More

    ಸಂಚಾರಿಭಾವದ ಶ್ರೀ ವಿಶ್ವೇಶ ತೀರ್ಥರು, ಸಂಸ್ಮರಣಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಶ್ರೀ ಮೆಲುಕು

    ಉಡುಪಿ: ಪೇಜಾವರ ಶ್ರೀ ವಿಶ್ವೇಶ ತೀರ್ಥರು ಚಾತುರ್ಮಾಸ್ಯ ಹೊರತುಪಡಿಸಿ ಉಳಿದ ದಿನ ನಿತ್ಯ ಪ್ರವಾಸದಲ್ಲಿ ಇರುತ್ತಿದ್ದರು. ಅವರದ್ದು ಸ್ಥಾಯಿ ಭಾವವಲ್ಲ, ಸಂಚಾರಿ ಭಾವ. ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೋಸ್ಕರವೇ ಸಂಚಾರ ಮಾಡುತ್ತಿದ್ದ ಅವರು, ಒಂದೇ ದಿನ 6 ಸಾವಿರ ಕಿ.ಮೀ. ಪ್ರಯಾಣ ಮಾಡಿದ ದಾಖಲೆ ಹೊಂದಿದ್ದಾರೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
    ಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ವಿಶ್ವೇಶತೀರ್ಥರ ಪ್ರಥಮ ಆರಾಧನೆ ಪ್ರಯುಕ್ತ ಆಯೋಜಿಸಲಾಗಿದ್ದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಶ್ರೀಗಳ ಸರಳತೆ ಜನಮೆಚ್ಚುಗೆಗೆ ಪಾತ್ರವಾಗಿತ್ತು. ದಿನಕ್ಕೆ ಕೇವಲ 4 ಗಂಟೆ ನಿದ್ರಿಸುತ್ತಿದ್ದರು. ಇದರಿಂದಲೇ ಅವರಿಗೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
    ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಶ್ರೀಗಳು ತಮ್ಮ ಛಾಪು ಮೂಡಿಸಿದ್ದಾರೆ. ಅನೇಕ ವಿದ್ಯಾರ್ಥಿಗಳನ್ನು ತಯಾರಿಸಿ ತತ್ವ ಪ್ರಸಾರ ಮಾಡಿಸಿ ಅಧ್ಯಾತ್ಮಿಕ ಕ್ಷೇತ್ರಕ್ಕೆ, ದೀನ-ದಲಿತರಿಗೆ ಸಹಾಯ ಮಾಡುವ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ, ಎಲ್ಲ ನಾಯಕರಿಗೆ ಮಾರ್ಗದರ್ಶನ ಮಾಡುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದರು.

    ಪರ್ಯಾಯ ಅದಮಾರು ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ವಿಶ್ವೇಶ ತೀರ್ಥರು ಸರಳ ವ್ಯಕ್ತಿತ್ವದೊಂದಿಗೆ ಸಾಮಾನ್ಯ ಜನರಿಗೂ ಬೇಕಾಗಿ ನಿಸ್ವಾರ್ಥದಿಂದ ಸಮಾಜಕ್ಕೋಸ್ಕರ ಬದುಕಿದ್ದರು. ಮಧ್ವಾಚಾರ್ಯರ ತತ್ವದೊಂದಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ನಿತ್ಯಸಂಚಾರಿಗಳಾಗಿ ದೇಶದೆಲ್ಲೆಡೆ ತನ್ನ ಛಾಪನ್ನು ಮೂಡಿಸಿ ಆರ್ತರಿಗೆ ಸ್ಪಂದಿಸಿದ ಏಕೈಕ ಸನ್ಯಾಸಿಯಾಗಿದ್ದರು ಎಂದರು.
    ಡಾ.ಆನಂದ ತೀರ್ಥ ಸಗ್ರಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts