More

    ರಾಜ್ಯದ ವಿವಿಧೆಡೆ ದಾಖಲೆ ವರ್ಷಧಾರೆ; ನಾಳೆ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್!

    ಬೆಂಗಳೂರು : ಮುಂಗಾರು ಚುರುಕಾದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 24 ಗಂಟೆ ಅವಧಿಯಲ್ಲಿ ದಾಖಲೆ ಮಟ್ಟದ ಮಳೆಯಾಗಿದೆ. ಜುಲೈ 22 ರ ಬೆಳಗ್ಗೆ 8 ರಿಂದ ಜುಲೈ 23 ರ ಬೆಳಗ್ಗೆ 8 ಗಂಟೆವರೆಗೆ ಬೆಳಗಾವಿ ಜಿಲ್ಲೆಯ ಲೊಂಡಾದಲ್ಲಿ 380 ಮಿ.ಮೀ., ಉತ್ತರ ಕನ್ನಡದ ಕದ್ರಾದಲ್ಲಿ 340 ಮಿ.ಮೀ. ಹಾಗೂ ಶಿವಮೊಗ್ಗದ ತಾಳಗುಪ್ಪದಲ್ಲಿ 270 ಮಿ.ಮೀ. ಮಳೆಯಾಗಿದೆ. ಕೊಡಗು, ಚಿಕ್ಕಮಗಳೂರು ಮತ್ತು ಹಾವೇರಿಯಲ್ಲಿ ಸರಾಸರಿ 160 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    1952 ರ ಮಾರ್ಚ್‌ನಲ್ಲಿ (24 ಗಂಟೆ ಅವಧಿಯಲ್ಲಿ) ಫ್ರೆಂಚ್ ದ್ವೀಪದ ಸಿಲಾಸ್ ಪಟ್ಟಣದಲ್ಲಿ 1,870 ಮಿ.ಮೀ.ಮಳೆಯಾಗಿರುವುದು ಈವರೆಗಿನ ದಾಖಲಾಗಿದೆ. 1966 ರ ಜನವರಿಯಲ್ಲಿ ಫ್ರೆಂಚ್ ದ್ವೀಪದ ಪ್ರದೇಶಗಳಲ್ಲಿ 1,825 ಮಿ.ಮೀ. ಮಳೆ ಸುರಿದಿದೆ. 2006 ರಲ್ಲಿ ಭಾರತದ ಮುಂಬೈನಲ್ಲಿ 900 ಮಿ.ಮೀ. ಮಳೆ ಸುರಿದಿದೆ. ಒಂದೇ ದಿನದಲ್ಲಿ 1963 ರ ಜುಲೈ 27 ರಂದು ಆಗುಂಬೆಯಲ್ಲಿ 618 ಮೀ.ಮೀ, 1987 ರಲ್ಲಿ ಹುಲಿಕಲ್‌ನಲ್ಲಿ 548 ಮೀ.ಮೀ., 2019 ರಲ್ಲಿ ಕೊಟ್ಟಿಗೆಹಾರದಲ್ಲಿ 572 ಮೀ.ಮೀ ಮತ್ತು ಕೊಡಗಿನ ಭಾಗಮಂಡಲದಲ್ಲಿ 400 ಮೀ.ಮೀ.ಮಳೆ ಬಿದ್ದಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಧಾರಾಕಾರ ಮಳೆ, ಸೇತುವೆ ಮೇಲೆ ಹರಿಯುತ್ತಿದೆ ನಾಲ್ಕಡಿಗೂ ಹೆಚ್ಚು ನೀರು; ಶಿವಮೊಗ್ಗ-ಮಂಗಳೂರು ಹೆದ್ದಾರಿ ಬಂದ್​…

    ನಾಳೆ ರೆಡ್ ಅಲರ್ಟ್ : ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿಯಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಜುಲೈ 24 ರಂದು ಅತಿ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಈ ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.

    ಉತ್ತರ ಒಳನಾಡಿನ ಬೆಳಗಾವಿ, ಧಾರವಾಡದಲ್ಲಿ ಮುಂದಿನ 24 ಗಂಟೆ ಆರೆಂಜ್ ಅಲರ್ಟ್ ಇದ್ದರೆ, ಗದಗ, ಹಾವೇರಿ, ಕಲಬುರಗಿ ಮತ್ತು ಯಾದಗಿರಿಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 72 ಗಂಟೆ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    VIDEO | ಪ್ರವಾಹಪೀಡಿತ ಪಟ್ಟಣದಿಂದ ಭಯಾನಕ ವಿಡಿಯೋ ವೈರಲ್!

    ಲಸಿಕೆ ಪಡೆದವರಲ್ಲಿ ಹೆಚ್ಚಿನ ಸೋಂಕು! ಆದರೆ, ಪಡೆಯದವರಲ್ಲಿ ಹೆಚ್ಚು ಗಂಭೀರ ಸ್ಥಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts