More

    ರಾಜ್ಯದಲ್ಲಿ ನಾಲ್ಕು ಸಾವಿರ ಅತಿಥಿ ಶಿಕ್ಷಕರ ನೇಮಕ

    ಚಿತ್ರದುರ್ಗ:  ರಾಜ್ಯದಲ್ಲಿ 1000 ಪ್ರೌಢ ಶಾಲೆ ಹಾಗೂ 3000 ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ನೇಮಕಕ್ಕಾಗಿ ಶಿಕ್ಷಣ ಇಲಾಖೆ ಆಯುಕ್ತರು ಆರ್ಥಿ ಕ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ವಾರದೊಳಗೆ ದೊರೆಯಲಿದೆ ಎಂದು ಆರ್ಥಿಕ ಇಲಾಖೆ,ಜಿಲ್ಲಾ ಉಸ್ತುವಾರಿ ಕಾರ‌್ಯದರ್ಶಿ ಡಾ.ಪಿ. ಸಿ.ಜಾಫರ್ ಹೇಳಿದರು.

    ಶುಕ್ರವಾರ ಜಿಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ,ಸರ್ಕಾರ ಶೀಘ್ರದಲ್ಲೇ ಅತಿಥಿ ಶಿಕ್ಷಕರನ್ನು ಸರ್ಕಾರ ನೇಮಿಸಲಿದೆ. ಕೋ ವಿಡ್‌ನಿಂದಾಗಿ ಕುಂಟಿತಗೊಂಡಿರುವ ಮಕ್ಕಳ ಶಿಕ್ಷಣವನ್ನು ಸರಿದಾರಿಗೆ ತರಬೇಕು. ಮೂಲ ಸೌಲಭ್ಯಗಳಿಲ್ಲದ ಸರ್ಕಾರಿ ಪಪೂ ಕಾಲೇಜು ಗಳನ್ನು ಆದರ್ಶ ವಿದ್ಯಾಲಯಗಳಿಗೆ ಶಿಫ್ಟ್ ಮಾಡುವಂತೆ ಡಿಡಿಪಿಯು,ಡಿಡಿಪಿಐ ಅವರಿಗೆ ತಿಳಿಸಿದರು.

    ಸಕಾಲಕ್ಕೆ ವೇತನ ಪಾವತಿ ಯೊಂದಿಗೆ ಈ ಆರ್ಥಿಕ ವರ್ಷದಲ್ಲೇ ಎಲ್ಲ ಬಾಕಿ ವೇತನಗಳನ್ನು ಪಾವತಿಸ ಬೇಕೆಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
    ಡಿಡಿಪಿಐ ರವಿಶಂಕರ ರೆಡ್ಡಿ ಮಾತನಾಡಿ,ಅತಿಥಿ ಶಿಕ್ಷಕರ ಗೌರವ ಸಂಭಾವನೆ ಪಾವತಿಗೆ ಸರ್ಕಾರದಿಂದ 7.5 ಲಕ್ಷ ರೂ.ಅನುದಾನದ ಅ ಗತ್ಯವಿದೆ. ಜಿಲ್ಲೆಯಲ್ಲಿ ಖಾಲಿ ಇರುವ 32 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಬೇಕಿದೆ ಎಂದರು. ಜಿಲ್ಲೆಯಲ್ಲಿ ಸಿರಿಧಾನ್ಯ ಕೃಷಿ ಕ್ಷೇತ್ರ ವಿಸ್ತರಣೆಗೊಳ್ಳುತ್ತಿದೆ. ಜನವರಿಯಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳ ಜರುಗಲಿದೆ ಎಂದು ಕೃಷಿ ಇಲಾಖೆ ಜಂಟಿಕೃಷಿ ನಿರ್ದೇಶಕ ರಮೇಶ್‌ಕುಮಾರ್ ತಿಳಿಸಿದರು.

    ಸಿರಿಧಾನ್ಯ ತಳಿಗಳ ಸಂಶೋಧನೆ ಕೇಂದ್ರ

    ರಾಣೆಬೆನ್ನೂರು ಹಾಗೂ ಹೈದರಾಬಾದ್‌ನಲ್ಲಿ ಸಿರಿಧಾನ್ಯ ತಳಿ ಸಂಶೋಧನೆ ನಡೆಯುತ್ತಿದ್ದು,ನಮ್ಮ ಜಿಲ್ಲೆಯಲ್ಲೂ ಸಿರಿಧಾನ್ಯ ತಳಿಗಳ ಸಂಶೋಧನೆ ಕೇಂದ್ರ ಸ್ಥಾಪನೆ ಅಗತ್ಯವಿದೆ ಎಂದರು. ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ರಮೇಶ್ ಕುಮಾರ್‌ಗೆ ಹಾಗೂ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ ಪ್ರತಿ ಗ್ರಾಪಂಗೆ 2 ಯುವಕ ಸಂಘಗಳನ್ನು ಗುರುತಿಸುವಂತೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ ಅವರಿಗೆ ಸೂಚಿಸಿದರು.

    ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲು 1.93 ಕೋಟಿ ರೂ.ಅನುದಾನದ ಅ ಗತ್ಯವಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ತಿಳಿಸಿದರು. ಈ ರೋಗದಿಂದಾಗಿ ಜಿಲ್ಲೆಯಲ್ಲಿ ಈವರೆಗೆ 863 ರಾಸುಗಳು ಮೃತಪಟ್ಟಿವೆ. ಚರ್ಮಗಂಟು ರೋಗ ನಿಯಂತ್ರಣದ ಲಸಿಕೆ ದಾಸ್ತಾನಿದೆ ಎಂದರು. ಡಯಾಲಿಸಿಸ್ ಹಾಗೂ ಕ್ಯಾನ್ಸರ್ ರೋಗ ಗಳಿಗೆ ಚಿಕಿತ್ಸೆಗಾಗಿ ಅಗತ್ಯವಿರುವ ಉಪಕರಣಗಳನ್ನು ಸರ್ಕಾರಿ ಅನುದಾನದ ಜತೆಗೆ ದಾನಿಗಳ ನೆರವನ್ನೂ ಪಡೆಯುವಂತೆ ಡಿಎಚ್‌ಒ ಡಾ. ರಂಗನಾಥ್‌ಗೆ ಸೂಚಿಸಿದರು.

    ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವಸತಿ ಶಾಲೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆಯುವುದರೊಂದಿಗೆ ಅ ವರನ್ನು ಐಎಟಿ, ಜೆಇಇ,ನೀಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸ ಬೇಕೆಂದು ಸಮಾಜ ಕಲ್ಯಾಣ ಇ ಲಾಖೆ ಉಪ ನಿರ್ದೇಶಕಿ ಮಮತಾ ಅವರಿಗೆ ತಿಳಿಸಿದರು. ಡಿಸಿ ಜಿಆರ್‌ಜೆ ದಿವ್ಯಾಪ್ರಭು,ಜಿಪಂ ಸಿಇಒ ಎಂ.ಎಸ್.ದಿವಾಕರ್,ಉಪ ಕಾ ರ‌್ಯದರ್ಶಿ ಡಾ.ರಂಗಸ್ವಾಮಿ,ಎಡಿಸಿ ಇ.ಬಾಲಕೃಷ್ಣ,ಎಸಿ ಆರ್.ಚಂದ್ರಯ್ಯ ಇತರರು ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts