More

    ಉದ್ಗಮ್​ ಪೋರ್ಟಲ್​ಗೆ 30ಬ್ಯಾಂಕ್​: ಶೇ. 6.5 ರೆಪೋದರ ಮುಂದುವರೆಸಿದ ಆರ್​ಬಿಐ

    ಮುಂಬೈ: ಬ್ಯಾಂಕುಗಳಲ್ಲಿ ಡೆಪಾಸಿಟ್​ ಮಾಡಿ, ಗಡುವು ಮುಗಿದರೂ ಹಿಂಪಡೆಯದವುಗಳ(ಅನ್​ ಕ್ಲೇಮ್ಡ್​ ಡೆಪಾಸಿಟ್ಸ್​)ವಿವರಗಳನ್ನು ತಿಳಿಯಲು ಉದ್ಗಮ್​(ಯುಡಿಜಿಎಎಂ) ಪೋರ್ಟಲ್​ ವ್ಯಾಪ್ತಿಗೆ 30ಬ್ಯಾಂಕುಗಳು ಸೇರಿವೆ. ಈ ವಿವರಗಳನ್ನು ಆರ್​ಬಿಐ ಪ್ರಕಟಿಸಿದೆ.

    ಈ ಪೋರ್ಟಲ್​ ಸಹಾಯದಿಂದ ತಮ್ಮ ಅನ್ ಕ್ಲೇಮ್ಡ್​ ಡೆಪಾಸಿಟ್ಸ್​ ವಿವರ ಯಾವ ಬ್ಯಾಂಕ್​ನಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಆ.17ರಿಂದ ಈ ಪೋರ್ಟಲ್ ಅನ್ನು ಆರ್​ ಬಿಐ ಅನುಷ್ಠಾನಗೊಳಿಸಿತ್ತು.

    ಇದನ್ನೂ ಓದಿ: ನೊಂದ ಕುಟುಂಬಕ್ಕೆ ನೆರವಾದ ಅಂಚೆ ಅಪಘಾತ ವಿಮೆ: 399 ರೂ ಕಟ್ಟಿದ್ದಕ್ಕೆ 10 ಲಕ್ಷ ರೂ ಪರಿಹಾರ

    ಪ್ರಾರಂಭದಲ್ಲಿ 7ಬ್ಯಾಂಕುಗಳಿಗೆ ಸಂಬಂಧಿಸಿದ ವಿವರ ಮಾತ್ರ ಈ ಪೋರ್ಟಲ್ ನಲ್ಲಿ ಲಭ್ಯವಿತ್ತು. ಸೆ.28ಕ್ಕೆ 30 ಬ್ಯಾಂಕುಗಳಿಗೆ ಸಂಬಂಧಿಸಿದ ಡೆಪಾಸಿಟ್​ ಗಳ ವಿವರ ಅರಿಯುವಂತಾಗಲು ಉನ್ನತೀಕರಿಸಲಾಗಿದೆ ಎಂದು ಆರ್​ಬಿಐ ಪ್ರಕಟಿಸಿದೆ. ಅನ್​ಕ್ಲೇಮ್ಡ್ ಡೆಪಾಸಿಟ್​ಗಳಲ್ಲಿ ಶೇ.90ರಷ್ಟು ಈ 30 ಬ್ಯಾಂಕುಗಳ ಗ್ರಾಹಕರಿಗೆ ಸಂಬಂಧಿಸಿದ್ದವು ಆಗಿದ್ದು, ಪ್ರಸ್ತುತ ಈ ಡೆಪಾಸಿಟ್​ಗಳು ಶಿಕ್ಷಣ ಮತ್ತು ಜಾಗೃತಿ (ಡಿಇಎ) ರೂಪದಲ್ಲಿರುವುದು ಗಮನಾರ್ಹ ಸಂಗತಿಯಾಗಿದೆ.

    ಬಹುತೇಕ ಪ್ರಮುಖ ಬ್ಯಾಂಕ್​ಗಳು ಈ ಪೋರ್ಟಲ್​ ಜತೆ ಅನುಸಂದಾನವಾಗಿವೆ. 2023 ಫೆಬ್ರವರಿಯಲ್ಲಿ ಯಾವುದೇ ತರಹದ ಕ್ಲೇಮ್​ ಬಾರದ 35ಸಾವಿರ ಕೋಟಿ ಡೆಪಾಸಿಟ್​ಗಳು ಇದ್ದವು. ಇದರಲ್ಲಿ ಅತ್ಯಧಿಕವಾಗಿ ಎಸ್​ಬಿಐ ಗ್ರಾಹಕರ ಡೆಪಾಸಿಟ್​ಗಳಾಗಿದ್ದವು. 8086 ಕೋಟಿ ರೂ. ಇತ್ತು. ನಂತರದ ಸ್ಥಾನದಲ್ಲಿ ಪಿಎನ್​ಬಿಯಲ್ಲಿ 5340 ಕೋಟಿ ರೂ., ಕೆನರಾ ಬ್ಯಾಂಕ್​ನಲ್ಲಿ 4558ಕೋಟಿ ರೂ., ಬ್ಯಾಂಕ್​ ಆಫ್​ ಬರೋಡಾ ದಲ್ಲಿ 3904ಕೋಟಿ ರೂ. ಇತ್ತು. ನಿಬಂಧನೆಗಳ ಪ್ರಕಾರ ವಾಯಿದೆ ಮುಗಿದು 10ವರ್ಷವಾದರೂ ವಾಪಸ್​ ಪಡೆಯದ ಡೆಪಾಸಿಟ್ಸ್​ಗಳನ್ನು ಬ್ಯಾಂಕ್​ಗಳು ಡಿಇಎಗೆ ಬದಲಿಸಬೇಕಿದೆ.
    ಬದಲಿಸದ ರೆಪೋ ದರ: ಆರ್​ಬಿಐ ತನ್ನ ಪ್ರಮುಖ ಸಾಲದ ದರ(ರೆಪೋ)ವನ್ನು ಸತತ ನಾಲ್ಕನೇ ಬಾರಿಗೆ ಶೇ. 6.5ರಷ್ಟು ಬದಲಾಯಿಸದೆ ಹಾಗೆ ಉಳಿಸಲು ನಿರ್ಧರಿಸಿದೆ.

    ಶುಕ್ರವಾರ ನಡೆದ ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಮಳೆ ಅಭಾವದಿಂದ ಆಹಾರ ಧಾನ್ಯ, ಎಣ್ಣೆ ಕಾಳು ಉತ್ಪಾದನೆ ಕುಸಿತ ಕಾಣುವ ಸಾಧ್ಯತೆಯಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಿದ್ದು, ಅಕ್ಕಿ, ಭತ್ತದಂತಹ ಆಹಾರಧಾನ್ಯಗಳ ಉತ್ಪಾದನೆ ಸಹ ನಿರೀಕ್ಷಿತ ಪ್ರಮಾಣದಲ್ಲಿ ಬರುವುದಿಲ್ಲ. ಜಾಗತಿಕ ಆಹಾರ ಮತ್ತು ಇಂಧನ ಬೆಲೆಗಳಲ್ಲಿ ಏರುಪೇರಾಗಬಹುದು. ಹೀಗಾಗಿ ಹಣದುಬ್ಬರ ದೃಷ್ಟಿಕೋನವು ಅನಿಶ್ಚಿತತೆಯಿಂದ ಕೂಡಿದೆ ಎಂದು ಅವರು ತಿಳಿಸಿದರು.

    ಆಗಸ್ಟ್‌ನಲ್ಲಿ ಹಣದುಬ್ಬರವು ಶೇ.6.83 ತಲುಪಿದ ಹಿನ್ನೆಲೆಯಲ್ಲಿ ಎಂಪಿಸಿ ಸಭೆ ನಡೆಸಲಾಯಿತು. ಪ್ರಸ್ತುತ ತಿಂಗಳ ಅಂಕಿಅಂಶವನ್ನು ಮುಂದಿನ ವಾರ ನಿರೀಕ್ಷಿಸಲಾಗಿದೆ. ಚಿಲ್ಲರೆ ಹಣದುಬ್ಬರವನ್ನು ಎರಡೂ ಕಡೆಗಳಲ್ಲಿ ಶೇ.2 ರಷ್ಟು ಮಾರ್ಜಿನ್‌ನೊಂದಿಗೆ ಶೇ4 ರಷ್ಟು ಉಳಿಸಿಕೊಳ್ಳಲು ಸರ್ಕಾರವು ಕೇಂದ್ರೀಯ ಬ್ಯಾಂಕ್‌ಗೆ ಆದೇಶಿಸಿದೆ.

    ಸೆಪ್ಟೆಂಬರ್‌ನಲ್ಲಿ ಹಣದುಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದರು. ಆದರೆ ಅನಿಶ್ಚಿತತೆ ಮುಂದುವರಿದಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ.5.4 ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಶೇ.5.2 ಕ್ಕೆ ಇಳಿಯುವ ನಿರೀಕ್ಷೆಯಿದೆ.

    ವಿಪತ್ತು ಪರಿಹಾರ ನಿಧಿ: ದೇಣಿಗೆ ನೀಡಿದ ನಂತರ ಹಿಮಾಚಲ ಪ್ರದೇಶ ಸರ್ಕಾರದ ವಿರುದ್ಧ ಕಂಗನಾ ಗರಂ ಆಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts