More

    ಪಾತಾಳಕ್ಕಿಳಿದ ಹಸಿ ಶುಂಠಿ ದರ

    ಅಕ್ಕಿಆಲೂರ: ವಾಣಿಜ್ಯ ಬೆಳೆ ಶುಂಠಿ ದರ ಪಾತಾಳಕ್ಕೆ ಕುಸಿತವಾಗಿದೆ. ಇದರಿಂದ ಹಾನಗಲ್ಲ ತಾಲೂಕಿನ ಅರೆಮಲೆನಾಡು ಭಾಗದ ಬೆಳೆಗಾರರು ಕಂಗಾಲಾಗಿದ್ದಾರೆ.

    ಅಕ್ಕಿಆಲೂರ, ತಿಳವಳ್ಳಿ, ಬೊಮ್ಮನಳ್ಳಿ ಸೇರಿದಂತೆ ಹಾನಗಲ್ಲ ತಾಲೂಕಿನ ಒಟ್ಟು 4200 ಎಕರೆ ವಿಸ್ತೀರ್ಣದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಶಿವಮೊಗ್ಗ, ಉತ್ತರ ಕನ್ನಡ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಅಕ್ಕಿಆಲೂರ ಹಾಗೂ ಹಾನಗಲ್ಲ ಭಾಗದಲ್ಲಿ ಸಮತೋಲಿತ ಮಳೆ, ತಾಪಮಾನ ಇದೆ. ಇದರಿಂದ ಶುಂಠಿ ಬೆಳೆಗೆ ಹೇಳಿಮಾಡಿಸಿದ ಪ್ರದೇಶವಾಗಿದೆ. ಒಂದು ಸಮಯದಲ್ಲಿ ಪ್ರತಿ ಕ್ವಿಂಟಾಲ್​ಗೆ 5ರಿಂದ 6 ಸಾವಿರ ರೂಪಾಯಿ ಇದ್ದ ದರ, ಈಗ 1500 ರೂಪಾಯಿಗೆ ಕುಸಿದಿದೆ.

    ಅಕ್ಕಿಆಲೂರ ಹಾಗೂ ಹಾನಗಲ್ಲ ಭಾಗ ಶುಂಠಿ ಬೆಳೆಗೆ ಉತ್ತಮ ಪ್ರದೇಶವೆಂದು ನೆರೆಯ ಕೇರಳ ರಾಜ್ಯದ ಬೆಳೆಗಾರರು ಭೂಮಿಯನ್ನು ಒಪ್ಪಂದದ ಮೇಲೆ ಪಡೆದು ವರ್ಷಗಟ್ಟಲೆ ಈ ಭಾಗದಲ್ಲಿ ಉಳಿದುಕೊಂಡು ಕಳೆದ 10 ವರ್ಷಗಳ ಹಿಂದೆ ಶುಂಠಿ ಬೆಳೆಯಲು ಆರಂಭಿಸಿದ್ದರು. ಈ ಸಮಯದಲ್ಲಿ 5ರಿಂದ 6 ಸಾವಿರ ರೂಪಾಯಿ ಇದ್ದ ಬೆಲೆ ಕ್ರಮೇಣ ಇಳಿಕೆಯಾಗುತ್ತ ಬಂದಿದೆ.

    ಕೇರಳದ ಬೆಳೆಗಾರರು ಪ್ರತಿ ಎಕರೆ ಶುಂಠಿ ಬೆಳೆಯಲು 2ರಿಂದ 3 ಲಕ್ಷ ರೂಪಾಯಿ ಖರ್ಚು ಮಾಡಿ, ಎಕರೆಗೆ 150ರಿಂದ 200 ಕ್ವಿಂಟಾಲ್​ವರೆಗೆ ಇಳುವರಿ ತೆಗೆಯುತ್ತಿದ್ದರು. ಕೇರಳಿಗರು ಗಳಿಸುತ್ತಿದ್ದ ಲಾಭ ಕಂಡು ಸ್ಥಳೀಯ ರೈತರು ಶುಂಠಿ ಬೆಳೆಯಲು ಆರಂಭಿಸಿದರು. ಬಹುತೇಕ ರೈತರು ಶುಂಠಿಗೆ ಆಕರ್ಷಿಕತರಾಗಿದ್ದರಿಂದ ವರ್ಷದಿಂದ ವರ್ಷಕ್ಕೆ ಶುಂಠಿ ಬೆಲೆ ಕಡಿಮೆಯಾಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಾಂಬಾರ ಪದಾರ್ಥ, ಔಷಧಕ್ಕಾಗಿ ವಿದೇಶಕ್ಕೆ ರಫ್ತಾಗುತ್ತಿದ್ದ ಶುಂಠಿ, ಕರೊನಾ ಹಾವಳಿ ನಂತರ ವಿದೇಶಕ್ಕೆ ಮತ್ತು ಹೊರರಾಜ್ಯಕ್ಕೆ ರಫ್ತಾಗುವುದು ಸ್ಥಗಿತವಾಗಿದೆ. ಇದು ಶುಂಠಿ ಬೆಲೆ ಕ್ವಿಂಟಾಲ್​ಗೆ 1500 ರೂಪಾಯಿಗೆ ಕುಸಿಯಲು ಪ್ರಮುಖ ಕಾರಣ ಎನ್ನುತ್ತಾರೆ ಶುಂಠಿ ಖರೀದಿದಾರರು.

    ಒಣ ಶುಂಠಿ ಮಾರಾಟದತ್ತ ರೈತರ ಚಿತ್ತ: 5 ಕ್ವಿಂಟಾಲ್ ಹಸಿ ಶುಂಠಿ ಸ್ವಚ್ಛಗೊಳಿಸಿ, ಒಣಗಿಸಿದರೆ 1 ಕ್ವಿಂಟಾಲ್ ಒಣ ಶುಂಠಿ ಸಿಗುತ್ತದೆ. 1 ಕ್ವಿಂಟಾಲ್ ಒಣ ಶುಂಠಿಗೆ ಸದ್ಯ 10 ರಿಂದ 12 ಸಾವಿರ ರೂಪಾಯಿ ದರ ಬೇಡಿಕೆ ಇದೆ. ಹೀಗಾಗಿ, ರೈತರು ಮತ್ತು ವ್ಯಾಪಾರಸ್ಥರು ಹಸಿ ಶುಂಠಿ ಒಣಗಿಸಿ ಮಾರಾಟ ಮಾಡುವುದರತ್ತ ಗಮನ ಹರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts