More

    ಈ ಜಿಲ್ಲೇಲಿ ಕರೊನಾ ಕಡಿಮೆ ಆಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಮತ್ತೊಂದು ರೋಗ ವಕ್ಕರಿಸಿದೆ

    ಕೊಪ್ಪಳ: ಮಹಾಮಾರಿ ಕರೊನಾ ಸೋಂಕಿನ ಪ್ರಮಾಣ ಈ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ ಎಂದು ಜನರು ನಿಟ್ಟುಸಿರು ಬಿಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ರೋಗ ಕಾಣಿಸಿಕೊಂಡು ಆತಂಕ ಉಂಟು ಮಾಡಿದೆ.

    ಕೊಪ್ಪಳ ಜಿಲ್ಲೆಯಲ್ಲಿ ಇಲಿಜ್ವರದ್ದೇ ಸುದ್ದಿ. ಈವರೆಗೆ ಜಿಲ್ಲಾದ್ಯಂತ ಆರು ಪ್ರಕರಣ ಪತ್ತೆಯಾಗಿದೆ. ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಎರಡು, ಹೊಸಲಿಂಗಾಪುರ, ಕೆರೆಹಳ್ಳಿ ಹಾಗೂ ನರೇಗಲ್​ ಗ್ರಾಮಗಳಲ್ಲಿ ತಲಾ ಒಂದು ಹಾಗೂ ಕುಷ್ಟಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ.

    ಲೆಪ್ಟೋಸ್ಪೆರಸಿಸ್​ ಎಂಬುದು ಇಲಿ ಜ್ವರದ ವೈಜ್ಞಾನಿಕ ಹೆಸರು. ಜ್ವರ, ಕೈಕಾಲು ನೋವು ಸೇರಿದಂತೆ ಕಾಮಾಲೆ ಲಕ್ಷಣ ಇರುವವರಲ್ಲಿ ಇಲಿಜ್ವರ ಕಾಣಿಸಿಕೊಳ್ಳುತ್ತದೆ. ಇಂಥ ರೋಗ ಲಕ್ಷಣ ಇರುವವರು ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ಪಡೆದು ಹುಷಾರಾಗಬಹುದು. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಿ ಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಜಿಲ್ಲೆಯಲ್ಲಿ 6 ಇಲಿಜ್ವರ ಪ್ರಕರಣ ಪತ್ತೆಯಾಗಿವೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮೈ-ಕೈ ನೋವು, ಜ್ವರ, ಕಾಮಾಲೆ (ಜಾಂಡೀಸ್​) ರೋಗ ಲಕ್ಷಣ ಇರುವವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ಪಡೆದಲ್ಲಿ ವಾಸಿಯಾಗುತ್ತದೆ ಎಂದು ಡಿಎಚ್​ಒ ಡಾ.ಟಿ.ಲಿಂಗರಾಜು ತಿಳಿಸಿದ್ದಾರೆ.

    ಮಾವ-ಸೊಸೆ ನಡುವೆ ಅಕ್ರಮ ಸಂಬಂಧ, ಗುಟ್ಟು ರಟ್ಟಾಗುತ್ತಿದ್ದಂತೆ ನಡೆಯಿತು ಭೀಕರ ಹತ್ಯೆ!

    ನಡು ರಸ್ತೆಯಲ್ಲೇ ಪತ್ನಿಯ ಕತ್ತುಸೀಳಿ ಕೊಂದ! ಭೀಕರ ಘಟನೆಗೆ ಬೆಚ್ಚಿಬಿದ್ದ ಜನತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts