಗಸ್ಟ್​ 12ರಂದು ನಿಗದಿಯಾಗಿರುವ ಕಂಪನಿಯ 42ನೇ ಸರ್ವಸದಸ್ಯರ ಸಾಮಾನ್ಯ ಸಭೆಗೂ ಮುನ್ನ ಕಂಪನಿಯನ್ನು ಸಾಲಮುಕ್ತಗೊಳಿಸುವುದಾಗಿ ಮುಖೇಶ್​ ಅಂಬಾನಿ ಘೋಷಿಸಿದ್ದರು.

    ಕೇವಲ 58 ದಿನಗಳ ಒಳಗಾಗಿ ಆರ್​ಐಎಲ್​ ವಿವಿಧ ಹೂಡಿಕೆದಾರರ ಮೂಲಕ 1,68,818 ಕೋಟಿ ರೂ. ಹೂಡಿಕೆಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಫೇಸ್​ಬುಕ್​, ಸಿಲ್ವರ್​ ಲೇಕ್​, ವಿಸ್ಟಾ ಈಕ್ವಿಟಿ ಪಾರ್ಟನರ್ಸ್​, ಜನರಲ್​ ಅಟ್ಲಾಂಟಿಕ್​, ಕೆಕೆಆರ್​. ಮುಬಡಾಲಾ, ಎಡಿಐಎ, ಟಿಪಿಜಿ, ಎಲ್​ ಕ್ಯಾಟರ್​ಟನ್​ ಮತ್ತು ಪಿಐಎಫ್​ನಂಥ ಜಾಗತಿಕ ಹೂಡಿಕೆದಾರರ ಮೂಲಕ ರಿಲಯನ್ಸ್​ ಜಿಯೋ ಪ್ಲಾಟ್​ಫಾರಂಗೆ 1,15,693 ಕೋಟಿ ರೂ. ಹೂಡಿಕೆ ಹರಿದುಬಂದಿದ್ದರೆ, ಷೇರುಗಳ ಮಾರಾಟದಿಂದ 53,124.20 ಕೋಟಿ ರೂ. ಬಂಡವಾಳ ಕ್ರೋಢಿಕರಣಗೊಂಡಿದೆ. ಬಿಪಿಗೆ ಮಾರಾಟ ಮಾಡಿರುವ ಷೇರ್​ ಅನ್ನು ಲೆಕ್ಕಹಾಕುವುದಾದರೆ ಒಟ್ಟಾರೆ 1.75 ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದುಬಂದಂತಾಗುತ್ತದೆ.

    ಬಾಲಿವುಡ್​ನಲ್ಲಿ ಸಿನಿಮಾ ಆಗ್ತಿದೆ ಸುಶಾಂತ್​ ಆತ್ಮಹತ್ಯೆ ಪ್ರಕರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts