More

    ಸಾಂಕ್ರಾಮಿಕದಲ್ಲಿ ಲಾಭ ಗಳಿಸುವುದು ಹೇಗೆ ಎಂದು ಶ್ವೇತಪತ್ರ ಪ್ರಕಟಿಸಿ: ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಟಾಂಗ್

    ನವದೆಹಲಿ : ಪಂಜಾಬ್​ ಮತ್ತು ರಾಜಸ್ಥಾನದ ಕಾಂಗ್ರೆಸ್​ ಸರ್ಕಾರಗಳ ಅನುಭವವನ್ನು ಆಧರಿಸಿ, ಸಾಂಕ್ರಾಮಿಕದ ಸಮಯದಲ್ಲಿ ಹೇಗೆ ಲಾಭ ಗಳಿಸಬಹುದು ಎಂಬ ಬಗ್ಗೆ ರಾಹುಲ್​ ಗಾಂಧಿ ಅವರು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಬಿಜೆಪಿಯ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವೀಯ ಅವರು ವ್ಯಂಗ್ಯವಾಡಿದ್ದಾರೆ.

    ಪಂಜಾಬ್​ ಸರ್ಕಾರವು ಕೇಂದ್ರ ನೀಡಿದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಬೆಲೆಯಲ್ಲಿ ಮಾರಿಕೊಂಡಿತು. ರಾಜಸ್ಥಾನದಲ್ಲಿ ಲಸಿಕೆಗಳನ್ನು ಕಸಕ್ಕೆ ಹಾಕಿದರು, ನಂತರ ಸಾವಿನ ಸಂಖ್ಯೆಗಳನ್ನು ಮುಚ್ಚಿಟ್ಟರು. ಈಗ ಆಕ್ಸಿಜನ್ ಕಾನ್ಸಂಟ್ರೇಟರ್​ಗಳ ಖರೀದಿಯಲ್ಲಿ ಭರಪೂರವಾಗಿ ಅಕ್ರಮ ಎಸಗಿದ್ದಾರೆ ಎಂದು ಮಾಳವೀಯ ಅವರು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಇಬ್ಬರು ಸ್ವಾಮೀಜಿಗಳ ವಿರುದ್ಧ ಎಚ್​.ಡಿ.ಕುಮಾರಸ್ವಾಮಿ ಸಿಡಿಮಿಡಿ!

    ರಾಜಸ್ಥಾನ ಸರ್ಕಾರ ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ಖಾಸಗಿ ಕಂಪೆನಿಗಳಿಂದ ಬಹುಪಟ್ಟು ಹೆಚ್ಚು ಬೆಲೆಯಲ್ಲಿ ಖರೀದಿಸಿರುವ ಬಗೆಗಿನ ಪತ್ರಿಕಾ ವರದಿಯೊಂದನ್ನು ತಮ್ಮ ಟ್ವೀಟ್​ಗೆ ಅಟ್ಯಾಚ್​ ಮಾಡಿರುವ ಮಾಳವೀಯ ಅವರು, “ರಾಜಸ್ಥಾನ ಸರ್ಕಾರವು ದಲ್ಲಾಳಿಗಳ ಮೂಲಕ ಖಾಸಗಿ ಕಂಪನಿಗಳಿಂದ 20,000 ಕಾನ್ಸಂಟ್ರೇಟರ್​ಗಳನ್ನು ಖರೀದಿಸಿದೆ. ಕೇವಲ 35 ರಿಂದ 40 ಸಾವಿರ ರೂಪಾಯಿ ಬೆಲೆಯ ಕಾನ್ಸಂಟ್ರೇಟರ್​ಗೆ ಒಂದು ಲಕ್ಷದವರೆಗೆ ಹಣ ಕೊಟ್ಟು ಖರೀದಿಸಲಾಗಿದೆ. ಬಹುಪಾಲು ಉಪಕರಣಗಳನ್ನು ಕರೊನಾ ಪೀಕ್ ಮುಗಿದು ಒಂದು ತಿಂಗಳ ನಂತರ ಖರೀದಿಸಲಾಗಿದೆ. ಈಗ ಅವೆಲ್ಲಾ ಕಬಾಡ್​​ನಲ್ಲಿ ಬಿದ್ದಿವೆ” ಎಂದಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ, ‘ಸಾಂಕ್ರಾಮಿಕದ ಸಂದರ್ಭದಲ್ಲಿ ಹೇಗೆ ಲಾಭಕೋರತನ ಮಾಡಬಹುದು’ ಎಂಬುದರ ಕುರಿತು ‘ಶ್ವೇತಪತ್ರ’ವನ್ನು ಬಿಡುಗಡೆ ಮಾಡಿ ಎಂದಿರುವ ಮಾಳವೀಯ, ಕಾಂಗ್ರೆಸ್ ಎಲ್ಲೆಡೆ ಭೀತಿಯನ್ನು ಸೃಷ್ಟಿಸುತ್ತಿರುವುದಕ್ಕೆ ಇದೇ ಕಾರಣವೇ ? ಎಂದು ಪ್ರಶ್ನಿಸಿದ್ದಾರೆ.

    ಸಂಚಾರಿ ವಿಜಯ್​ ಅಪಘಾತ: ಆ ರಾತ್ರಿಯ ಘಟನಾವಳಿ ಬಿಚ್ಚಿಟ್ಟ ಬೈಕ್​ ಸವಾರ ನವೀನ್

    ದೊಣ್ಣೆ, ಕತ್ತಿ ಝಳಪಿಸಿದ ಮದುವೆ ಹೆಣ್ಣು! …ಚಕಿತರಾದ ಬಂಧುಬಳಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts