More

    14ರಿಂದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಮರು ಪ್ರತಿಷ್ಠಾಪನೆ

    ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿ ಮಲ್ಲವನಘಟ್ಟದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಮರು ಪ್ರತಿಷ್ಠಾಪನೆ, ನೂತನ ವಿಮಾನ ಗೋಪುರ, ಕಳಶ ಪ್ರತಿಷ್ಠಾಪನಾ ಹಾಗೂ ಮಹಾ ಕುಂಭಾಭಿಷೇಕವು ಮಾ.14 ರಿಂದ 16 ವರೆಗೆ ನಡೆಯಲಿದೆ ಎಂದು ಮಲ್ಲನಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ತಿಳಿಸಿದರು.

    ಸುಮಾರು 500 ವರ್ಷಗಳ ಇತಿಹಾಸವಿರುವ ಶ್ರೀ ವೀರಾಂಜನೇಯ ದೇವಸ್ಥಾನ ಶಿಥಿಲಗೊಂಡಿತ್ತು. ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಶಿಶ್ರಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಕಾರದೊಂದಿಗೆ 1 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಮೈಸೂರಿನ ಆಚಾರ್ಯ ವಿದ್ವಾನ್ ವಿ.ಆರ್.ಹರಿಪ್ರಸಾದ್ ಗುರೂಜಿಯವರ ನೇತತ್ವದಲ್ಲಿ ಮಾ.14ರಂದು ಸಂಜೆ 5 ಗಂಟೆಗೆ ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ, ಪುಣ್ಯಾಹವಾಚನ, ವಾಸ್ತುಹೋಮ, ವಾಸ್ತುಬಲಿ, ದೃಷ್ಟಿದೋಷ ನಿವಾರಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ವೀರಗಾಸೆ ಕುಣಿತ ಹಾಗೂ ರಾತ್ರಿ 9 ಗಂಟೆಗೆ ರಾಮಾಯಣ ಕುರಿತಾದ ಹರಿಕಥೆಯನ್ನು ಏರ್ಪಡಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮಾ.15ರಂದು ಪುಣ್ಯಾಹ, ಪಂಚಗವ್ಯ ಆರಾಧನೆ, ಪ್ರಧಾನ ಕಳಶಾರಾಧನೆ, ವಿಮಾನಗೋಪುರ ಕಳಶಾರಾಧನೆ, ನವಗ್ರಹ ಮೃತ್ಯುಂಜಯ ಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಸಲಾಗುತ್ತದೆ. ರಾತ್ರಿ 9 ಗಂಟೆಗೆ ಕುರುಕ್ಷೇತ್ರ ನಾಟಕವನ್ನು ಏರ್ಪಡಿಸಲಾಗಿದೆ.
    ಮಾ.16ರ ಶನಿವಾರದಂದು ಮಧ್ಯಾಹ್ನ 3 ಘಂಟೆಗೆ ವೀರಗಾಸೆ ಕುಣಿತ ಹಾಗೂ ರಾತ್ರಿ 9 ಗಂಟೆಗೆ ಸತ್ಯವ್ರತ ಅಥವಾ ಶನಿಪ್ರಭಾವ ನಾಟಕವನ್ನು ಏರ್ಪಡಿಸಲಾಗಿದೆ ಎಂದರು.

    ಕಾರ್ಯಕ್ರಮಕ್ಕೆ ಹಾಲಿ ಸಚಿವರು, ಮಾಜಿ ಸಚಿವರು, ಜನಪ್ರತಿನಿಧಿಗಳು ಸೇರಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದು ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
    ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜೇಗೌಡ, ಜವರೇಗೌಡ, ಮುಖಂಡರಾದ ನಂಜುಂಡೇಗೌಡ, ಅನಂತ್, ಉಮೇಶ್ ಭಾಗವಹಿಸಿದ್ದರು. ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts