More

    ಓದುಗರಿಗೆ ಉತ್ತಮ ವಾತಾವರಣ ನಿರ್ಮಿಸಿ

    ಕೂಡ್ಲಿಗಿ: ಗ್ರಾಮೀಣ ಭಾಗದ ಗ್ರಂಥಪಾಲಕರು ಶಿಕ್ಷಕರಿದ್ದಂತೆ ಎಂದು ತಾಪಂ ಇಒ ವೈ.ರವಿಕುಮಾರ್ ಹೇಳಿದರು.

    ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಸೋಮವಾರ ತಾಪಂ ಹಾಗೂ ಮೈಸೂರಿನ ಎಸ್‌ಐಆರ್‌ಡಿ ತರಬೇತಿ ಸಂಸ್ಥೆ ತಾಲೂಕಿನ ಗ್ರಂಥಪಾಲಕರಿಗೆ ಏರ್ಪಡಿಸಿರುವ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಂಥಾಲಯಗಳು ಸ್ಥಾಪನೆಗೊಂಡಿದ್ದು, ಓದುಗರ ಸೆಳೆಯಲು ಉತ್ತಮ ವಾತಾವರಣ, ಸೇವೆ ನೀಡಬೇಕು. ಅಲ್ಲದೆ ಓದುಗರಿಗೆ ಸರಿಯಾದ ಆಸನ, ನೀರು ಮತ್ತು ಉತ್ತಮ ಗಾಳಿ, ಬೆಳಕು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಮೀಣ ಪ್ರೌಢಶಾಲೆ ಹಾಗೂ ಕಾಲೇಜು ವಿಧ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಸಂಗ್ರಹಿಸಬೇಕು ಎಂದರು.

    ಇದನ್ನೂ ಓದಿ:http://ಓದುಗರಿಗೆ ಉತ್ತಮ ವಾತಾವರಣ ನಿರ್ಮಿಸಿ
    ದಿನಪತ್ರಿಕೆ, ಸ್ಪರ್ಧಾತ್ಮಕ, ಮಾಸಿಕ ಪತ್ರಿಕೆಗಳು ಇತ್ಯಾದಿ ಪುಸ್ತಕಗಳನ್ನು ಒದಗಿಸಬೇಕು. ಒಟ್ಟಾರೆ ಗ್ರಂಥಾಲಯಗಳು ಜ್ಞಾನವೃದ್ಧಿಸುವ ಕೇಂದ್ರಗಳಾಗಿದ್ದು, ಸದಸ್ಯರ ನೋಂದಣಿ ಹೆಚ್ಚಿಗೆ ಮಾಡಿಸಬೇಕು. ಜನರ ಜ್ಞಾನ ವಿಕಾಸಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದರೆ ಸಾರ್ಥಕ ಕಾರ್ಯವಾಗಲಿದೆ ಎಂದು ತಿಳಿಸಿದರು.

    ತಾಪಂ ವಿಷಯ ನಿರ್ವಾಹಕ ಕೆ.ಹಾಲಸ್ವಾಮಿ, ಮೈಸೂರು ಎಸ್‌ಐಆರ್‌ಡಿ ಡಿಟಿಸಿ ವಸಂತ ಕುಮಾರ್, ತಾಲೂಕು ಗ್ರಂಥಾಲಯದ ಸಹಾಯಕ ಸುರೇಶ್, ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರಾದ ಪುಷ್ಪಲತಾ, ಜಲಜಾಕ್ಷಿ, ದುರುಗಮ್ಮ, ಪ್ರಮೀಳಾ, ರಾಧಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts