More

    32 ವರ್ಷಗಳ ಸಂಸಾರದ ಬಳಿಕ ಪತ್ನಿಗೆ ವಿಚ್ಛೇದನ ನೀಡಿದ ರೇಮಂಡ್ಸ್​​​ ಮುಖ್ಯಸ್ಥ ಗೌತಮ್​​

    ನವದೆಹಲಿ: ಪ್ರಖ್ಯಾತ ಉದ್ಯಮಿ ಸಮೂಹ ರೇಮಂಡ್ಸ್​​​ ಮುಖ್ಯಸ್ಥ ಗೌತಮ್​​ ಸಿಂಘಾನಿಯಾ ಅವರು ಪತ್ನಿ ನವಾಜ್​​ರಿಂದ ವಿಚ್ಛೇದನ ಪಡೆದುಕೊಂಡಿರುವುದಾಗಿ ದೀಪಾವಳಿ ಹಬ್ಬದ ದಿನದಂದು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಪ್ರಕಟಿಸಿದ್ದಾರೆ.

    ನವಾಜ್ ಮೋದಿ ಮತ್ತು ನಾನು ಇಬ್ಬರೂ ಈಗಿನಿಂದ ಬೇರೆ ಬೇರೆ ಹಾದಿಗಳಲ್ಲಿ ಸಾಗುತ್ತೇವೆ ಎಂದು ಸಿಂಘಾನಿಯಾ ತಿಳಿಸಿದ್ದಾರೆ. ಇದರೊಂದಿಗೆ, ಅವರ ಮೂರು ದಶಕಗಳ ದಾಂಪತ್ಯ ಮುರಿದುಬಿದ್ದಂತಾಗಿದೆ.

    32 ವರ್ಷ ಕಾಲ ಅವರ ದಾಂಪತ್ಯ ಸಾಗಿತ್ತು. ಹಿಂದಿನ ದೀಪಾವಳಿಯಂತೆ ಈ ಬಾರಿ ಇರುವುದಿಲ್ಲ. 32 ವರ್ಷ ಕಾಲ ದಂಪತಿಯಾಗಿ ಒಟ್ಟಿಗೆ ಇದ್ದೆವು. ಪೋಷಕರಾಗ ಒಟ್ಟಿಗೆ ಬೆಳೆದೆವು. ಪರಿಸ್ಪರರಿಗೆ ಶಕ್ತಿಯಾಗಿ ನಿಂತಿದ್ದೆವು. ಬದ್ಧತೆ, ನಂಬಿಕೆಯಿಂದ ಮುಂದುವರಿದೆವು. ಇಬ್ಬರು ಅದ್ಭುತ ಕುಡಿಗಳು ನಮ್ಮ ಬದುಕಿನಲ್ಲಿ ಮೇಳೈಸಿದವು. ಇಲ್ಲಿಂದ ನಾನು ಮತ್ತು ನವಾಜ್ ಇಬ್ಬರೂ ಬೇರೆ ಬೇರೆ ಹಾದಿಯಲ್ಲಿ ಸಾಗುತ್ತೇವೆ ಎಂದು ನಂಬಿದ್ದೇನೆ. ಅವಳಿಂದ ದೂರ ಹೋಗುತ್ತಿದ್ದೇನೆ. ನಮ್ಮ ಎರಡು ಮುತ್ತುಗಳಾದ ನಿಹಾರಿಕಾ ಮತ್ತು ನೀಸಾ ಅವರಿಗೆ ಒಳಿತಾಗುವ ರೀತಿಯಲ್ಲಿ ಇಬ್ಬರೂ ಮುಂದುವರಿಯುತ್ತೇವೆ,’ ಎಂದು ಗೌತಮ್ ಸಿಂಘಾನಿಯಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

    ಕೆಡಕು ಬಯಸುವವರಿಂದ ತಮ್ಮ ಜೀವನದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿರುವ ಘಟನೆಗಳು ಇತ್ತೀಚೆಗೆ ನಡೆದಿವೆ ಎಂದು ರೇಮಂಡ್ಸ್ ಸಂಸ್ಥೆಯ ಮುಖ್ಯಸ್ಥರು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

    ದೀಪಾವಳಿ ಸಂಭ್ರಮ; ದೇಶಾದ್ಯಂತ 3.75 ಲಕ್ಷ ಕೋಟಿ ರೂ. ವ್ಯಾಪಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts