More

    ದಾಖಲೆ ಮಟ್ಟದ ಅದಿರು ಮಿಲ್ಲಿಂಗ್ ಮಾಡಿದ ಹಟ್ಟಿಚಿನ್ನದಗಣಿ

    ಹಟ್ಟಿಚಿನ್ನದಗಣಿ: 2021ನೇ ಸಾಲಿನಲ್ಲಿ ಗರಿಷ್ಠ ಮಟ್ಟದ ಅದಿರು ಮಿಲ್ಲಿಂಗ್ ಮಾಡಿ ಹಟ್ಟಿಚಿನ್ನದಗಣಿ ಕಂಪನಿಯ ಲೋಹ ವಿಭಾಗ ದಾಖಲೆ ಮೆರೆದಿದೆ.

    ಒಂದೇ ದಿನ 2430 ಮೆಟ್ರಿಕ್ ಟನ್ ಅದಿರು ಮಿಲ್ಲಿಂಗ್ ಮಾಡಲಾಗಿದೆ. 3 ಪಾಳೆಯ ಪೈಕಿ 2430 ಮೆಟ್ರಿಕ್ ಅದಿರು ಮಿಲ್ಲಿಂಗ್ ನಡೆದರೆ, ಬೆಳಗಿನ ಪಾಳಿಯ(ಬೆಳಗ್ಗೆ 7ರಿಂದ ಮಧ್ಯಾಹ್ನ 3) 8ಗಂಟೆ ಅವಧಿಯೊಳಗೆ 880 ಮೆಟ್ರಿಕ್ ಟನ್ ಮಿಲ್ಲಿಂಗ್ ಮಾಡಿರುವುದು ಗಣಿ ಕಂಪನಿ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

    ನಿತ್ಯ ಎರಡು ಸಾವಿರ ಮೆಟ್ರಿಕ್ ಟನ್ ಮಾತ್ರ ಅದಿರು ಬೀಸಲಾಗುತ್ತಿತ್ತು. 26 ಮೇ 2019ರಂದು 2460 ಮೆಟ್ರಿಕ್ ಟನ್ ಅದಿರು ಮಿಲ್ಲಿಂಗ್ ಮಾಡಿರುವುದು ಪ್ರಥಮ ದಾಖಲೆಯಾದರೆ, ಶುಕ್ರವಾರ 2430 ಮೆಟ್ರಿಕ್ ಟನ್ ಅದಿರು ಮಿಲ್ಲಿಂಗ್ ದ್ವಿತೀಯ ದಾಖಲೆಯಾಗಿದೆ.

    ದಾಖಲೆ ಮೆರೆದ ಅಧಿಕಾರಿ-ಕಾರ್ಮಿಕ ವರ್ಗ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಲೋಹ ವಿಭಾಗದ ಉಪಪ್ರಧಾನ ವ್ಯವಸ್ಥಾಪಕಿ ವಿಧಾತ್ರಿ, ವ್ಯವಸ್ಥಾಪಕ ಗುರುಬಸಯ್ಯ ಸ್ವಾಮಿ, ಫೋರಮೆನ್ ಜಬೃದ್ದೀನ್ ಪಾಷಾ ಸೇರಿದಂತೆ ಕಾರ್ಮಿಕರು ಇದ್ದರು.

    ಲೋಹ ವಿಭಾಗದ ಉಪಪ್ರಧಾನ ವ್ಯವಸ್ಥಾಪಕಿ ವಿಧಾತ್ರಿ ಹಾಗೂ ಅಧಿಕಾರಿಗಳ-ಕಾರ್ಮಿಕರ ತಂಡದ ಶ್ರಮದ ಫಲವಾಗಿ ಕರೊನಾ ಸಮಯದಲ್ಲೂ ಸಹಿತ ಪ್ರಯತ್ನ ಮೀರಿ ಕಾರ್ಯ ನಿರ್ವಹಿಸಿದ್ದರಿಂದ ಹೆಚ್ಚಿನ ಅದಿರು ಮಿಲ್ಲಿಂಗ್ ಆಯಿತು. ಒಂದೇ ಪಾಳಿಯಲ್ಲಿ 880ಮೆಟ್ರಿಕ್ ಟನ್ ಗಣಿ ಇತಿಹಾಸದಲ್ಲೇ ಮೊದಲು, ಒಂದೇ ದಿನ 2430ಮೆಟ್ರಿಕ್ ಟನ್ ಮಿಲ್ಲಿಂಗ್ ನಡೆಸಿರುವುದು ದ್ವಿತೀಯ ದಾಖಲೆಯಾಗಿದೆ._
    | ಪ್ರಕಾಶ್, ಕಾರ್ಯನಿರ್ವಾಹಕ ನಿರ್ದೇಶಕರು, ಹಟ್ಟಿಚಿನ್ನದಗಣಿ ಕಂಪನಿ(ನಿ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts