More

    ರಾಯಣ್ಣ-ಶಿವಾಜಿ ಪುತ್ಥಳಿ ಗಲಾಟೆ; ಸರ್ಕಾರದ ಕ್ರಮ ಬಗ್ಗೆ ಗೃಹ ಸಚಿವ ಹೇಳಿದ್ದೇನು?

    ಬೆಂಗಳೂರು: ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಪುತ್ಥಳಿ ಗಲಾಟೆ ತೀವ್ರಗೊಂಡಿದ್ದು, ಸೌಹಾರ್ದಯುತವಾಗಿ ಪ್ರಕರಣ ನಿಭಾಯಿಸಲು ಸರ್ಕಾರ ಸನ್ನದ್ಧವಾಗುತ್ತಿದೆ.

    ಪೀರನವಾಡಿಯಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ, ರಾಯಣ್ಣ-ಶಿವಾಜಿ ಪುತ್ಥಳಿ ಗಲಾಟೆ; ಸರ್ಕಾರದ ಕ್ರಮ ಬಗ್ಗೆ ಗೃಹ ಸಚಿವ ಹೇಳಿದ್ದೇನು?ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ. ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಿ ಎಂದು ಸೂಚನೆ ನೀಡಿದ್ದಾರೆ. ಈ ವಿವಾದ ಕುರಿತು ಮಾತನಾಡಿರುವ ಬಸವರಾಜ ಬೊಮ್ಮಾಯಿ, ನಾನು ಬೆಳಗಾವಿ ಡಿಸಿ ಮತ್ತು ಎಸ್ಪಿ ಜೊತೆ ಮಾತನಾಡಿದ್ದೀನಿ. ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಇಬ್ಬರೂ ದೇಶಭಕ್ತರು. ಅವರ ಗೌರವ ಕಾಪಾಡುವ ಕೆಲಸ ಮಾಡ್ತೇವೆ. ಎರಡೂ ಸಮುದಾಯದ ಮುಖಂಡರ ಸಭೆ ನಡೆಯಲಿದೆ. ಬೆಂಗಳೂರಿಂದ ಲಾ ಆ್ಯಂಡ್ ಆರ್ಡರ್ ಎಡಿಜಿಪಿ ಹೋಗ್ತಿದ್ದಾರೆ. ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿರಿ ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

    ಪೀರನವಾಡಿ ಗಲಾಟೆ ನಿಭಾಯಿಸಲು ಬೆಂಗಳೂರಿನಿಂದ ಬೆಳಗಾವಿಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಳಿಸಲಾಗಿದೆ. ಎರಡೂ ಸಮಾಜದವರು ಶಾಂತಿಯಿಂದ ಇರಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

    ಸಂಗೊಳ್ಳಿ ರಾಯಣ್ಣ ಮತ್ತು ರಾಣಿ ಚೆನ್ನಮ್ಮ ಅಮ್ಮ ಮಗ ಥರ. ಚೆನ್ನಮ್ಮಗೆ ರಾಯಣ್ಣ ಅಮ್ಮ ಅಂತಿದ್ರು. ಇಬ್ಬರ ಮಧ್ಯೆ ಜಾತಿ ವಿಚಾರ ಬರಲಿಲ್ಲ. ಶಿವಾಜಿ, ಅಹಲ್ಯ ಬಾಯಿ ಹೋಳ್ಕರ್, ರಾಯಣ್ಣ, ಚೆನ್ನಮ್ಮ ಇವರಿಗೆಲ್ಲ ಜಾತಿ ಪ್ರಶ್ನೆ ಇರಲಿಲ್ಲ. ಪ್ರಾಂತೀಯತೆ ಇರಲಿಲ್ಲ. ಕೆಲವರ ಸಂಕುಚಿತ ಭಾವನೆಗಳಿಂದ ಸಂಘರ್ಷ ಆಗ್ತಿದೆ ಎಂದ ಸಚಿವ ಕೆ.ಎಸ್​.ಈಶ್ವರಪ್ಪ, ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥವಾಗಬೇಕು ಎಂದಿದ್ದಾರೆ.

    ಕನ್ನಡಿಗರನ್ನು ಕೆಣಕಿದ ಮಹಾರಾಷ್ಟ್ರ ಪುಂಡರಿಗೆ ಲಾಠಿಏಟು!

    ರಾಯಣ್ಣ-ಶಿವಾಜಿ ಪುತ್ಥಳಿ ಗಲಾಟೆ; ಸರ್ಕಾರಕ್ಕೆ ಸಲಹೆ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts