More

    ಸತತ 2ನೇ ಬಾರಿ ಪ್ಲೇಆಫ್ ಹಂತಕ್ಕೇರಿದ ಆರ್‌ಸಿಬಿ; ಪಂಜಾಬ್ ಎದುರು 6 ರನ್‌ಗಳ ಜಯ

    ಶಾರ್ಜಾ: ಅರಬ್‌ನಾಡಿನಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 14ನೇ ಐಪಿಎಲ್‌ನಲ್ಲಿ 3ನೇ ತಂಡವಾಗಿ ಪ್ಲೇಆಫ್ ಹಂತಕ್ಕೇರಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಆರ್‌ಸಿಬಿ 6 ರನ್‌ಗಳಿಂದ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಈ ಸಾಧನೆ ಮಾಡಿತು. ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಪಂಜಾಬ್ ತಂಡ ಲೀಗ್ ಹಂತದಲ್ಲಿ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಹೊರಬಿದ್ದಿತು. ಮೊದಲ ಚರಣದಲ್ಲಿ ಪಂಜಾಬ್ ಎದುರು ಅನುಭವಿಸಿದ ಸೋಲಿಗೂ ಆರ್‌ಸಿಬಿ ಸೇಡು ತೀರಿಸಿಕೊಂಡಿತು.

    ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ (57ರನ್, 33 ಎಸೆತ, 3 ಬೌಂಡರಿ, 4 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಆರ್‌ಸಿಬಿ ತಂಡ 7 ವಿಕೆಟ್‌ಗೆ 164 ರನ್ ಕಲೆಹಾಕಿತು. ಬಳಿಕ ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ (57ರನ್, 42 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಕೆಎಲ್ ರಾಹುಲ್ (39ರನ್, 35 ಎಸೆತ, 1 ಬೌಂಡರಿ, 2 ಸಿಕ್ಸರ್) ಬಿರುಸಿನ ಆರಂಭ ನೀಡಿದರು. ಸ್ಪಿನ್ನರ್ ಯಜುವೇಂದ್ರ ಚಾಹಲ್ (29ಕ್ಕೆ 3) ಮಾರಕ ದಾಳಿಗೆ ನಲುಗಿದ ಪಂಜಾಬ್, ಉತ್ತಮ ಆರಂಭದ ನಡುವೆಯೂ ಎಂದಿನಂತೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡು 6 ವಿಕೆಟ್‌ಗೆ 158 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಆರ್‌ಸಿಬಿ: 7 ವಿಕೆಟ್‌ಗೆ 164 (ವಿರಾಟ್ ಕೊಹ್ಲಿ 25, ದೇವದತ್ ಪಡಿಕಲ್ 40, ಗ್ಲೆನ್ ಮ್ಯಾಕ್ಸ್‌ವೆಲ್ 57, ಎಬಿ ಡಿವಿಲಿಯರ್ಸ್‌ 23, ಮೊಹಮದ್ ಶಮಿ 39ಕ್ಕೆ 3, ಮೊಯ್ಸಿಸ್ ಹೆನ್ರಿಕ್ಸ್ 12ಕ್ಕೆ 3), ಪಂಜಾಬ್ ಕಿಂಗ್ಸ್: 6 ವಿಕೆಟ್‌ಗೆ 158 (ಕೆಎಲ್ ರಾಹುಲ್ 39, ಮಯಾಂಕ್ ಅಗರ್ವಾಲ್ 57, ಏಡೆನ್ ಮಾರ್ಕ್ರಮ್ 20, ಯಜುವೇಂದ್ರ ಚಾಹಲ್ 29ಕ್ಕೆ 3, ಜಾರ್ಜ್ ಗಾರ್ಟನ್ 27ಕ್ಕೆ 1, ಶಾಬಾಜ್ ಅಹಮದ್ 29ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts