More

    ನೋಂದಣಿ ಅವಧಿ ವಿಸ್ತರಣೆ – ಡಾ. ಎಸ್.ಬಿ. ಬೊಮ್ಮನಹಳ್ಳಿ

    ಬೆಳಗಾವಿ: ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿಸಲು ನೋಂದಣಿ, ಖರೀದಿ ಕಾಲಾವಧಿ ಹಾಗೂ ಖರೀದಿ ಪ್ರಮಾಣ ಹೆಚ್ಚಿಸಲಾಗಿದೆ ಎಂದು ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

    ಗೋಕಾಕ, ಅಥಣಿ ತಾಲೂಕಿನ ಅಥಣಿ, ತೆಲಸಂಗ ಮತ್ತು ಕನ್ನಾಳಗಳಲ್ಲಿ, ರಾಮದುರ್ಗ ತಾಲೂಕಿನ ರಾಮದುರ್ಗ, ಹುಲಕುಂದ, ಸವದತ್ತಿ ತಾಲೂಕಿನ ಸವದತ್ತಿ ಮತ್ತು ಮುರಗೋಡ, ಬೈಲಹೊಂಗಲ ತಾಲೂಕಿನ ಬೈಲಹೊಂಗಲ ಮತ್ತು ದೊಡವಾಡ ಗ್ರಾಮಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ಕಡಲೆ ಕಾಳು ಖರೀದಿಸಲಾಗುತ್ತಿದೆ.

    ಈ ಹಿಂದೆ ಪ್ರತಿ ರೈತರಿಂದ ಪ್ರತಿ ಎಕರೆಗೆ 3 ಕ್ವಿಂಟಾಲ್‌ನಂತೆ, ಗರಿಷ್ಠ 10 ಕ್ವಿಂಟಾಲ್ ಕಡಲೆ ಖರೀದಿ ಮಾಡಲು ಸೂಚಿಸಲಾಗಿತ್ತು. ನೋಂದಾಯಿತ ರೈತರಿಂದ ಈಗಾಗಲೇ ಖರೀದಿಸಿರುವ ಕಡಲೆಯ ಪ್ರಮಾಣ ಸೇರಿ ಒಟ್ಟು ಪ್ರತಿ ಎಕರೆಗೆ 5 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಕಾಳು ಖರೀದಿ ಮಾಡಬೇಕು ಎಂದು ನಿಗದಿಪಡಿಸಲಾಗಿದೆ. ನೋಂದಣಿ ಅವಧಿಯನ್ನು ಮೇ 12ರ ವರೆಗೆ ಹಾಗೂ ಖರೀದಿ ಕಾಲಾವಧಿಯನ್ನು ಮೇ 25ರ ವರೆಗೆ ವಿಸ್ತರಿಸಲಾಗಿದೆ.

    ಮಾಹಿತಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಬೆಳಗಾವಿ ಶಾಖಾ ವ್ಯವಸ್ಥಾಪಕ ಮೊ. 9449864445, ಗೋಕಾಕ ಶಾಖೆ ವ್ಯವಸ್ಥಾಪಕ ಮೊ.9449864466, ಅಥಣಿ ಶಾಖೆ ವ್ಯವಸ್ಥಾಪಕ ಮೊ.9449864471ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮಹಳ್ಳಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts