More

    ಹಾವೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮರು ವಿಂಗಡಣೆ

    ಹಾವೇರಿ: ಜಿಪಂ, ತಾಪಂಗಳಿಗೆ ಚುನಾವಣೆ ನಡೆಸಲು ತಯಾರಿ ಮಾಡುತ್ತಿರುವ ರಾಜ್ಯ ಚುನಾವಣೆ ಆಯೋಗ ಜಿಲ್ಲೆಯ ಜಿಪಂ ಮತ್ತು ತಾಪಂ ಕ್ಷೇತ್ರಗಳ ಮರು ವಿಂಗಡಣೆಗೊಳಿಸಿ ಅಧಿಸೂಚನೆ ಹೊರಡಿಸಿದೆ.

    ಚುನಾವಣೆ ಆಯೋಗದಿಂದ ಕ್ಷೇತ್ರ ವಿಂಗಡಣೆ ಅಂತಿಮ ಅಧಿಸೂಚನೆ ಹೊರಬೀಳುತ್ತಲೇ ಜಿಪಂ ಮತ್ತು ತಾಪಂ ಚುನಾವಣೆಗೆ ರಾಜಕೀಯ ಚುರುಕು ಪಡೆದುಕೊಂಡಿದೆ. ಈಗಾಗಲೇ ಸ್ಪರ್ಧಾಕಾಂಕ್ಷಿಗಳು ಯಾವ ಕ್ಷೇತ್ರದಲ್ಲಿ ಯಾವ ಗ್ರಾಪಂ ಸೇರ್ಪಡೆಯಾಗಿವೆ. ಇದರಿಂದ ಯಾರಿಗೆ ಎಷ್ಟು ಅನುಕೂಲ? ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾವ ಮೀಸಲಾತಿ ಬರಲಿದೆ ಎಂಬುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

    4 ಹೊಸ ಜಿಪಂ ಕ್ಷೇತ್ರಗಳು: ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು ಹಾಗೂ ಹಾನಗಲ್ಲ ತಾಲೂಕುಗಳಲ್ಲಿ ತಲಾ ಒಂದು ಜಿಪಂ ಕ್ಷೇತ್ರಗಳನ್ನು ಹೆಚ್ಚಿಸಲಾಗಿದೆ. ಹಾವೇರಿ ತಾಲೂಕಿನ ಕರ್ಜಗಿ, ಹಾನಗಲ್ಲ ತಾಲೂಕಿನ ಕುಸನೂರು, ರಾಣೆಬೆನ್ನೂರು ತಾಲೂಕಿನ ಕೋಡಿಯಾಲ, ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಹೊಸದಾಗಿ ರಚನೆಯಾದ ಜಿಪಂ ಕ್ಷೇತ್ರಗಳಾಗಿವೆ.

    ಜಿಲ್ಲಾ ಪಂಚಾಯಿತಿಗಳ ಕ್ಷೇತ್ರ ವ್ಯಾಪ್ತಿ: ಹಾವೇರಿ ತಾಲೂಕು: ಹಾವನೂರು ಜಿಪಂ ಕ್ಷೇತ್ರ: ಹಾವನೂರು, ಮೇವುಂಡಿ, ಹಾಂವಶಿ, ಕಂಚಾರಗಟ್ಟಿ, ಬಸಾಪುರ, ಕೂರಗುಂದ ಗ್ರಾಪಂಗಳ ವ್ಯಾಪ್ತಿ.

    ನೆಗಳೂರು ಜಿಪಂ: ನೆಗಳೂರ, ಮರೋಳ, ಹಂದಿಗನೂರ, ಹಾಲಗಿ, ಹೊಸಕಿತ್ತೂರ, ಬೆಳವಿಗಿ.

    ಕರ್ಜಗಿ ಜಿಪಂ: ಕರ್ಜಗಿ, ಯಲಗಚ್ಚ, ಕೋಣನತಂಬಿಗಿ, ಹೊಸರಿತ್ತಿ.

    ಅಗಡಿ ಜಿಪಂ: ಅಗಡಿ, ಹೊಂಬರಡಿ, ನೆಲೋಗಲ್ಲ, ಕಳ್ಳಿಹಾಳ, ಕಾಟೇನಹಳ್ಳಿ, ಕನವಳ್ಳಿ, ಬೂದಗಟ್ಟಿ.

    ದೇವಗಿರಿ ಜಿಪಂ: ದೇವಗಿರಿ, ದೇವಿಹೊಸೂರು, ನಾಗನೂರು, ಕೋಳೂರ, ಸಂಗೂರ.

    ಕಬ್ಬೂರ ಜಿಪಂ: ಕಬ್ಬೂರ, ಕುಳೇನೂರು, ಆಲದಕಟ್ಟಿ, ಕನಕಾಪುರ, ಕುರುಬಗೊಂಡ.

    ಬ್ಯಾಡಗಿ ತಾಲೂಕು: ಚಿಕ್ಕಬಾಸೂರು ಜಿಪಂ: ಚಿಕ್ಕಬಾಸೂರು, ಸೂಡಂಬಿ, ಘಾಳಪೂಜಿ, ಹಿರೇಅಣಜಿ, ಕುಮ್ಮೂರು, ಹಿರೇಹಳ್ಳಿ.

    ಕಾಗಿನೆಲೆ ಜಿಪಂ: ಕಾಗಿನೆಲೆ, ಕೆರೂಡಿ, ಮಾಸಣಗಿ, ಮತ್ತೂರು, ಹೆಡಿಗ್ಗೊಂಡ.

    ಕದರಮಂಡಲಗಿ ಜಿಪಂ: ಕದರಮಂಡಲಗಿ, ಶಿಡೇನೂರು, ಬಿಸಲಹಳ್ಳಿ, ಬನ್ನಿಹಟ್ಟಿ, ತಡಸ.

    ಮೋಟೆಬೆನ್ನೂರ ಜಿಪಂ: ಮೋಟೆಬೆನ್ನೂರ, ಮಲ್ಲೂರು, ಗುಂಡೇನಹಳ್ಳಿ, ಕಲ್ಲೇದೇವರು.

    ರಾಣೆಬೆನ್ನೂರ ತಾಲೂಕು: ಕಾಕೋಳ ಜಿಪಂ: ಕಾಕೋಳ, ಕಜ್ಜರಿ, ಗುಡ್ಡದಗುಡ್ಡಾಪುರ, ಹನುಮಾಪುರ, ಹೊನ್ನತ್ತಿ. ವೈ.ಟಿ. ಹೊನ್ನತ್ತಿ.

    ಚಳಗೇರಿ ಜಿಪಂ: ಚಳಗೇರಿ, ಮಾಕನೂರು, ಕರೂರು, ಕಮದೋಡ, ರಾಹುತನಹಟ್ಟಿ.

    ಮೇಡ್ಲೇರಿ ಜಿಪಂ: ಮೇಡ್ಲೇರಿ, ಬೇಲೂರು, ಹರನಗಿರಿ, ಅರೇಮಲ್ಲಾಪುರ, ಚಿಕ್ಕಕುರುವತ್ತಿ.

    ತುಮ್ಮಿನಕಟ್ಟಿ ಜಿಪಂ: ತುಮ್ಮಿನಕಟ್ಟಿ, ಲಿಂಗದಹಳ್ಳಿ, ಕುಪ್ಪೇಲೂರು, ಬಿಲ್ಲಹಳ್ಳಿ, ಮಾಳನಾಯಕನಹಳ್ಳಿ.

    ಹಲಗೇರಿ ಜಿಪಂ: ಹಲಗೇರಿ, ಬೆನಕನಕೊಂಡ, ಮುದೇನೂರು, ಇಟಗಿ, ಅಂತರವಳ್ಳಿ, ನಿಟ್ಟೂರ.

    ಅಸುಂಡಿ ಜಿಪಂ: ಅಸುಂಡಿ, ಗುಡಗೂರು, ಉಕ್ಕುಂದ, ಸುಣಕಲ್ಲಬಿದರಿ, ಜೋಯಿಸರಹರಳ ಹಳ್ಳಿ, ಗುಡ್ಡದಆನ್ವೇರಿ, ಹೆಡಿಯಾಲ.

    ಕೋಡಿಯಾಲ ಜಿಪಂ: ಕೋಡಿಯಾಲ, ಹಿರೇಬಿದರಿ, ಐರಣಿ, ಕವಲೆತ್ತು, ಸೋಮಲಾಪುರ, ನದಿಹರಳಹಳ್ಳಿ.

    ಹಿರೇಕೆರೂರ ತಾಲೂಕು: ಚಿಕ್ಕೇರೂರ ಜಿಪಂ: ಚಿಕ್ಕೇರೂರ, ಕಚವಿ, ಸಾತೇನಹಳ್ಳಿ, ಮಡ್ಲೂರು, ಬೆಟಕೇರೂರು, ಬುರಡಿಕಟ್ಟಿ.

    ಹಂಸಭಾವಿ ಜಿಪಂ: ಹಂಸಭಾವಿ, ಚಿಕ್ಕೋಣ್ತಿ, ಚಿನ್ನಮುಳಗುಂದ, ಭೋಗಾವಿ, ಸುತ್ತಕೋಟಿ, ಅಬಲೂರು, ಯತ್ತಿನಹಳ್ಳಿ.

    ಕೋಡ ಜಿಪಂ: ಕೋಡ, ಆಲದಗೇರಿ, ಅರಳಿಕಟ್ಟಿ, ತಾವರಗಿ, ಚನ್ನಹಳ್ಳಿ, ನಿಡನೇಗಿಲ.

    ರಟ್ಟಿಹಳ್ಳಿ ತಾಲೂಕು: ಕಡೂರು ಜಿಪಂ: ಕಡೂರು, ಹುಲ್ಲತ್ತಿ, ನೇಶ್ವಿ, ಮಕರಿ, ಕುಡುಪಲಿ, ಕುಂಚೂರು, ಚಿಕ್ಕಅಣಜಿ.

    ಮಾಸೂರು ಜಿಪಂ: ಮಾಸೂರು, ಇಂಗಳಗೊಂದಿ, ಶಿರಗಂಬಿ, ಹಿರೇಮೊರಬ, ತಡಕನಹಳ್ಳಿ, ಮೇದೂರು. ಕೋಡಮಗ್ಗಿ.

    ಚಿಕ್ಕಕಬ್ಬಾರ ಜಿಪಂ: ಹಿರೇಕಬ್ಬಾರ, ಕಣವಿಶಿದ್ದಗೇರಿ, ಹಳ್ಳೂರು, ಅಣಜಿ, ನಾಗವಂದ.

    ಸವಣೂರ ತಾಲೂಕು: ಕಾರಡಗಿ ಜಿಪಂ: ಚಿಲ್ಲೂರಬಡ್ನಿ, ಮಂತ್ರೋಡಿ, ಕುರುಬರಮಲ್ಲೂರು, ತೆಗ್ಗಿಹಳ್ಳಿ.

    ಹುರಳಿಕುಪ್ಪಿ ಜಿಪಂ: ಹುರಳಿಕುಪ್ಪಿ, ತವರಮೆಳ್ಳಿಹಳ್ಳಿ, ಕುಣಿಮೆಳ್ಳಿಹಳ್ಳಿ, ತೊಂಡೂರು, ಹಿರೇಮುಗದೂರು, ಕಳಸೂರು.

    ಯಲವಿಗಿ ಜಿಪಂ: ಯಲವಿಗಿ, ಹೂವಿನಶಿಗ್ಲಿ, ಹೆಸರೂರು, ಕಡಕೋಳ.

    ಹತ್ತಿಮತ್ತೂರ ಜಿಪಂ: ಹತ್ತಿಮತ್ತೂರು, ಹಿರೇಮರಳಿಹಳ್ಳಿ, ಜಲ್ಲಾಪುರ, ಶಿರಬಡಗಿ, ಇಚ್ಚಂಗಿ, ಡಂಬರಮತ್ತೂರ.

    ಶಿಗ್ಗಾಂವಿ ತಾಲೂಕು: ತಡಸ ಜಿಪಂ: ತಡಸ, ಕುನ್ನೂರು, ಮಡ್ಲಿ, ವನಳ್ಳಿ, ಎನ್​ಎಂ ತಡಸ, ಹಿರೇಮಣಕಟ್ಟಿ, ಹಿರೇಬೆಂಡಿಗೇರಿ.

    ಹೋತನಹಳ್ಳಿ ಜಿಪಂಗೆ: ಹೋತನಹಳ್ಳಿ, ದುಂಡಸಿ, ಹೊಸೂರು, ಕೋಣನಕೇರಿ, ಅಂದಲಗಿ, ಚಂದಾಪುರ, ಹುನಗುಂದ.

    ಕುಂದೂರ ಜಿಪಂಗೆ: ಕುಂದೂರ, ಬಾಡ, ನಾರಾಯಣಪುರ, ಹನುಮರಹಳ್ಳಿ, ಹಿರೇಮಲ್ಲೂರ, ಹಳೇಬಂಕಾಪುರ, ಗುಡ್ಡದಚೆನ್ನಾಪುರ.

    ಹುಲಗೂರ ಜಿಪಂ: ಹುಲಗೂರ, ಬನ್ನೂರ, ಕಬನೂರು, ಕ್ಯಾಲಕೊಂಡ, ಅತ್ತಿಗೇರಿ, ಬಸನಾಳ, ಶಿಶುವಿನಹಾಳ.

    ಹಾನಗಲ್ಲ ತಾಲೂಕು: ನರೇಗಲ್ಲ ಜಿಪಂ: ನರೇಗಲ್ಲ, ಬೆಳಗಾಲಪೇಟೆ, ಮಾಸನಕಟ್ಟಿ, ಸಾವಂಶಿ, ಕೂಡಲ, ಆಲದಕಟ್ಟಿ.

    ಬೊಮ್ಮನಹಳ್ಳಿ ಜಿಪಂ: ಬೊಮ್ಮನಹಳ್ಳಿ, ಕರೇಕುದರಿ, ಯಳವಟ್ಟಿ, ಹುಲ್ಲತ್ತಿ, ಬೈಚವಳ್ಳಿ.

    ಶಿರಗೋಡ ಜಿಪಂ: ಶಿರಗೋಡ, ಹೀರೂರು, ಮಂತಗಿ, ಹಿರೇಕಣಗಿ, ಸಮ್ಮಸಗಿ, ಕೊಪ್ಪರಸಿಕೊಪ್ಪ.

    ತಿಳವಳ್ಳಿ ಜಿಪಂ: ತಿಳವಳ್ಳಿ, ಕೆಲವರಕೊಪ್ಪ, ಕಿರವಾಡಿ, ಹೊಂಕಣ, ಗೊಂದಿ, ಚಿಕ್ಕಾಂಶಿಹೊಸೂರು.

    ಕುಸನೂರು ಜಿಪಂ: ಕುಸನೂರು, ಕಲ್ಲಾಪುರ, ಹಿರೇಹುಲ್ಲಾಳ, ಶ್ಯಾಡಗುಪ್ಪಿ, ಸೋಮಸಾಗರ, ಮಲಗುಂದ, ಹಾವಣಗಿ.

    ಅಕ್ಕಿಆಲೂರು ಜಿಪಂ: ಅಕ್ಕಿಆಲೂರು, ಬಾಳಂಬೀಡ, ಅರಳೇಶ್ವರ, ಸುರಳೇಶ್ವರ, ಗೆಜ್ಜಿಹಳ್ಳಿ, ಡೊಳ್ಳೇಶ್ವರ.

    ಆಡೂರ ಜಿಪಂ: ಆಡೂರ, ಕಂಚಿನೆಗಳೂರು, ಮಾರನಬೀಡ, ಶೀಗಿಹಳ್ಳಿ, ಉಪ್ಪುಣಸಿ, ಹೇರೂರು.

    ಬದಲಾವಣೆಯ ವಿವರ: ಬ್ಯಾಡಗಿ ತಾಲೂಕು ಶಿಡೇನೂರ ಜಿಪಂ ಕೇಂದ್ರ ಸ್ಥಾನ ಕದರಮಂಡಲಗಿಯಾಗಿದೆ. ರಟ್ಟಿಹಳ್ಳಿ ತಾಲೂಕಿನಲ್ಲಿ ರಟ್ಟಿಹಳ್ಳಿ ಪಪಂ ಆಗಿ ಮೇಲ್ದರ್ಜೆಗೇರಿದ್ದರಿಂದ ಚಿಕ್ಕಕಬ್ಬಾರ ಜಿಪಂ ರಚನೆಯಾಗಿದೆ. ಶಿಗ್ಗಾಂವಿ ತಾಲೂಕು ದುಂಡಸಿ ಜಿಪಂ ಕ್ಷೇತ್ರದ ಕೇಂದ್ರ ಸ್ಥಾನ ಹೋತನಹಳ್ಳಿಯಾಗಿದೆ. ಹಾನಗಲ್ಲ ತಾಲೂಕು ಹಿರೂರ ಜಿಪಂ ಕ್ಷೇತ್ರದ ಕೇಂದ್ರ ಸ್ಥಾನ ಶಿರಗೋಡ ಆಗಿ ಬದಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts