More

    ಸಮುದಾಯ ಭವನದಲ್ಲಿ ವಾಚನಾಲಯ


    ಸಮುದಾಯ ಭವನದಲ್ಲಿ ವಾಚನಾಲಯ
    ನರಗುಂದ, ವಾಚನಾಲಯ, ಸಮುದಾಯ ಭವನ, ಪಂಚಮಸಾಲಿ ಸಮಾಜ, Naragunda, Reading Room, Community Hall, Panchmasali Samaj,
    ನರಗುಂದ: ಸಿ.ಸಿ.ಪಾಟೀಲ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಸಮುದಾಯ ಭವನ ನಿರ್ವಣಕ್ಕೆ ಎರಡು ಎಕರೆ ಜಮೀನು ಹಾಗೂ 2.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಭವನದಲ್ಲಿ ವಿದ್ಯಾರ್ಥಿಗಳಿಗಾಗಿ ವಾಚನಾಲಯ ತೆರೆಯಲು ನಿರ್ಣಯಿಸಲಾಗಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಡಾ.ಸಿ.ಕೆ.ರಾಚನಗೌಡ್ರ ಹೇಳಿದರು.
    ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕೂ ಅಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿವಿಧ ತರಗತಿಗಳಲ್ಲಿ ಅಧ್ಯಯನ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ತಿಳಿದುಕೊಳ್ಳುವ ಸಲುವಾಗಿ ಸಮೀಕ್ಷೆ ಕೈಗೊಳ್ಳಲಾಗುವುದು ಎಂದರು.
    ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಮಾಜದ ಮುಖಂಡ ಯೋಗೇಶಗೌಡ ಪಾಟೀಲ ಅವರು ಮಾಸಿಕ 5ಸಾವಿರ ರೂಪಾಯಿ ವೈಯಕ್ತಿಕ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಇಂತಹ ಪರಿಪಾಠ ಸಮಾಜದ ಎಲ್ಲ ಧುರೀಣರಿಂದ ನಡೆಯುವಂತಾಗಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ಪ್ರಾರಂಭಿಸಲಾಗುವುದು ಎಂದರು.
    ಭೈರನಹಟ್ಟಿ ಶಾಂತಲಿಂಗ ಮಹಾಸ್ವಾಮಿಗಳು, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ, ಎಸ್.ಡಿ. ಕೊಳ್ಳಿಯವರ, ಡಾ. ಸುರೇಶ ಭೂಮಣ್ಣವರ, ಮರಿಗೌಡ ಮುದ್ದನಗೌಡ್ರ, ಪ್ರಶಾಂತಗೌಡ ಚನ್ನಪ್ಪಗೌಡ್ರ ಮಾತನಾಡಿದರು. ಮಂಜುನಾಥ ನರೇಂದ್ರ ಉಪನ್ಯಾಸ ನೀಡಿದರು. 27 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ಉಪಾಧ್ಯಕ್ಷ ಪ್ರಭುಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ನಾಗರಾಜ ಕರೆಸಿರಿ, ಅನ್ನಪೂರ್ಣ ಯಲಿಗಾರ, ಅಜೀತಗೌಡ ಪಾಟೀಲ, ನವೀನ ಪಾಟೀಲ, ರಾಚನಗೌಡ ಪಾಟೀಲ ಉಪಸ್ಥಿತರಿದ್ದರು. ಪ್ರಶಾಂತ ಅಳಗವಾಡಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts