More

    ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ಬೇಡ

    ಚಿಕ್ಕಮಗಳೂರು: ಗ್ರಾಮಸ್ಥರ ಸಮಸ್ಯೆ ಇತ್ಯರ್ಥವಾಗುವವರೆಗೂ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ಯೋಜನೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಪಕ್ಷದ ಮುಖಂಡರು ನಗರದ ಆಜಾದ್ ವೃತ್ತದಲ್ಲಿ ಗುರುವಾರ ಧರಣಿ ನಡೆಸಿದರು.

    ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್ಕುಮಾರ್ ಮಾತನಾಡಿ, ಗೋವುಗಳ ಅಂಕಿ ಅಂಶ, ಗ್ರಾಮಗಳು, ರೈತರ ಜಮೀನುಗಳ ರಸ್ತೆ, ನಿವೇಶನ ರಹಿತರ ಸಂಪೂರ್ಣ ಮಾಹಿತಿ ಪಡೆದು ಫಾಮ್ರ್ 57, 53, 94(ಸಿ)ಅರ್ಜಿ ವಿಲೇವಾರಿ ಮಾಡಿದ ನಂತರ ಯೋಜನೆ ಅನುಷ್ಠಾನದ ಬಗ್ಗೆ ತೀರ್ವನವಾಗಲಿ ಎಂದು ಆಗ್ರಹಿಸಿದರು.

    ಪ್ರಸ್ತಾಪಿತ ಪ್ರದೇಶದಲ್ಲಿ 13 ಸಾವಿರ ಎಕರೆ ಡೀಮ್್ಡ ಫಾರೆಸ್ಟ್ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಇದಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೆ ಅಗತ್ಯ. ಕಳಸಾ ಇನಾಂ ಬದಲಿ ಜಮೀನು ಈ ವ್ಯಾಪ್ತಿಗೆ ಸೇರಿದೆ. ಇಲ್ಲಿನ ಜನರ ಅಭಿಪ್ರಾಯ ಸಂಗ್ರಹಿಸಿಲ್ಲ. ಈ ವಿಚಾರಗಳು ಗ್ರಾಮ ಸಭೆಗಳಲ್ಲಿ ಚರ್ಚೆಯಾಗಿದೆ. ಅಭಿಪ್ರಾಯ ಕ್ರೋಡೀಕರಿಸಿ ಜಂಟಿ ಸರ್ವೆ ನಡೆದು, ಗಡಿ ಗುರುತಿಸುವವರೆಗೂ ಹಾಗೂ ಸುಪ್ರೀಂ ಕೋರ್ಟ್​ನಿಂದ ಡೀಮ್್ಡ ಫಾರೆಸ್ಟ್ ಸಮಸ್ಯೆ ಅಂತಿಮ ಆಗುವವರೆಗೂ ಈ ಯೋಜನೆಗೆ ಚಾಲನೆ ನೀಡಬಾರದು ಎಂದು ಒತ್ತಾಯಿಸಿದರು.

    ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಸಂರಕ್ಷಿತ ಪ್ರದೇಶ ಘೊಷಣೆ ಸ್ಥಳೀಯ ನಿವಾಸಿಗಳ ಬದುಕಿಗೆ ಮಾರಕ. ಇದನ್ನು ಸಹಿಸಲು ಸಾಧ್ಯವಿಲ್ಲ. ಸಂಘರ್ಷಕ್ಕೆ ಎಡೆಮಾಡಿಕೊಡದೆ ರಾಜ್ಯ ಸರ್ಕಾರ ಎಚ್ಚೆತ್ತು ತಜ್ಞರ ಸಮಿತಿ ರಚಿಸಿ ಜನರಿಗೂ ಮಾಹಿತಿ ನೀಡಿ ವೈಜ್ಞಾನಿಕವಾಗಿ ತೀರ್ವನಿಸಬೇಕು ಎಂದು ಆಗ್ರಹಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ ಮಾತನಾಡಿ, 8 ಗ್ರಾಪಂಗಳ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಮೂಲಕ ಅರಣ್ಯ ಇಲಾಖೆಗೆ ಭೂಮಿ ವರ್ಗಾಯಿಸಬಾರದು. ಕಂದಾಯ ಇಲಾಖೆಯಲ್ಲೇ ಉಳಿಸಬೇಕೆಂದು ಜನರ ಒಕ್ಕೋರಲ ನಿರ್ಧಾರ. ಅಕ್ರಮ- ಸಕ್ರಮ ಫಲಾನುಭವಿಗಳಿಗೆ ಮತ್ತು ಮೂಲ ಸೌಕರ್ಯಕ್ಕೆ ಭೂಮಿ ಕಾಯ್ದಿರಿಸಿ ಗ್ರಾಮಸ್ಥರಿಗೆ ಅನ್ಯಾಯವಾಗದಂತೆ ಯಥಾಸ್ಥಿತಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

    ಮಾಜಿ ಎಂಎಲ್​ಸಿ ಎ.ವಿ.ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್, ಪ್ರಮುಖರಾದ ಜೆ.ಎಚ್.ರೇಖಾ ಹುಲಿಯಪ್ಪ ಗೌಡ, ಹಿರೇಮಗಳೂರು ಪುಟ್ಟಸ್ವಾಮಿ, ಕೆ.ವಿ.ಶಿವಕುಮಾರ್, ಎಚ್.ಎಂ.ರೇಣುಕಾರಾಧ್ಯ, ಜಿ.ರಘು, ಕೆ.ಟಿ.ರಾಧಾಕೃಷ್ಣ, ಹರೀಶ್, ಪರಮೇಶ್, ಅಣ್ಣಯ್ಯ, ಹಿರೇಮಗಳೂರು ರಾಮಚಂದ್ರ, ಸಿಲ್ವೆಸ್ಟರ್, ಕೆ.ಕೆ.ರಘು, ಶಾಂತಕುಮಾರ್, ಲೋಹಿತ್, ಮುನ್ನಾ, ಈಶ್ವರ್, ತಂಬನ್,ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts