More

    ಆರ್‌ಬಿಐನಲ್ಲಿ ಕನ್ಸಲ್ಟೆಂಟ್ಸ್, ಸ್ಪೆಷಲಿಸ್ಟ್ಸ್, ಅನಲಿಸ್ಟ್ ಹುದ್ದೆಗಳು, ಅರ್ಜಿ ಸಲ್ಲಿಸಲು ಏಪ್ರಿಲ್ 29 ಕೊನೇ ದಿನ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಲ್ಯಾಟರಲ್ ಎಂಟ್ರಿ ಮೂಲಕ ಗುತ್ತಿಗೆ ಆಧಾರದಲ್ಲಿ ಕನ್ಸಲ್ಟೆಂಟ್ಸ್, ಸ್ಪೆಷಲಿಸ್ಟ್ಸ್, ಅನಲಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಮಾ.27ರಂದು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಆರ್‌ಬಿಐನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

    ಒಟ್ಟು ಹುದ್ದೆಗಳು: 39
    1. ಕನ್ಸಲ್ಟೆಂಟ್ (ಅಪ್ಲೈಡ್ ಮ್ಯಾಥಮೆಟಿಕ್ಸ್): 3 ಹುದ್ದೆಗಳು (ಸಾಮಾನ್ಯ ವರ್ಗ)
    2. ಕನ್ಸಲ್ಟೆಂಟ್ (ಎಕಾನೋಮೆಟ್ರಿಕ್ಸ್): 3 ಹುದ್ದೆಗಳು (ಸಾಮಾನ್ಯ ವರ್ಗ)
    3. ಎಕನಾಮಿಸ್ಟ್ (ಮ್ಯಾಕ್ರೋ ಎಕನಾಮಿಕ್ಸ್ ಮಾಡೆಲಿಂಗ್): 1 ಹುದ್ದೆ (ಸಾಮಾನ್ಯ ವರ್ಗ)
    4. ಡೇಟಾ ಅನಲಿಸ್ಟ್/ಎಂಪಿಡಿ (ಡೇಟಾ ಅನಲಿಟಿಕ್ಸ್): 1 ಹುದ್ದೆ (ಸಾಮಾನ್ಯ ವರ್ಗ)
    5. ಡೇಟಾ ಅನಲಿಸ್ಟ್/(ಡಿಒಎಸ್-ಡಿಎನ್‌ಬಿಎಸ್): 2 ಹುದ್ದೆಗಳು (ಸಾಮಾನ್ಯ ವರ್ಗ)
    6. ಡೇಟಾ ಅನಲಿಸ್ಟ್/(ಡಿಒಆರ್-ಡಿಬಿಆರ್): 2 ಹುದ್ದೆಗಳು (ಸಾಮಾನ್ಯ ವರ್ಗ)
    7. ರಿಸ್ಕ್ ಅನಲಿಸ್ಟ್/(ಡಿಒಎಸ್-ಡಿಎನ್‌ಬಿಎಸ್): 1 ಹುದ್ದೆ (ಸಾಮಾನ್ಯ ವರ್ಗ)
    8. ರಿಸ್ಕ್ ಅನಲಿಸ್ಟ್/(ಡಿಇಐಒ): 2 ಹುದ್ದೆಗಳು (ಸಾಮಾನ್ಯ ವರ್ಗ)
    9. ಐಎಸ್ ಆಡಿಟರ್: 2 ಹುದ್ದೆಗಳು (ಸಾಮಾನ್ಯ ವರ್ಗ)
    10. ಸ್ಪೆಶಲಿಸ್ಟ್ ಇನ್ ೆರೆನ್ಸಿಕ್ ಆಡಿಟ್: 2 ಹುದ್ದೆಗಳು (ಸಾಮಾನ್ಯ ವರ್ಗ)
    11. ಅಕೌಂಟ್ಸ್ ಸ್ಪೆಶಲಿಸ್ಟ್ (ಚಾರ್ಟರ್ಡ್ ಅಕೌಂಟೆಂಟ್): 1 ಹುದ್ದೆ (ಸಾಮಾನ್ಯ ವರ್ಗ)
    12. ಸಿಸ್ಟಂ ಅಡ್ಮಿನಿಸ್ಟ್ರೇಟರ್: 9 ಹುದ್ದೆಗಳು (ಸಾಮಾನ್ಯ ವರ್ಗ 6, ಎಸ್‌ಸಿ 1, ಒಬಿಸಿ 2)
    13. ಪ್ರಾಜೆಕ್ಟ್ ಅಡ್ಮಿನಿಸ್ಟ್ರೇಟರ್: 5 ಹುದ್ದೆಗಳು (ಸಾಮಾನ್ಯ ವರ್ಗ 4, ಒಬಿಸಿ 1)
    14. ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್: 6 ಹುದ್ದೆಗಳು (ಸಾಮಾನ್ಯ ವರ್ಗ 5, ಒಬಿಸಿ 1)

    ವಯೋಮಿತಿ: ಕ್ರಮ ಸಂಖ್ಯೆ 1ರಿಂದ 11ರವರೆಗಿನ ಹುದ್ದೆಗಳಿಗೆ ಅಭ್ಯರ್ಥಿಗಳು ಕನಿಷ್ಠ 30 ವರ್ಷದವರಾಗಿದ್ದು, ಗರಿಷ್ಠ 40 ವರ್ಷದೊಳಗಿರಬೇಕು. ಕ್ರಮ ಸಂಖ್ಯೆ 12ರಿಂದ 14ರವರೆಗಿನ ಹುದ್ದೆಗಳಿಗೆ ಅಭ್ಯರ್ಥಿಗಳು ಕನಿಷ್ಠ 25 ವರ್ಷದವರಾಗಿರಬೇಕು ಮತ್ತು ಗರಿಷ್ಠ 35 ವರ್ಷದೊಳಗಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

    ವಿದ್ಯಾರ್ಹತೆ: ಆಯಾ ಹುದ್ದೆಗಳಿಗೆ ಅನುಗುಣವಾಗಿ ಮ್ಯಾಥಮೆಟಿಕ್ಸ್/ಅಪ್ಲೈಡ್ ಮ್ಯಾಥಮೆಟಿಕ್ಸ್/ಅಪ್ಲೈಡ್ ಎಕಾನೋಮೆಟ್ರಿಕ್ಸ್/ಸ್ಟಾೃಟಿಸ್ಟಿಕ್ಸ್/ಎಕನಾಮಿಕ್ಸ್/ಎಕನಾಮಿಕ್ ಮಾಡೆಲಿಂಗ್/ಮ್ಯಾಕ್ರೋ ಎಕನಾಮಿಕ್ಸ್/ಡೆವೆಲಪ್‌ಮೆಂಟ್ ಮ್ಯಾಕ್ರೋ ಎಕನಾಮಿಕ್ಸ್/ಅಪ್ಲೈಡ್ ಸ್ಟಾೃಟಿಸ್ಟಿಕ್ಸ್/ಮ್ಯಾಥಮೆಟಿಕಲ್ ಸ್ಟಾೃಟಿಸ್ಟಿಕ್ಸ್/ೈನಾನ್ಸ್/ಕಂಪ್ಯೂಟರ್‌ಸೈನ್ಸ್ /ಬಿ.ಇ ಅಥವಾ ಬಿ.ಟೆಕ್ (ಕಂಪ್ಯೂಟರ್ ಸೈನ್ಸ್) ಸೇರಿ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹೊಂದಿರಬೇಕು. ಪಿಎಚ್.ಡಿ ಅಪೇಕ್ಷಣೀಯ. ಆಯಾ ಹುದ್ದೆಗಳಲ್ಲಿ ಕನಿಷ್ಠ 3 ವರ್ಷಗಳ ಕಾರ್ಯಾನುಭವ ಹೊಂದಿರಬೇಕು. ಸಾಮಾನ್ಯವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ.55 ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕ ಗಳಿಸಿರಬೇಕು. ಯಾವೆಲ್ಲ ಹುದ್ದೆಗಳಿಗೆ ಪದವಿ ಶಿಕ್ಷಣದ ಅವಶ್ಯಕತೆಯಿದೆಯೋ ಆ ಹುದ್ದೆಗಳ ಅಭ್ಯರ್ಥಿಗಳು ಕನಿಷ್ಠ ಶೇ.60 ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕ ಗಳಿಸಿರಬೇಕು.

    ಅರ್ಜಿ ಶುಲ್ಕ: ಸಾಮಾನ್ಯ ವರ್ಗ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳು 600 ರೂ., ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಅರ್ಜಿ ಸಲ್ಲಿಕೆಗೆ ಕೊನೇ ದಿನ: ಏಪ್ರಿಲ್ 29

    ಅರ್ಜಿ ಸಲ್ಲಿಸಲು ಆನ್‌ಲೈನ್ ವಿಳಾಸ: www.rbi.org.in

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts