More

    ‘ಲಾಕ್​ಡೌನ್​ ಮಾಡಲು ಸಿದ್ಧ, ಆದರೆ…’ – ಸುಪ್ರೀಂ ಮುಂದೆ ದೆಹಲಿ ಸರ್ಕಾರ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಚಿಂತಾಜನಕ ಸ್ಥಿತಿ ತಲುಪಿದಂತೆ, ಸನ್ನಿವೇಶವನ್ನು ತಿಳಿಯಾಗಿಸಲು ನಗರದಲ್ಲಿ ಎರಡು ದಿನಗಳ ಲಾಕ್​ಡೌನ್​ ವಿಧಿಸಬಹುದೇ ಎಂದು ಸುಪ್ರೀಂ ಕೋರ್ಟ್​ ಪ್ರಶ್ನಿಸಿತ್ತು. ಈ ಬಗ್ಗೆ ಇಂದು(ನ.15) ಕೋರ್ಟ್​ಗೆ ತನ್ನ ಪ್ರತಿಕ್ರಿಯೆ ಸಲ್ಲಿಸಿದ ದೆಹಲಿ ಸರ್ಕಾರ, ಅಕ್ಕಪಕ್ಕದ ರಾಜ್ಯಗಳ ವ್ಯಾಪ್ತಿಗೆ ಬರುವ ಇಡೀ ರಾಷ್ಟ್ರೀಯ ರಾಜಧಾನಿ ಪ್ರದೇಶ​(ಎನ್​ಸಿಆರ್​)ಕ್ಕೆ ಕೇಂದ್ರ ಸರ್ಕಾರ ಅಥವಾ ಕಮಿಷನ್​ ಫಾರ್​​ ಏರ್​​ ಕ್ವಾಲಿಟಿ ಮ್ಯಾನೇಜ್​​​ಮೆಂಟ್​​ನವರು ನಿರ್ಬಂಧಗಳನ್ನು ವಿಧಿಸಿದಲ್ಲಿ, ದೆಹಲಿಯಲ್ಲೂ ಲಾಕ್​ಡೌನ್​ ತೆರನ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದೆ. 

    ವಾಯು ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ವಿವರ ನೀಡಿದ ದೆಹಲಿ ಸರ್ಕಾರ, ಮಹಾನಗರದ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಒಂದು ವಾರ ನಡೆಸುವುದಿಲ್ಲ. ಸರ್ಕಾರಿ ಅಧಿಕಾರಿಗಳು ವರ್ಕ್​ ಫ್ರಂ ಹೋಂ ಮಾಡುತ್ತಿದ್ದು, ಖಾಸಗಿ ಕಛೇರಿಗಳಿಗೂ ವರ್ಕ್​ ಫ್ರಂ ಹೋಂ ಮಾರ್ಗ ಅನುಸರಿಸಲು ಸಲಹೆ ನೀಡಲಾಗಿದೆ. ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು 3 ದಿನಗಳ ಮಟ್ಟಿಗೆ ನಿಲ್ಲಿಸಲಾಗಿದೆ ಎಂದಿದೆ. “ಸ್ಥಳೀಯ ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿಯಲ್ಲಿ ಲಾಕ್​ಡೌನ್​​ ವಿಧಿಸಲು ಸಿದ್ಧವಿದ್ದೇವೆ. ಆದರೆ ದೆಹಲಿಯ ಚಿಕ್ಕ ಸರಹದ್ದಿನಲ್ಲಿ ಮಾತ್ರ ಲಾಕ್​ಡೌನ್​ ವಿಧಿಸುವುದರಿಂದ ಸೀಮಿತ ಪರಿಣಾಮವಾಗುತ್ತದೆ. ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಡ ಇದೇ ತೆರನ ಕ್ರಮ ವಹಿಬೇಕಾಗುವುದು” ಎಂದು ಅರವಿಂದ್​ ಕೇಜ್ರಿವಾಲ್​ ಸರ್ಕಾರ ಹೇಳಿದೆ.

    ಇದನ್ನೂ ಓದಿ: ದೆಹಲಿ ಎರಡು ದಿನ ಲಾಕ್?; ಅಪಾಯ ಮಟ್ಟ ಮೀರಿದ ಮಾಲಿನ್ಯ, ಸುಪ್ರೀಂ ಕೋರ್ಟ್ ಸಲಹೆ

    ಜಗತ್ತಿನ ಅತ್ಯಂತ ಪ್ರದೂಷಿತ ನಗರವೆಂಬ ಕುಖ್ಯಾತಿ ಪಡೆದಿರುವ ದೆಹಲಿಯಲ್ಲಿ ಶುಕ್ರವಾರದಂದು ಏರ್​ ಕ್ವಾಲಿಟಿ ಇಂಡೆಕ್ಸ್​​(ಏಕ್ಯೂಐ) 471 ರ ಅತಿರೇಕದ ಮಟ್ಟ ತಲುಪಿತ್ತು. ಶನಿವಾರದಂದು 437 ಕ್ಕೆ ತಲುಪಿದ್ದ ಏಕ್ಯೂಐ, ಭಾನುವಾರದಂದು ಸರಾಸರಿ 330ಕ್ಕೆ ಇಳಿದಿದೆ. ಇದಕ್ಕೆ ಹರಿಯಾಣ ಮತ್ತು ಪಂಜಾಬ್​​ನ ರೈತರು ಹೊಲಗಳಲ್ಲಿ ಬೆಂಕಿ ಹಾಕುವುದರಲ್ಲಿ ಉಂಟಾದ ಇಳಿಕೆಯೂ ಕಾರಣ ಎನ್ನಲಾಗಿದೆ. (ಏಜೆನ್ಸೀಸ್)

    VIDEO| ಆಹಾ! ಹೊಸ ‘ದೃಷ್ಟಿ’ ಸಿಕ್ಕಿದ ಈ ಪೋರಿಯ ಸಂತಸ ನೋಡಿ

    1947ರಲ್ಲಿ ಯಾವ ಯುದ್ಧ ನಡೆಯಿತು ಹೇಳಿದರೆ, ಪದ್ಮಶ್ರೀ ವಾಪಸ್​ ಕೊಡುವೆ ಎಂದ ಕಂಗನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts