More

    VIDEO| ಅದ್ಭುತ ಕ್ಯಾಚ್​ ಹಿಡಿದ ರವೀಂದ್ರ ಜಡೇಜಾಗೆ ನೆಟ್ಟಿಗರು ಫಿದಾ: ವರ್ಷದ ಅತ್ಯುತ್ತಮ ಕ್ಯಾಚ್ ಎಂದು ಬಣ್ಣನೆ!​

    ಕ್ರೈಸ್ಟ್​ಚರ್ಚ್​​​: ಆಲ್​ರೌಂಡರ್​​ ರವೀಂದ್ರ ಜಡೇಜಾ ಓರ್ವ ಅದ್ಭುತ ಫೀಲ್ಡರ್​ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ನಮ್ಮ ಮುಂದಿವೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದ 2ನೇ ದಿನದಾಟದಲ್ಲಿ ಜಡೇಜಾ ಹಿಡಿದಂತಹ ಅತ್ಯದ್ಭುತ ಕ್ಯಾಚ್​ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

    2ನೇ ಟೆಸ್ಟ್​ ಪಂದ್ಯ ಕ್ರೈಸ್ಸ್​ಚರ್ಚ್​ನ ಹ್ಯಾಗ್ಲೆ ಓವಲ್​ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದು ಮೊದಲನೇ ಇನ್ನಿಂಗ್ಸ್​ ಮುಂದುವರಿಸಿದ ಕಿವೀಸ್​ಗೆ ಜಡೇಜಾ ಅವರು ಕ್ಯಾಚ್​ ಮೂಲಕ ಶಾಕ್​ ನೀಡಿದರು. ಮಹಮ್ಮದ್​ ಶಮಿ ಓವರನ್​ನಲ್ಲಿ ನೈಲ್​ ವ್ಯಾಗ್ನರ್​​ ಹೊಡೆದಂತಹ ಫುಲ್​ ಅಪ್​ ಶಾಟ್​ನಿಂದ ಚಿಮ್ಮಿದ ಚೆಂಡ್​ ಸ್ಕ್ವೇರ್​ಲೆಗ್​ ವಿಭಾಗದಲ್ಲಿ ನಿಂತಿದ್ದ ಜಡೇಜಾ ಅವರ ಮೇಲೆ ಹಾರಿ ಹೋಗುತ್ತಿತ್ತು, ಈ ವೇಳೆ ಹಿಮ್ಮುಖವಾಗಿ ಓಡಿ ಹೋಗಿ ಗಾಳಿಯಲ್ಲಿ ಹಾರಿ ಎಡಗೈನಲ್ಲಿ ಮನೋಹರವಾಗಿ ಕ್ಯಾಚ್ ಜಡೇಜಾ ಕ್ಯಾಚ್​​ ಹಿಡಿದರು. ಈ ಮೂಲಕ 9ನೇ ವಿಕೆಟ್​ಗೆ ಉತ್ತಮ ಜತೆಯಾಟವಾಡುತ್ತಿದ್ದ ಕೈಲಿ ಜೇಮಿಸನ್​ ಮತ್ತು ನೈಲ್​ ವ್ಯಾಗ್ನರ್​​ ಜೋಡಿಗೆ ತಡೆವೊಡ್ಡುವ ಮೂಲಕ ಕಿವೀಸ್​ ಪಡೆಗೆ ಜಡೇಜಾ ಶಾಕ್​ ನೀಡಿದರು.

    ಇದಾದ ಕೆಲವೇ ಕ್ಷಣಗಳಲ್ಲಿ ಜಡೇಜಾ ಅವರ ಕ್ಯಾಚ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದು ವರ್ಷದ ಅತ್ಯುತ್ತಮ ಕ್ಯಾಚ್​ ಎಂತಲೂ ಬಣ್ಣಿಸಿದ್ದಾರೆ.

    ಇನ್ನು ಟೆಸ್ಟ್​ ವಿಚಾರಕ್ಕೆ ಬಂದರೆ ನಿನ್ನೆ ಆರಂಭವಾದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ ಆರಂಭಿಸಿದ್ದ ಭಾರತ ಕಿವೀಸ್​ ಪಡೆಯ ಬೌಲಿಂಗ್​ ದಾಳಿಗೆ ನಲುಗಿ 63 ಓವರ್​ಗಳಲ್ಲಿ 242 ರನ್​ಗೆ ಆಲೌಟ್​ ಆಗಿತ್ತು. ಬಳಿಕ ಪ್ರಥಮ ಇನ್ನಿಂಗ್ಸ್​ ಆರಂಭಿಸಿದ್ದ ಕಿವೀಸ್​ ಪಡೆ ಮೊದಲ ದಿನದಾಟದ ಅಂತ್ಯಕ್ಕೆ 23 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 63 ರನ್​ ಗಳಿಸಿ 2ನೇ ದಿನದಾಟವನ್ನು ಕಾಯ್ದುಕೊಂಡಿತು. ಇಂದು ಇನ್ನಿಂಗ್ಸ್​ ಮುಂದುವರಿಸಿದ ಕಿವೀಸ್​ ಪಡೆಗೆ ಶಮಿ(4 ವಿಕೆಟ್​) ಮತ್ತು ಬೂಮ್ರ(3) ಶಾಪವಾಗಿ ಕಾಡಿದರು. ಅಂತಿಮವಾಗಿ 73.1 ಓವರ್​ಗಳಲ್ಲಿ 235 ರನ್​ಗೆ ಆಲೌಟ್​ ಆಯಿತು. ಸದ್ಯ ಏಳು ರನ್​ಗಳ ಮುನ್ನೆಡೆಯಿಂದ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಟೀಮ್​ ಇಂಡಿಯಾ 18 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 51 ರನ್​ ಗಳಿಸಿ ಆಡುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts