More

    25 ನಿಮಿಷ 16 ಸೆಕೆಂಡ್‌ನಲ್ಲಿ 1 ಕಿ.ಮೀ.ಬ್ರೆಸ್ಟ್ ಸ್ಟ್ರೋಕ್, ಸಮುದ್ರದಲ್ಲಿ ಈಜು ದಾಖಲೆಗೆ ನಾಗರಾಜ ಖಾರ್ವಿ ಮುನ್ನಡಿ

    ಮಂಗಳೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ಸೇರಬೇಕೆಂಬ ನಾಗರಾಜ ಖಾರ್ವಿ ಕಂಚುಗೋಡು ಅವರ ಆಸೆ ಈಡೇರುವ ಕ್ಷಣ ಸನ್ನಿಹಿತವಾಗಿದೆ.

    ದಾಖಲೆ ನಿರ್ಮಿಸುವ ಉದ್ದೇಶದಿಂದಲೇ ಕಾಲುಗಳಿಗೆ ಸರಪಳಿ ಬಿಗಿದು ಬೀಗ ಹಾಕಿ ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಈಜಿ ಗುರಿ ಸೇರಿದ್ದಾರೆ. ತಣ್ಣೀರುಬಾವಿ ಅರಬ್ಬಿ ಸಮುದ್ರ ಕಿನಾರೆಯಲ್ಲಿ ಒಂದು ಕಿ.ಮೀ.ದೂರವನ್ನು 25:16:63 ನಿಮಿಷದಲ್ಲಿ ಈಜುವ ಮೂಲಕ ಈ ಸಾಹಸ ಪ್ರದರ್ಶನ ನೀಡಿದ್ದಾರೆ. ಬೆಳಗ್ಗೆ 8.55ಕ್ಕೆ ತಣ್ಣೀರುಬಾವಿ ದಡದಿಂದ ಈಜು ಆರಂಭವಿಸಿದ್ದು, 9.20ಕ್ಕೆ ದಡ ಸೇರಿದ್ದಾರೆ. ಸಂಪೂರ್ಣ ಪ್ರಕ್ರಿಯೆಯ ವೀಡಿಯೋ ಚಿತ್ರೀಕರಣ ಮಾಡಲಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಲಾಗುತ್ತದೆ. ಸಂಸ್ಥೆಯ ಜ್ಯೂರಿಗಳು ಪರಿಶೀಲಿಸಿ, ದಾಖಲೆ ಮಾನ್ಯ ನೀಡಲಿದ್ದಾರೆ.
    ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಈಜು ಗುರು ಬಿ.ಕೆ.ನಾಯ್ಕ, ತರಬೇತುದಾರರಾದ ಶಿವಾನಂದ ಗಟ್ಟಿ, ಲೋಕರಾಜ್, ಈಜುಪಟು ಅಶೋಕ್ ಮೊದಲಾದವರು ಸಾಹಸ ಪ್ರದರ್ಶನ ವೇಳೆ ಇದ್ದರು.

    ನಾಗರಾಜ ಬಂಟ್ವಾಳ ತಾಲೂಕಿನ ಕಲ್ಮಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕರು. ಕುಂದಾಪುರದ ಕುಂಚಗೋಡಿನವರು. ಮೂರನೇ ತರಗತಿಯಲ್ಲಿರುವಾಗಲೇ ಈಜು ಅಭ್ಯಾಸ ಮಾಡಿದ್ದಾರೆ, ತರಬೇತುದಾರ ಬಿ. ಕೆ.ನಾಯ್ಕ ಅವರಿಂದ ಈಜಿನ ಶೈಲಿಗಳನ್ನು ಕಲಿತಿದ್ದಾರೆ. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಸಹಯೋಗದಲ್ಲಿ ಯೋಗ ತರಬೇತಿ ಪಡೆದಿದ್ದಾರೆ.

    ಈಜು ಹಾಗೂ ಯೋಗಕ್ಕೆ ಹೆಚ್ಚಿನ ಪ್ರಚಾರ ಸಿಗಬೇಕು ಎನ್ನುವ ಉದ್ದೇಶದಿಂದ ಈ ಸಾಹಸ ಮಾಡಿದ್ದೇನೆ. ಸಮುದ್ರದಲ್ಲಿ ಬೆಳಗ್ಗಿನ ಬಲವಾದ ಗಾಳಿಯ ನಡುವೆಯೂ ಈಜಿದ್ದೇನೆ. ಇದು ದಾಖಲೆಯಾದರೆ ಮತ್ತಷ್ಟು ಸಾಧನೆಗೆ ಹುರುಪು ಬರುತ್ತದೆ.
    ನಾಗರಾಜ ಖಾರ್ವಿ, ಈಜುಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts