More

    ಸಿಬಿಐ ದಾಖಲಾತಿಯಲ್ಲಿ ಸತ್ತ ಮಹಿಳೆ, ನ್ಯಾಯಾಲಯದ ಮುಂದೆ ಹಾಜರು! ಗಾಬರಿಯಾದ್ರು ಅಧಿಕಾರಿಗಳು

    ಪಟನಾ: ಬಿಹಾರದ ಪತ್ರಕರ್ತ ರಾಜದೇವ್​ ರಂಜನ್​ ಹತ್ಯೆ ಪ್ರಕರಣದಲ್ಲಿ ಹೊಸ ಟ್ವಿಸ್​​ ಸಿಕ್ಕಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ದಿಂದಲೇ ಮೃತ ಘೋಷಿಸಲ್ಪಟ್ಟಿದ್ದ ವೃದ್ಧೆ ಬದುಕಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    ಪ್ರಕರಣದಲ್ಲಿ ಈಕೆ ಸಾವನ್ನಪ್ಪಿದ್ದಾಗಿ ವರದಿ ನೀಡಲಾಗಿತ್ತು. ಅಲ್ಲದೇ ನ್ಯಾಯಾಲಯಕ್ಕೂ ಸಿಬಿಐ ಈ ವೃದ್ಧೆ ಮಹಿಳೆ ಮೃತಪಟ್ಟಿರುವ ಮರಣ ಪತ್ರವನ್ನು ಸಹ ಸಲ್ಲಿಸಿದ್ದರು. ಆದರೆ ಈಗ ಆಗಿದ್ದೇ ಬೇರೆ.

    ಇಷ್ಟೆಲ್ಲಾ ಆದಮೇಲೂ ಶನಿವಾರ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯದ ಮುಂದೆ ಮಹಿಳೆ ಹಾಜರಾಗಿದ್ದಾರೆ. ಸ್ವಾಮಿ.. ನಾನು ಬದುಕಿದ್ದೇನೆ. ಎಂದು ಹೇಳಿದ್ದು, ಸಿಬಿಐ ಅಧಿಕಾರಿಗಳೇ ಶಾಕ್​ ಆಗಿದ್ದಾರೆ.

    ಪತ್ರಕರ್ತ ರಂಜನ್​ ಕೊಲೆ ಪ್ರಕರಣದಲ್ಲಿ ಬಾದಾಮಿ ದೇವಿ ಎಂಬ ವೃದ್ಧ ಮಹಿಳೆ ಸಾಕ್ಷಿಯಾಗಿದ್ದಾರೆ. ಮೇ 24 ರಂದು ಸಿಬಿಐ ಈಕೆ ಮೃತಪಟ್ಟಿದ್ದಾಳೆ ಎಂದು ವರದಿ ಸಲ್ಲಿಸಿದ್ದಾರೆ. ಆದರೆ ಇಂದು ಏಕಾಏಕಿ ನ್ಯಾಯಾಲಯದ ಮುಂದೆ ಹಾಜರಾಗುವ ಮೂಲಕ ಸಿಬಿಐ ಅಧಿಕಾರಿಗಳನ್ನೇ ದಿಗ್ಭ್ರಮೆ ಮೂಡಿಸಿದ್ದಾರೆ. ಸದ್ಯ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.

    ಇನ್ನು ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಈಕೆ ಮೇಲೂ ಹಲ್ಲೆ ನಡೆಯುವ ಸಾಧ್ಯತೆ ಇದ್ದುದರಿಂದ ತನ್ನ ಮನೆ ತೊರೆದು ಬೇರೆಡೆ ವಾಸಿಸುತ್ತಿದ್ದಳು. ಈಗ ಪ್ರಕರಣ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. (ಏಜೆನ್ಸೀಸ್​)

    ನಕಲಿ ಚಾಲಕರಿದ್ದಾರೆ: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ವೇಳೆ ಆಟೋ ಹತ್ತುವ ಮುನ್ನ ಎಚ್ಚರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts