More

    IPL 2023; ಗಾಯದ ಸಮಸ್ಯೆ ನಡುವೆ ಬದಲಿ ಆಟಗಾರರ ಮೊರೆ ಹೋದ RCB

    ಬೆಂಗಳೂರು: ಹಾಲಿ IPL ಋತುವಿನಲ್ಲಿ ಫ್ರಾಂಟೈಸಿಗಳಿಗೆ ಗಾಯದ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು ಬದಲಿ ಆಟಗಾರರ ಹುಡುಕಾಟದಲ್ಲಿ ತೊಡಗಿವೆ.

    ಇನ್ನು RCB ತಂಡಕ್ಕೂ ಹಾಯದ ಸಮಸ್ಯೆ ಕಾಡುತ್ತಿದ್ದು ಹಿಮ್ಮಡಿ ಸಮಸ್ಯೆ ಇಂದ ಬಲಗೈ ಬ್ಯಾಟರ್​ ರಜತ್​ ಪಾಟೀದಾರ್​ ಈ ಬಾರಿಯ IPLನಿಂದ ಹೊರಬಿದ್ದಿದ್ದಾರೆ. ಮೊದಲ ಪಂದ್ಯದಲ್ಲಿ ಫೀಲ್ಡಿಂಗ್​ ಮಾಡುವ ವೇಳೆ ವೇಗಿ ರೀಸ್​ ಟಾಪ್ಲಿ ಕೈಗೆ ಗಾಯ ಮಾಡಿಕೊಂಡಿದ್ದು ಅವರು ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

    ಬದಲಿ ಆಟಗಾರರ ನೇಮಕ

    ಗಾಯಗೊಂಡಿರುವ ರೀಸ್​ ಟಾಪ್ಲಿ ಬದಲಿಗೆ ದಕ್ಷಿಣ ಆಫ್ರಿಕಾದ ವೇಗಿ ವೇಯ್ನ್​ ಪಾರ್ನೆಲ್​, ರಜತ್​ ಪಾಟೀದಾರ್​ ಬದಲಿಗೆ ಕರ್ನಾಟಕ ಮೂಲದ ವೇಗಿ ವೈಶಾಕ್​ ವಿಜಯ್​ ಕುಮಾರ್ ಅವರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬದಲಿ ಆಟಗಾರರನ್ನಾಗಿ ನೇಮಿಸಿಕೊಂಡಿದೆ.

    ಇದನ್ನೂ ಓದಿ: ಸ್ಟಾರ್​ ಆಟಗಾರರ​ ಅಲಭ್ಯತೆ; ವಿದೇಶಿ ಆಟಗಾರನ ಜತೆ ಒಪ್ಪಂದ ಮಾಡಿಕೊಂಡ KKR

    ಆಟಗಾರರ ಹಿನ್ನಲೆ

    ದಕ್ಷಿಣ ಆಪ್ರಿಕಾ ಪರ 56 ಟಿ-20 ಪಂದ್ಯಗಳನ್ನು ಆಡಿರುವ ಪಾರ್ನೆಲ್​ 73 ವಿಕೆಟ್​ ಕಬಳಿಸಿದ್ದಾರೆ. IPLನಲ್ಲಿ 26 ಪಂದ್ಯಗಳನ್ನು ಆಡಿರುವ ಪಾರ್ನೆಲ್​ ಅವರನ್ನು RCB ತಂಡವು 75 ಲಕ್ಷ ರೂಪಾಯಿಗಳನ್ನು ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ.

    ಕರ್ನಾಟಕ ಮೂಲದ ವೇಗಿ ವೈಶಾಕ್​ ವಿಜಯ್​ ಕುಮಾರ್ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ 14 ಟಿ-20 ಪಂದ್ಯಗಳನ್ನು ಆಡಿದ್ದು 22 ವಿಕೆಟ್​ ಕಬಳಿಸಿದ್ದಾರೆ. ವೈಶಾಕ್​ ಅವರನ್ನು RCB ತಂಡವು 20 ಲಕ್ಷ ರೂಪಾಯಿಗಳನ್ನು ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts