More

    ಕನಿಷ್ಠ ಬೆಂಬಲ ಬೆಲೆ ಜಾರಿಯಾಗಲಿ: ಚಳವಳಿ ನಿಲ್ಲುವುದಿಲ್ಲ ಎಂದ ರೈತ ಬಣದ ರವಿ ಕಾನೂನು ರೂಪಿಸಲು ಒತ್ತಾಯ

    ಬಿಡದಿ : ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವ ಜತೆಗೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ರಾಜ್ಯ ರೈತಸಂ (ರೈತ ಬಣ)ದ ಉಪಾಧ್ಯಕ್ಷೃ ಪಿ.ಎಂ.ರವಿ ಒತ್ತಾಯಿಸಿದರು.

    ಬಿಡದಿಯಲ್ಲಿ ಕರ್ನಾಟಕ ರಾಜ್ಯ ರೈತಸಂ (ರೈತಬಣ) ಹಾಗೂ ಬಿಜಿಎಸ್ ಆಟೋ ಚಾಲಕರ ಸಂದ ವತಿಯಿಂದ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಮತ್ತು ನಟ ಪುನೀತ್ ರಾಜಕುವಾರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಎಂಬುದು ಕೃಷಿ ಉತ್ಪನ್ನಗಳ ಬೆಲೆಯಲ್ಲಿ ತೀವ್ರ ಕುಸಿತ ಉಂಟಾದಾಗ ಬೆಳೆಗಾರರ ಸಹಾಯಕ್ಕೆ ಧಾವಿಸುವ ಒಂದು ರೂಪವಾಗಿದೆ. ಇದು ಕೃಷಿ ಉತ್ಪನ್ನಗಳಿಗೆ ಸರ್ಕಾರ ನೀಡುವ ಖಾತರಿ ಬೆಲೆಯಾಗಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸುವವರೆಗೂ ರೈತರ ಚಳವಳಿ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

     

    ರೈತರಿಗೆ ಕೃಷಿ ಉತ್ಪನ್ನ ವಾರಾಟದಲ್ಲಿ ಉಂಟಾಗುವ ತೊಂದರೆ ಸರಿಪಡಿಸುವುದು ಮತ್ತು ಸಾರ್ವಜನಿಕ ವಿತರಣೆಗಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸುವುದು ಎಂಎಸ್‌ಪಿ ಪ್ರಮುಖ ಉದ್ದೇಶವಾಗಿದೆ. ಜತೆಗೆ ಕೃಷಿ ಉತ್ಪನ್ನಗಳಿಗೆ ಖರೀದಿದಾರರು ಇಲ್ಲದೇ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.

    ಕೃಷಿ ಕ್ಷೇತ್ರವನ್ನು ಬಹುರಾಷ್ಟ್ರೀಯ ಹಾಗೂ ದೇಶದ ದೊಡ್ಡ ಕೃಷಿ ಕಾರ್ಪೋರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರ ಈ ಕಾಯ್ದೆಗಳಲ್ಲಿ ಅಡಗಿದೆ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ಸುವಾರು 700ಕ್ಕೂ ಹೆಚ್ಚು ಹೋರಾಟಗಾರರು ಹುತಾತ್ಮರಾಗಿದ್ದಾರೆ. ಈ ಹೋರಾಟ ಪ್ರಾರಂಭವಾಗಿ ನ.26ಕ್ಕೆ ಒಂದು ವರ್ಷವಾಗಿದೆ. ಈ ಚಾರಿತ್ರಿಕ ಆಂದೋಲನವನ್ನು ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರ ಹಲವಾರು ವಾಮವಾರ್ಗಗಳನ್ನು ನಡೆಸಿದರೂ ಚಳವಳಿಗಾರರು ಕುಗ್ಗದೆ ಅಹಿಂಸಾತ್ಮಕ ಹೋರಾಟ ನಡೆಸಿದ್ದಾರೆ ಎಂದು ರವಿ ಹೇಳಿದರು.

    ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ಸ್ಮರಣಾರ್ಥ ಅನ್ನ ದಾಸೋಹ ಕಾರ್ಯಕ್ರಮ ನಡೆಯಿತು. ಸಂಘಟನೆ ಜಿಲ್ಲಾ ಉಪಾಧ್ಯಕ್ಷೃ ಶ್ರೀನಿವಾಸ್, ಮಹಿಳಾ ಟಕ ಜಿಲ್ಲಾಧ್ಯಕ್ಷೆ ಗೀತಾ, ಮುಖಂಡರಾದ ಶಿವರಾಜು, ವೆಂಕಟೇಶ್, ಮುನಿರಾಜು, ಮಂಜುನಾಥ್, ಶ್ರೀನಿವಾಸ್, ತಮ್ಮಯ್ಯ, ಸಾಗರ್, ರವಿ, ಸುರೇಶ್, ಮಹೇಶ್ ಮತ್ತಿತರರು ಭಾಗವಹಿಸಿದ್ದರು.

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts