More

    ನ್ಯಾಯಕ್ಕಾಗಿ ಹೆದ್ದಾರಿ ಪಕ್ಕದಲ್ಲಿ ರೈತನ ಏಕಾಂಗಿ ಪ್ರತಿಭಟನೆ: ಮೂರು ದಿನವಾದರೂ ಗಮನಹರಿಸದ ಜಿಲ್ಲಾಡಳಿತ

    ಮಂಡ್ಯ: ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಮಂಡ್ಯದಿಂದ-ಬೀರಗೋನಹಳ್ಳಿವರೆಗೆ ರಾಜ್ಯ ಹೆದ್ದಾರಿ ಕಾಮಗಾರಿಯಲ್ಲಿನ ಗೊಂದಲವನ್ನು ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿ ಜಾಗದ ಮಾಲೀಕರು ಆಗಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರ ವೇದಿಕೆ ರಾಜ್ಯ ಸಂಚಾಲಕ ಎಚ್.ಸಿ.ಶಿವರಾಮು ನಡೆಸುತ್ತಿರುವ ಏಕಾಂಗಿ ಉಪವಾಸ ಸತ್ಯಾಗ್ರಹ ಬುಧವಾರ ಮೂರನೇ ದಿನ ಪೂರೈಸಿದೆ.
    ಗ್ರಾಮದಲ್ಲಿ ನನಗೆ ಸೇರಿದ ಜಾಗ ಸರ್ಕಾರಿ ರಸ್ತೆಯಾಗಿದೆ. ಅಂತೆಯೇ ಈಗಲೂ ನನ್ನ ಸ್ವತ್ತಿನಲ್ಲಿ ಪ್ರಸ್ತುತ ವಾಹನ ಸಂಚಾರ ನಡೆಯುತ್ತಿದೆ. ಸರ್ಕಾರಕ್ಕೆ ಸೇರಿದ ಜಾಗವಿದ್ದರೂ ಹಲವು ವರ್ಷದಿಂದ ರಸ್ತೆ ನಿರ್ಮಾಣ ಮಾಡುತ್ತಿಲ್ಲ. ಎಷ್ಟು ಬಾರಿ ಮನವಿ ಸಲ್ಲಿಸಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.
    ಈ ಹಿನ್ನೆಲೆಯಲ್ಲಿ ಜು.6ರಿಂದ ತನ್ನ ಜಾಗಕ್ಕೆ ಬೇಲಿ ಹಾಕಿಕೊಳ್ಳುವುದಾಗಿ ನಾಮಫಲಕ ಅಳವಡಿಸಲಾಗಿತ್ತು. ಪರಿಣಾಮ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕುಂಞ ಅಹಮದ್ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಅದರಂತೆ ಜಾಗಕ್ಕೆ ಸಂಬಂಧಿಸಿದ ದಾಖಲಾತಿ ತರುವಂತೆ ಸೂಚನೆ ನೀಡಿದ್ದರು. ಆದರೆ ಈವರೆಗೆ ಸಮಸ್ಯೆ ಬಗೆಹರಿಸದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ. ನಮ್ಮ ತಾಳ್ಮೆಗೂ ಮೀತಿ ಇದೆ. ನನ್ನ ಜಾಗವನ್ನು ಭದ್ರ ಮಾಡಿಕೊಳ್ಳಲು ನ್ಯಾಯಾಲಯದಿಂದಲೇ ಅನುಮತಿ ಇದೆ. ಆದ್ದರಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕ ನೇತೃತ್ವದಲ್ಲಿ ಸಭೆ ಆಯೋಜಿಸಬೇಕು ಎಂದು ಆಗ್ರಹಿಸಿದರು.
    ಮೂರನೇ ದಿನದ ಪ್ರತಿಭಟನೆಯಲ್ಲಿ ಕೋಣನಹಳ್ಳಿ ಜವರೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts