More

    ಸೆಸ್ ಸಂಗ್ರಹಣೆಯಲ್ಲಿ ದಾಖಲೆ

    ಬ್ಯಾಡಗಿ: ದೇಶದಲ್ಲಿ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ ಸತತ 2 ಲಕ್ಷ ಚೀಲ ಆವಕ ದಾಟಿದ್ದು, ಒಂದೇ ದಿನದಲ್ಲಿ ಮಾರುಕಟ್ಟೆಯ ಸೆಸ್ ಸಂಗ್ರಹ ಕೋಟಿ ರೂಪಾಯಿ ದಾಟಿರುವುದು ವಿಶೇಷವಾಗಿದೆ.

    ಬ್ಯಾಡಗಿ ಮಾರುಕಟ್ಟೆಯಲ್ಲಿ ಸತತ ಎರಡು ವಾರಗಳ ಕಾಲ 2 ಲಕ್ಷ ಚೀಲ ದಾಟಿದ್ದು, ಸೋಮವಾರ 2,26029 ಆವಕದಿಂದ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

    ಎಲ್ಲಿ ನೋಡಿದರೂ ಮೆಣಸಿನಕಾಯಿ ಚೀಲಗಳ ರಾಶಿ, ಮೆಣಸಿನಕಾಯಿ ಘಾಟು ಮಾರುಕಟ್ಟೆಯಲ್ಲಿ ಆವರಿಸಿದೆ.

    ಬೆಲೆ ಕಳೆದ ವಾರಕ್ಕಿಂತ ತುಸು ಇಳಿಮುಖವಾಗಿದ್ದು, ಆವಕದಲ್ಲಿ ಹಿಂದಿನ ವಾರಕ್ಕಿಂತಲೂ ಏರಿಕೆಯಾಗಿದೆ.

    ಇಲ್ಲಿನ ಮಾರುಕಟ್ಟೆಗೆ ಸೋಮವಾರ 2 ಲಕ್ಷ ಚೀಲ ಆವಕವಾಗಿದ್ದು, ಈ ಪೈಕಿ 5531 ತಳಿ ಮೆಣಸಿನಕಾಯಿ ಶೇ. 60, ಕೆಡಿಎಲ್ ಹಾಗೂ ದ್ಯಾವನೂರು ತಳಿ ಶೇ. 15, ಡಬ್ಬಿತಳಿ ಶೇ. 15, ಗುಂಟೂರು ಶೇ. 10 ರಷ್ಟಿದೆ. ಕಡ್ಡಿ, ಡಬ್ಬಿಗೆ ಎಲ್ಲಿಲ್ಲದ ಬೇಡಿಕೆಯಿದೆ.

    15 ದಿನಗಳ ಹಿಂದೆ ಡಬ್ಬಿ ತಳಿಗೆ ಅತಿಹೆಚ್ಚು 72 ಸಾವಿರ ರೂ. ಬೆಲೆ ಲಭಿಸಿದ್ದು, ಬಂಪರ್ ಬೆಲೆ ಸಿಕ್ಕಿತ್ತು. ಪ್ರಸಕ್ತ ಮಾರುಕಟ್ಟೆಯಲ್ಲಿ 66 ಸಾವಿರ ರೂ. ಮಾರಿದೆ.

    ಬ್ಯಾಡಗಿ ಕಡ್ಡಿ ಹಿಂದಿನ ವಾರಗಳಲ್ಲಿ ಅತಿಹೆಚ್ಚು 65 ಸಾವಿರ ರೂ. ದಾಟಿತ್ತು. ಪ್ರಸಕ್ತ ದಿನದಲ್ಲಿ 63 ಸಾವಿರ ರೂ. ಮಾರಿದೆ ಎನ್ನಲಾಗಿದೆ.

    ಒಟ್ಟಾರೆ ಪ್ರಸಕ್ತ ದರದಲ್ಲಿ ಸ್ವಲ್ಪ ಮಟ್ಟಿಗೆ ಏರಿಳಿತ ಕಂಡುಬಂದರೂ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಭಾರೀ ಬೇಡಿಕೆಯಿದೆ. ವ್ಯಾಪಾರದಲ್ಲಿ ಹಿಂದಿನಂತೆ ಸರಾಸರಿ ಬೆಲೆ ಉಳಿಸಿಕೊಂಡಿದ್ದು, ಮಾರಾಟ ಹಾಗೂ ದರ ಸ್ಥಿರತೆ ಕಾಯ್ದುಕೊಂಡಿದೆ.

    ಪ್ರಸಕ್ತ ಒಂದೇ ದಿನದಲ್ಲಿ 226029 ಚೀಲಗಳ ಆವಕವಾಗಿದ್ದು, ಸುಮಾರು 55 ಸಾವಿರ ಕ್ವಿಂಟಾಲ್ ಆವಕವಾಗಿದೆ ಎನ್ನಲಾಗಿದೆ.

    ಒಟ್ಟು ಮಾರುಕಟ್ಟೆಯಲ್ಲಿ ಸುಮಾರು 170 ಕೋಟಿ ರೂ. ವಹಿವಾಟು ನಡೆದಿದ್ದು, 1 ಕೋಟಿ ರೂಪಾಯಿಗೂ ಹೆಚ್ಚು ಶುಲ್ಕ ಸಂಗ್ರಹ ದಾಟಿದೆ ಎಂದು ಅಂದಾಜಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts