More

    ಕೇವಲ 4 ಪದಾರ್ಥಗಳಿಂದ ಈ ಸಿಹಿ ತಿಂಡಿ ತಯಾರಿಸಿ

    ಬೆಂಗಳೂರು: ಕೆಲವೆಡೆ ಶ್ರಾವಣ ಪ್ರಾರಂಭವಾಗಿದೆ. ಹಾಗಾಗಿ ಅನೇಕ ಜನರು ಸೋಮವಾರ ಉಪವಾಸ ಮಾಡುತ್ತಾರೆ. ಈ ಸಮಯದಲ್ಲಿ ದೇವರಿಗೆ ಪ್ರಸಾದವನ್ನು ಅರ್ಪಿಸಲು ಮತ್ತು ಉಪವಾಸಕ್ಕಾಗಿ ವಿವಿಧ ರೀತಿಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. ನೀವು ಸಹ ಏನನ್ನಾದರೂ ಸಿಹಿ ತಿಂಡಿ ಮಾಡಲು ಯೋಚಿಸುತ್ತಿದ್ದರೆ, ನೀವು ಈ ರೆಸಿಪಿ ಪ್ರಯತ್ನಿಸಬಹುದು. ಶ್ರಾವಣದ ಸೋಮವಾರದಂದು ಈ ಕಲಾಕಂಡ್ ಸೇವಿಸಬಹುದು. 4 ಪದಾರ್ಥಗಳೊಂದಿಗೆ ಈ ಸ್ವೀಟ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.

    ತಯಾರಿಸಲು ಬೇಕಾದ ಪದಾರ್ಥಗಳು
    – ಹಾಲಿನ ಪುಡಿ
    – ಕಂಡೆನ್ಸ್ಡ್ ಮಿಲ್ಕ್
    – ಪನೀರ್
    – ಪಿಸ್ತಾ

    ಮಾಡುವುದು ಹೇಗೆ?
    ಈ ಸಿಹಿ ತಿಂಡಿ ತಯಾರಿಸಲು ಮೊದಲನೆಯದಾಗಿ, ಬಾಣಲೆಯಲ್ಲಿ ಹಾಲಿನ ಪುಡಿ ಮತ್ತು ಕಂಡೆನ್ಸ್ಡ್ ಮಿಲ್ಕ್ ಸೇರಿಸಿ. ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಪನೀರ್ ತುಂಡುಗಳನ್ನು ಸೇರಿಸಿ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದು ಸುಮಾರು 15 ರಿಂದ 20 ನಿಮಿಷಗಳಲ್ಲಿ ಥಿಕ್ ಆಗಲು ಪ್ರಾರಂಭವಾಗುತ್ತದೆ. ಅದು ಸ್ವಲ್ಪ ಬಿಸಿ ಕಡಿಮೆಯಾದಾಗ ಗ್ಯಾಸ್ ಆಫ್ ಮಾಡಿ. ಈಗ ಅದನ್ನು ಹೊರತೆಗೆಯಿರಿ. ಅದಕ್ಕೆ ಸ್ವಲ್ಪ ಕತ್ತರಿಸಿದ ಪಿಸ್ತಾ ಹಾಕಿ ಫ್ರಿಡ್ಜ್ ನಲ್ಲಿಡಿ. ನಂತರ ಕಟ್ ಮಾಡಿ. ಈಗ ರುಚಿಕರವಾದ ಕಲಾಕಂಡ್ ಸಿದ್ಧವಾಗಿದೆ.

    ಕ್ಲಿಯರ್ ಆಗಿರುವ ಹೊಳೆಯುವ ಚರ್ಮ ಬೇಕೇ? ಬೆಳಗ್ಗೆ ಎದ್ದ ತಕ್ಷಣ ಈ ಪಾನೀಯಗಳನ್ನು ಕುಡಿಯಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts