More

    ಗ್ರಂಥಗಳ ಬಿಡುಗಡೆ, ಸನ್ಮಾನ ಸಮಾರಂಭ 8ರಂದು

    ಧಾರವಾಡ: ನಗರದ ಪ್ರೊ. ಬಸವರಾಜ ಡೋಣೂರ ಸನ್ಮಾನ ಸಮಾರಂಭ ಸಮಿತಿ ಧಾರವಾಡ ಕಟ್ಟೆ ಮತ್ತು ಬೆಂಗಳೂರಿನ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಆಶ್ರಯದಲ್ಲಿ ವಿಚಾರ ಸಂಕಿರಣ, ಗ್ರಂಥಗಳ ಬಿಡುಗಡೆ ಮತ್ತು ಸನ್ಮಾನ ಸಮಾರಂಭವನ್ನು ಅ. 8ರಂದು ಸಂಜೆ 5ಕ್ಕೆ ಇಲ್ಲಿನ ಆಲೂರ ವೆಂಕಟರಾವ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಡಾ. ಡಿ.ಎಂ. ಹಿರೇಮಠ ಹೇಳಿದರು.
    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಚಿಂತಕ ಅರವಿಂದ ದೇಶಪಾಂಡೆ, ರಾಷ್ಟಿçÃಯ ಸ್ವಾಭಿಮಾನಿ ಪರಿಷತ್ ಸಂಘಟನಾ ಕಾರ್ಯದರ್ಶಿ ಬಸವರಾಜ ಪಾಟೀಲ, ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಮನು ಬಳಿಗಾರ, ಅರುಣ ಶಹಪುರ, ಸಂಗಮೇಶ ಬಬಲೇಶ್ವರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
    ಕತೆಗಾರ ಡಾ. ಚನ್ನಪ್ಪ ಕಟ್ಟಿ, ವಿಶ್ರಾಂತ ಪ್ರಾಚಾರ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅಭಿನಂದನಾಪರ ಮಾತನಾಡುವರು. ಹಿರಿಯ ಕವಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಪ್ರೊ. ಗಣೇಶ ಪವಾರ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದರು.
    ಇದಕ್ಕೂ ಮೊದಲು ಬೆಳಗ್ಗೆ 9ಕ್ಕೆ ಡೋಣೂರರ ಸಾಹಿತ್ಯ ವಿಮರ್ಶೆ',ಡೋಣೂರರ ಅನುವಾದ ಮತ್ತು ಸಂಪದನಾ ಸಾಹಿತ್ಯ’ ಕುರಿತು ಗೋಷ್ಠಿಗಳು ನಡೆಯಲಿವೆ. ಮಧ್ಯಾಹ್ನ 12ರಿಂದ ಡೋಣೂರರ ಕಥಾ ಸಾಹಿತ್ಯ',ಡೋಣೂರರ ಕಾದಂಬರಿ’, ಡೋಣೂರರ ಕಾವ್ಯ' ಕುರಿತು ಗೋಷ್ಠಿಗಳು ಜರುಗಲಿವೆ. ಮಧ್ಯಾಹ್ನ 1.30ರಿಂದಡೋಣೂರರ ವ್ಯಕ್ತಿತ್ವ ಮತ್ತು ಕರ್ತೃತ್ವ’ ವಿಷಯ ಕುರಿತು ಗೋಷ್ಠಿ ನಡೆಯಲಿದೆ. ಕಾದಂಬರಿಕಾರ ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸುವರು ಎಂದರು.
    ವಿ.ಎಸ್. ಕಟಗಿಹಳ್ಳಿಮಠ, ಗಣೇಶ ಪವಾರ, ಡಿ.ಜಿ. ಹಾಜವಗೋಳ, ಮುಕುಂದ ಲಮÁಣಿ, ಶ್ರೀನಿವಾಸ ಸೂರಟೂರ, ಪ್ರಭಾಕರ ಕಾಂಬಳೆ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts