More

    ಕರವೇ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿ

    ಹೂವಿನಹಿಪ್ಪರಗಿ: ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ ಕರವೇ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಗ್ರಾಮದ ಪರಮಾನಂದ ವೃತ್ತದಲ್ಲಿ ಕರವೇ ಕಾರ್ಯಕರ್ತರು ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

    ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ಕನ್ನಡನಾಡು, ಜಲ, ಭಾಷೆ, ಗಡಿ ಹೀಗೆ ಹಲವಾರು ವಿಷಯಗಳಿಗೆ ಅನ್ಯಾಯವಾದಾಗ ಪ್ರಥಮವಾಗಿ ಧ್ವನಿ ಎತ್ತುವ ಸಂಘಟನೆ ಟಿ.ಎ. ನಾರಾಯಣಗೌಡರ ನೇತೃತ್ವದ ಕರವೇ. ರಾಜಧಾನಿ ಬೆಂಗಳೂರಿನಿಂದ ರಾಜ್ಯದಲ್ಲಿ ಎಲ್ಲ ಹೋಟೆಲ್, ಮಾಲ್ ಸೇರಿ ವಿವಿಧ ಅಂಗಡಿಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು ಎಂದು ಮುನ್ನೆಚರಿಕೆ ಕೊಟ್ಟರೂ ಸಹ ಬೆಂಗಳೂರಿನಲ್ಲಿ ಅನ್ಯಭಾಷಿಕ ವ್ಯಾಪಾರಸ್ಥರು ಕ್ಯಾರೆ ಎನ್ನುತ್ತಿರಲಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಯಿತು. ಇದು ತಪ್ಪೇ, ನಾವೇನು ಹೊರರಾಜ್ಯದಲ್ಲಿದ್ದೇವಾ. ನಮ್ಮ ನಾಡಿನಲ್ಲಿಯೇ ನಮ್ಮ ಭಾಷೆಗೆ ಹೋರಾಡಿದ 14 ಜನರನ್ನು ಬಂಧಿಸಿರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಕರವೇ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು ಇಲ್ಲವಾದರೆ ಮತ್ತಷ್ಟು ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಬಿ.ಬಿ. ಕಮತ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

    ಕರವೇ ಜಿಲ್ಲಾ ಉಪಾಧ್ಯಕ್ಷ ಕಲ್ಲು ಸೂನ್ನದ, ಸಿದ್ದು ಮೇಟಿ, ಆನಂದ ಕಾಖಂಡಕಿ, ಈರಯ್ಯಸ್ವಾಮಿ ಹಿರೇಮಠ, ಗುರುಲಿಂಗ ಬಸರಕೋಡ, ಗುರುರಾಜ ವಂದಾಲ, ವಿಜಯರೆಡ್ಡಿ ನಾಡಗೌಡ, ಮಲ್ಲು ಹೂಗಾರ, ಪ್ರದೀಪ ಗೊಳಸಂಗಿ, ರಾಜಶೇಖರ ಬಿಂಜಲಬಾವಿ, ಸಿದ್ದಾರೂಢ ಗುಂಡಾನವರ, ಅಭಿಷೇಕ ಚೌದ್ರಿ, ಶ್ರೀಶೈಲ ಗೊಳಸಂಗಿ, ಶೇಖು ತಮದಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts