More

    ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆ

    ಮುದ್ದೇಬಿಹಾಳ: ಪಟ್ಟಣದ ಹೊರವಲಯದ ಕುಂಟೋಜಿ ರಸ್ತೆ ಪಕ್ಕದಲ್ಲಿರುವ ಬಸವ ಇಂಟರ್‌ನ್ಯಾಶನಲ್ ಸ್ಕೂಲ್‌ನ 16 ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ಜಾಣ್ಮೆ ಪ್ರದರ್ಶಿಸಿ ಇಂಡಿಯಾಸ್ ವರ್ಲ್ಡ್ ರೆಕಾಡ್ಸ್‌ನಲ್ಲಿ ತಮ್ಮ ಹೆಸರು ದಾಖಲಿಸಿ ಸಾಧನೆ ತೋರಿದ್ದಾರೆ ಎಂದು ಶಾಲೆಯ ಚೇರ್ಮನ್ ಶಿವಕುಮಾರ ಹರ್ಲಾಪುರ, ಪ್ರಾಂಶುಪಾಲೆ ಡಾ. ಪ್ರಭಾ ಚಿನಿವಾರ ತಿಳಿಸಿದರು.

    ಗುರುವಾರ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿರುವ ಐಡಬ್ಲುಆರ್ ಫೌಂಡೇಷನ್ ಇಂಡಿಯಾಸ್ ವರ್ಲ್ಡ್ ರೆಕಾಡ್ಸ್ ಸಂಸ್ಥೆಯನ್ನು ಸ್ಥಾಪಿಸಿ ದೇಶಾದ್ಯಂತ ಇರುವ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ನಡೆಸುತ್ತಿದೆ.

    ಶಿಕ್ಷಣ ತಜ್ಞರೊಬ್ಬರಿಂದ ಈ ಸಂಸ್ಥೆಯ ಬಗ್ಗೆ ತಿಳಿದುಕೊಂಡು ನಮ್ಮ ವಿದ್ಯಾರ್ಥಿಗಳ ಬುದ್ಧಿಮತ್ತೆಯ ಬಗ್ಗೆ ಅವರಿಗೆ ದಾಖಲೆ ಸಮೇತ ತಿಳಿಸಲಾಗಿತ್ತು. ನಮ್ಮ ವಿದ್ಯಾರ್ಥಿಗಳ ವಿಡಿಯೋ ಅವಲೋಕಿಸಿದ ಅವರು ಸಮಯ ನಿಗದಿಪಡಿಸಿ ಹಲವಾರು ಬುದ್ಧಿಮತ್ತೆಯ ಚಟುವಟಿಕೆ ನೀಡಿದ್ದರು.

    ನಮ್ಮ ವಿದ್ಯಾರ್ಥಿಗಳಲ್ಲಿ ಬಹುತೇಕರು ಎಲ್ಲ ಚಟುವಟಿಕೆಗಳಲ್ಲೂ ಯಶಸ್ವಿಯಾಗಿದ್ದಾರೆ ಎಂದು ಹರ್ಷಿಸಿದರು.

    ನಮ್ಮ ಶಾಲೆಯ 16 ವಿದ್ಯಾರ್ಥಿಗಳು ರಿವರ್ಸ್ ಅಲ್ಪಾಬೆಟ್ಸ್, ದೇಶ ಮತ್ತು ಅವುಗಳ ರಾಜಧಾನಿ, 1-30 ಟೇಬಲ್ ಹಿಮ್ಮುಖವಾಗಿ ಗುಣಿಸುವಿಕೆ, 100ರವರೆಗೆ ಒಂದು ಇಂಗ್ಲೀಷ್ ನಂತರ ಹಿಂದಿ ಸಂಖ್ಯೆ, ಒಂದು ಕನ್ನಡ ನಂತರ ಒಂದು ಇಂಗ್ಲೀಷ್ ಸಂಖ್ಯೆ ಉಚ್ಛರಿಸುವಿಕೆ, ಭಾರತದ ದೇಶಗಳು, ರಾಜಧಾನಿಗಳು, ಭಾಷೆ ಗುರ್ತಿಸುವಿಕೆ.

    ಭೂಪಟದಲ್ಲಿ ದೇಶ ಮತ್ತು ರಾಜಧಾನಿ ಗುರ್ತಿಸುವಿಕೆ, ರುಬಿಕಾಸ್ ಕ್ಯೂಬ್ ಬಿಡಿಸುವಿಕೆ, ಪಿರ‌್ಯಾಮಿಡ್, ಸಿಲಿಂಡರ್, ವಿಂಡವಿಲ್ ಮುಂತಾದವುಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರೈಸಲಾಗಿದೆ ಎಂದರು.

    14 ವರ್ಷದವರ ವಿಭಾಗದಲ್ಲಿ 9ನೇ ತರಗತಿಯ ಶ್ರದ್ಧಾ ನಾಗಠಾಣ, ಭಕ್ತಿ ಚಿನಿವಾರ, 12 ವರ್ಷದವರ ವಿಭಾಗದಲ್ಲಿ 6ನೇ ತರಗತಿಯ ವೀರೇಶ ನಾಗಠಾಣ, ಮನೀಷ ಜಾಟ್, ರಿಷಿಕಾ ಸಜ್ಜನ, ಮಹೇಶ ಹೊಸಮನಿ, ಸಂದೀಪ ಆರ್, 11 ವರ್ಷದವರ ವಿಭಾಗದಲ್ಲಿ 5ನೇ ತರಗತಿಯ ವರ್ಷಾರಾಣಿ ಹಿಪ್ಪರಗಿ, ಮಹ್ಮದ್‌ಹುಜೈಫ್ ಭಾವಿಮನಿ, ಮಲ್ಲಿಕಾರ್ಜುನ ತಾಳಿಕೋಟಿ, ಭುವನಾ ಕಟ್ಟಿಮನಿ, ಶರತ್ ಸಜ್ಜನ, ಅಭಿಷೇಕ ಮಠ, ವೈಭವಿ ಮ್ಯಾಗೇರಿ, ಯಶವಂತ ಸಾರಥಿ, 10 ವರ್ಷದವರ ವಿಭಾಗದಲ್ಲಿ 4ನೇ ತರಗತಿಯ ವೇದಾಂತ ಚಿನಿವಾರ ತಮ್ಮ ಸಾಧನಾ ಚಟುವಟಿಕೆಗಳ ಪ್ರಾಯೋಗಿಕ ಪ್ರದರ್ಶನ ನೀಡಿ ಎಲ್ಲರ ಪ್ರಶಂಸೆಗೆ ಭಾಜನರಾದರು ಎಂದರು.

    ವಿದ್ಯಾರ್ಥಿಗಳ ಈ ಸಾಧನೆಯನ್ನು ಪಾಲಕರು, ಸಾರ್ವಜನಿಕರೊಂದಿಗೆ ಹಂಚಿಕೊಂಡು ಸಂಭ್ರಮಿಸಲು ಫೆ. 10ರಂದು ಸಂಜೆ ಶಾಲೆಯ ಆವರಣದಲ್ಲಿ ಇದೇ ಮೊದಲ ಬಾರಿಗೆ ಜ್ಞಾನ-2ಕೆ 24 (ಶೈಕ್ಷಣಿಕ ಶ್ರೇಷ್ಠತೆ) ಹೆಸರಿನಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಲಾಗಿದೆ ಎಂದರು. ಪಾಲಕರಾದ ಶರಣು ಸಜ್ಜನ, ರಾಜು ದಡ್ಡಿ ಹಾಗೂ ಶಿಕ್ಷಕರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts