More

    ಗೋಮಾಳ ತೆರವುಗೊಳಿಸಲು ಒತ್ತಾಯ: ರೈತರಿಂದ ಅಹೋರಾತ್ರಿ ಪ್ರತಿಭಟನಾ ಧರಣಿ

    ಮಂಡ್ಯ: ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಗೋಮಾಳ ತೆರವುಗೊಳಿಸಿ ರಸ್ತೆ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ನಗರದಲ್ಲಿ ರೈತರು ಗುರುವಾರದಿಂದ ಅಹೋರಾತ್ರಿ ಪ್ರತಿಭಟನಾ ಧರಣಿ ಆರಂಭಿಸಿದರು.
    ರೈತ ಸಂಘದ ಆಶ್ರಯದಲ್ಲಿ ನಗರದ ತಾಲೂಕು ಕಚೇರಿ ಎದುರು ರೈತರು ಧರಣಿ ನಡೆಸಿ ಮನವಿ ಸಲ್ಲಿಸಿದರು. ಗ್ರಾಮದ ಸರ್ವೇ ನಂ.63 ರಲ್ಲಿ ಇರುವ ಗೋಮಾಳ ತೆರವು ಮಾಡಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಎರಡು ಬಾರಿ ಆದೇಶ ಮಾಡಿದ್ದಾರೆ. ಆದರೆ ತಾಲೂಕು ಆಡಳಿತದ ಅಧಿಕಾರಿಗಳು ಗೋಮಾಳ ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಿಕೊಡದೆ ಇಲ್ಲಸಲ್ಲದ ನೆಪ ಹೇಳುತ್ತಿದ್ದಾರೆಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತೆರವು ಮಾಡುವ ಆಶ್ವಾಸನೆ ನೀಡಿದ್ದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಹೊನಗಾನಹಳ್ಳಿ ಗ್ರಾಮದ ಗೋಮಾಳ ಮತ್ತು ಹುಲ್ಲೇನಹಳ್ಳಿ ಗ್ರಾಮದ ಸರ್ವೇ ನಂ.191 ರಲ್ಲಿ ಭೂ ಸ್ವಾಧೀನ ಮಾಲೀಕತ್ವವನ್ನು ರದ್ದುಪಡಿಸಬೇಕು. ಜತೆಗೆ ಗೋಮಾಳ ತೆರವುಗೊಳಿಸಿ ತುರ್ತಾಗಿ ರಸ್ತೆ ನಿರ್ಮಿಸಿ ಕೊಡುವಂತೆ ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಜಿ.ಎಸ್.ಜಯರಾಮು ಗಾಣದಾಳು, ಆನಂದ್ ಕೊಮ್ಮೇರಹಳ್ಳಿ, ಕಾರ್ತಿಕ್ ಕೊಮ್ಮೇರಹಳ್ಳಿ, ರಾಣಿ ಹುಲ್ಲೇನಹಳ್ಳಿ, ಅಣ್ಣೇಗೌಡ ಜಿ.ಮಲ್ಲಿಗೆರೆ, ಜವರೇಗೌಡ ಗೋಪಾಲಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts