More

    ಅಗ್ನಿಪಥ ನೇಮಕಾತಿಗೆ 58,218 ಅಭ್ಯರ್ಥಿಗಳ ನೋಂದಣಿ

    ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 1ರಿಂದ 20ರವರೆಗೆ ನಡೆಸಲು ಉದ್ದೇಶಿಸಿರುವ ಅಗ್ನಿಪಥ ನೇಮಕಾತಿಗೆ ರಾಜ್ಯದ 11 ಜಿಲ್ಲೆಗಳಿಂದ 58,218 ಜನರು ಭಾಗವಹಿಸಲಿದ್ದಾರೆ.
    ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಈಗಾಗಲೇ 58,218 ಜನರು ನೋಂದಾಯಿಸಿಕೊಂಡಿದ್ದು, ಪ್ರತಿದಿನ 2,500ರಿಂದ 3 ಸಾವಿರ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಎತ್ತರ, ಓಟ, ದೈಹಿಕ ಸಾಮರ್ಥ್ಯ ಹಾಗೂ ವೈದ್ಯಕೀಯ ಪರೀಕ್ಷೆಗಳು ಇಲ್ಲಿ ನಡೆಯಲಿವೆ.
    ನಗರದಲ್ಲಿ ಆಯೋಜಿಸಿರುವ ನೇಮಕಾತಿ ರ್ಯಾಲಿಯಲ್ಲಿ ಜೆಡಿ ಹುದ್ದೆಗೆ ಬಾಗಲಕೋಟ ಜಿಲ್ಲೆಯಿಂದ ಅತಿ ಹೆಚ್ಚು 14,006, ವಿಜಯಪುರ- 9,794, ಧಾರವಾಡ-7707, ಉತ್ತರ ಕನ್ನಡ 4,333, ಗದಗ-4327, ಹಾವೇರಿ-4,217, ಶಿವಮೊಗ್ಗ-2,130, ದಾವಣಗೆರೆ-1,411, ದಕ್ಷಿಣ ಕನ್ನಡ-1,270, ಚಿಕ್ಕಮಗಳೂರು-977, ಉಡುಪಿ ಜಿಲ್ಲೆಯಿಂದ 587 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನಿತರೆ ಹುದ್ದೆಗಳಿಗೆ 11 ಜಿಲ್ಲೆಗಳಿಂದ 7,459 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
    ಅಗ್ನಿಪಥ ನೇಮಕಾತಿಗೆ ಜಿಲ್ಲಾಡಳಿತವು ಸಕಲ ಸಿದ್ಧತೆ ಕೈಗೊಳ್ಳುತ್ತಿದ್ದು, ಮಂಗಳವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ್ ರೋಷನ್ ಅವರೊಂದಿಗೆ ಸೇನಾ ನೇಮಕಾತಿ ನಿರ್ದೇಶಕ ಕರ್ನಲ್ ಅನುಜ್ ಗುಪ್ತಾ ಅವರು ಚರ್ಚೆ ನಡೆಸಿದ್ದಾರೆ.
    ಅಗ್ನಿವೀರರ ನೇಮಕಾತಿ ರ‍್ಯಾಲಿ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ವಿವಿಧ ಅಧಿಕಾರಿಗಳನ್ನು ನಿಯೋಜಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ.
    ನೋಡಲ್, ಲೈಸನ್ ಅಧಿಕಾರಿ ನೇಮಕ: ಹಾವೇರಿ ನಗರದಲ್ಲಿ ನಡೆಯುವ ಅಗ್ನಿಪಥ ಮೇಳದ ಉಸ್ತುವಾರಿಗೆ ನೋಡಲ್ ಅಧಿಕಾರಿಗಳಾಗಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಹಾಗೂ ಸೇನಾಧಿಕಾರಿಗಳಿಗೆ ಮಾಹಿತಿ ಒದಗಿಸಲು ಲೈಸನ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಕೆ.ಎನ್., ಅವರನ್ನು ನೇಮಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts