More

    2,850 ಕೋಟಿ ರೂಪಾಯಿಗೆ ‘ಮೆಟ್ರೋ’ ಖರೀದಿಸಿದ ರಿಲಾಯನ್ಸ್​ ಇಂಡಸ್ಟ್ರೀಸ್​

    ನವದೆಹಲಿ: ದೇಶದ ಅತಿ ದೊಡ್ಡ ಹೋಲ್​ಸೇಲ್​ ಮತ್ತು ಫುಡ್​ ರೀಟೈಲ್​ ಸಂಸ್ಥೆ ‘ಮೆಟ್ರೋ ಕ್ಯಾಶ್​ ಆ್ಯಂಡ್​ ಕ್ಯಾರಿ’ ಅನ್ನು 2,850 ಕೋಟಿ ರೂಪಾಯಿಗೆ ಮುಖೇಶ್​ ಅಂಬಾನಿ ಒಡೆತನದ ರಿಲಾಯನ್ಸ್​ ಇಂಡಸ್ಟ್ರೀಸ್​ ಅಧೀನ ಸಂಸ್ಥೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಖರೀದಿಸಿದೆ.

    ಚಿಲ್ಲರೆ ಉದ್ಯಮದಲ್ಲಿ ಆಕ್ರಮಣಕಾರಿ ದಾಪುಗಾಲು ಹಾಕುತ್ತಿರುವ ಜರ್ಮನ್ ಮೂಲದ ಚಿಲ್ಲರೆ ವ್ಯಾಪಾರಿ ಮೆಟ್ರೋ ಎಜಿ ಒಡೆತನದ ಭಾರತೀಯ ಘಟಕಗಳು ಇನ್ಮುಂದೆ ಮುಖೇಶ್​ ಅಂಬಾನಿ ಒಡೆತನದಲ್ಲಿ ಇರಲಿವೆ.

    2003ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಮೆಟ್ರೋ ಹೋಲ್​ಸೇಲ್​ ಮಳಿಗೆಗಳು ಸಕ್ರಿಯವಾಗಿವೆ. ರೆಸ್ಟೋರೆಂಟ್‌ಗಳು ಮತ್ತು ದಿನಸಿ ಅಂಗಡಿಗಳಿಗೆ ಅಗತ್ಯ ವಸ್ತು ಪೂರೈಕೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಎಲೆಕ್ಟ್ರಾನಿಕ್ಸ್, ದಿನಸಿ ಮತ್ತು ಫ್ಯಾಶನ್ ಪರಿಕರ ಮಾರುಕಟ್ಟೆಯಲ್ಲೂ ಮುಂಚೂಣಿಯಲ್ಲಿರುವ ರಿಲಾಯನ್ಸ್​, ಇದೀಗ ಚಿಲ್ಲರೆ ಉದ್ಯಮಕ್ಕೂ ಕಾಲಿಟ್ಟಿದೆ.

    ಬೆಂಗಳೂರು ಸೇರಿದಂತೆ ದೇಶದ 21 ನಗರಗಳಲ್ಲಿ 31 ಮೆಟ್ರೋ ಹೋಲ್​ಸೇಲ್​ ಮಳಿಗೆಗಳಿವೆ. ಸುಮಾರು 3500 ಉದ್ಯೋಗಿಗಳಿದ್ದಾರೆ. (ಏಜೆನ್ಸೀಸ್​)

    ಗದಗದಲ್ಲಿ ಶಿಕ್ಷಕನಿಂದಲೇ ಮಗನ ಕೊಲೆ: ಚಿಕಿತ್ಸೆ ಫಲಿಸದೆ ಅತಿಥಿ ಶಿಕ್ಷಕಿ ಗೀತಾ ಬಾರಕೇರ್ ಸಾವು

    ಇಮ್ರಾನ್ ಖಾನ್ ಆಡಿಯೋ ಲೀಕ್​: ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts