More

    ಒಣಮೆಣಸಿನಕಾಯಿ ಆವಕದಲ್ಲೂ ದಾಖಲೆ

    ಬ್ಯಾಡಗಿ: ಸುಪ್ರಸಿದ್ಧ ಬ್ಯಾಡಗಿ ಒಣಮೆಣಸಿನಕಾಯಿಯ ಮಾರುಕಟ್ಟೆಗೆ ಸೋಮವಾರ 122722 ಚೀಲಗಳು ಆವಕವಾಗುವ ಮೂಲಕ ಪ್ರಸಕ್ತ ಹೊಸ ದಾಖಲೆ ಬರೆದಿದೆ.

    ಡಿ. 28ರಂದು 105090 ಚೀಲ, 31ರಂದು 101738 ಚೀಲ ಹಾಗೂ ಜ. 4ರಂದು 122722 ಚೀಲಗಳು ಆವಕವಾಗಿದ್ದು, ಮಾರುಕಟ್ಟೆ ವಾರದಿಂದ ವಾರಕ್ಕೆ ಏರಿಕೆಯತ್ತ ಸಾಗಿದೆ. ಡಬ್ಬಿ ತಳಿಗೆ ಕಳೆದ ವಾರ ಕ್ವಿಂಟಾಲ್​ಗೆ 55,239 ರೂ. ದರದಲ್ಲಿ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಖರೀದಿದಾರರು ಹಾಗೂ ದಲ್ಲಾಳಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದ್ದು, ಮಾರುಕಟ್ಟೆ ಬೆಳವಣಿಗೆ, ಮಾರುಕಟ್ಟೆ ಶುಲ್ಕ ಸಂಗ್ರಹ ಹೆಚ್ಚಲಿದೆ. ಸೋಮವಾರ ಕಡ್ಡಿ ಕ್ವಿಂಟಾಲ್​ಗೆ 1569 ರಿಂದ 32009 ರೂ., ಡಬ್ಬಿತಳಿ 2589 ರಿಂದ 48009 ರೂ., ಗುಂಟೂರು 760 ರಿಂದ 13809 ರೂ. ದರದಲ್ಲಿ ಮಾರಾಟವಾಗಿವೆ. ಒಟ್ಟು 257 ದಲಾಲರ ಅಂಗಡಿಯಲ್ಲಿ 22209 ಲಾಟ್ ಹಾಕಲಾಗಿತ್ತು. ಈ ಪೈಕಿ 730 ಲಾಟ್​ಗಳು ತಿರಸ್ಕೃತವಾಗಿವೆ. 348 ಖರೀದಿದಾರರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ್ರ ತಿಳಿಸಿದ್ದಾರೆ.

    ಎಲ್ಲ ಚೀಲಕ್ಕೆ ಟೆಂಡರ್

    ಎರಡು ದಿನಗಳಿಂದ ಮೋಡ ಕವಿದ ವಾತಾವರಣದಿಂದ ಮಾರುಕಟ್ಟೆಯಲ್ಲಿ ಆತಂಕ ಉಂಟಾಗಿತ್ತು. ಭಾನುವಾರ ತಡರಾತ್ರಿ ಸ್ವಲ್ಪ ಮಳೆ ಉದುರಿದ ಪರಿಣಾಮ ಲಕ್ಷಾಂತರ ಚೀಲ ಮೆಣಸಿನಕಾಯಿ ಚೀಲಗಳನ್ನು ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ಹಾಗೂ ದಲಾಲಿ ಅಂಗಡಿಯವರಿಗೆ ದೊಡ್ಡ ಸಮಸ್ಯೆಯಾಯಿತು. ಮೆಣಸಿನಕಾಯಿ ಖರೀದಿಗೆ ಹಿಂದೇಟು ಹಾಕಬಹುದೆಂಬ ಊಹೆ ಹುಸಿಗೊಳಿಸಿ, ಟೆಂಡರ್​ಗಿಟ್ಟಿದ್ದ ಎಲ್ಲ ಚೀಲಗಳನ್ನು ಖರೀದಿಸಿದ್ದು, ರೈತರು ನಿಟ್ಟುಸಿರು ಬಿಡುವಂತಾಯಿತು.

    ಗಿಜುಗುಡುತ್ತಿದ್ದ ಮಾರುಕಟ್ಟೆ: ಭಾನುವಾರ ರಾತ್ರಿಯಿಂದ ಆಂಧ್ರಪ್ರದೇಶ, ಬಳ್ಳಾರಿ, ರಾಯಚೂರು, ಗದಗ, ಹುಬ್ಬಳ್ಳಿ, ಲಕ್ಷೇಶ್ವರ, ಹೊಸಪೇಟೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ರೈತರು ಆಗಮಿಸಿದ್ದರು. 300ಕ್ಕೂ ಹೆಚ್ಚು ವಾಹನಗಳು ಮಾರುಕಟ್ಟೆ ಹೊರಗೆ ಸರದಿಯಲ್ಲಿ ನಿಂತಿದ್ದವು. ಹೀಗಾಗಿ ಮಾರುಕಟ್ಟೆ ವ್ಯಾಪಾರಸ್ಥರು, ರೈತರಿಂದ ತುಂಬಿ ತುಳುಕುತ್ತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts