More

    ಎರಡು ಕೋಟಿ ಕ್ಲಬ್ ಸೇರಿದ ರಶ್ಮಿಕಾ – ಕಾಜಲ್, ಪೂಜಾ ಸಾಲಿಗೆ ಸೇರಿದ ಕನ್ನಡತಿ

    ಬೆಂಗಳೂರು: ದಕ್ಷಿಣ ಭಾರತದ ನಾಯಕಿಯರ ಪೈಕಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದರೆ ಅದು ನಯನತಾರಾ ಎಂದು ಹೇಳಲಾಗುತ್ತದೆ. ನಯನತಾರಾ ಚಿತ್ರವೊಂದಕ್ಕೆ ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಿದ್ದು, ಅವರ ನಂತರದ ಸ್ಥಾನದಲ್ಲಿ ಕಾಜಲ್ ಅಗರ್​ವಾಲ್ ಮತ್ತು ಪೂಜಾ ಹೆಗ್ಡೆ ಬರುತ್ತಾರೆ. ಅವರಿಬ್ಬರೂ ಚಿತ್ರವೊಂದಕ್ಕೆ ಎರಡು ಕೋಟಿ ಪಡೆಯುತ್ತಾರಂತೆ.

    ಇದೀಗ ಅವರಿಬ್ಬರ ಜತೆಗೆ ಕನ್ನಡತಿ ರಶ್ಮಿಕಾ ಮಂದಣ್ಣ ಸಹ ಸೇರಿಕೊಂಡಿದ್ದಾರೆ. ರಶ್ಮಿಕಾ ಇದೀಗ ಚಿತ್ರವೊಂದಕ್ಕೆ ಎರಡು ಕೋಟಿ ಪಡೆಯುತ್ತಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಸುದ್ದಿ ಇರುವುದು ಚಂದನವನದಲ್ಲಲ್ಲ. ಬದಲಿಗೆ ಟಾಲಿವುಡ್​ನಲ್ಲಿ.

    ಕನ್ನಡದಲ್ಲಿ ರಶ್ಮಿಕಾ ನಟಿಸುವುದು ಬಹಳ ಕಡಿಮೆಯಾದರೂ, ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಇದೀಗ ಬಹಳ ಜನಪ್ರಿಯ ನಟಿ. ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾಗೆ, ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಚಿತ್ರದ ಯಶಸ್ಸು ಇನ್ನಷ್ಟು ಉಲ್ಲಾಸ, ಉತ್ಸಾಹ ನೀಡಿದೆ. ಈ ಚಿತ್ರದಿಂದ ಅವರಿಗೆ ದೊಡ್ಡ ಸ್ಟಾರ್​ಗಳ ಜತೆಗೆ ನಟಿಸುವ ಅವಕಾಶಗಳು ಹೆಚ್ಚುಹೆಚ್ಚು ಸಿಗುತ್ತಿರುವುದಷ್ಟೇ ಅಲ್ಲ, ಅವರ ಸಂಭಾವನೆಯಲ್ಲೂ ಏರಿಕೆಯಾಗಿದೆಯಂತೆ.

    ಸದ್ಯಕ್ಕೆ ಅಲ್ಲು ಅರ್ಜುನ್ ಜತೆಗೆ ‘ಪುಷ್ಪಾ’ ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ, ಮುಂದಿನ ದಿನಗಳಲ್ಲಿ ‘ಆಚಾರ್ಯ’ದಲ್ಲಿ ರಾಮ್ರಣ್ ತೇಜಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಅಖಿಲ್, ಶರ್ವಾನಂದ್ ಸೇರಿದಂತೆ ಹಲವು ಜನಪ್ರಿಯ ನಟರ ಜತೆಗೆ ರಶ್ಮಿಕಾಗೆ ನಟಿಸುವುದಕ್ಕೆ ಅವಕಾಶ ಸಿಕ್ಕಿದ್ದು, ಇದರಿಂದ ಅವರ ಸಂಭಾವನೆ ಎರಡು ಕೋಟಿಯವರೆಗೂ ಏರಿದೆ ಎಂದು ಹೇಳಲಾಗುತ್ತಿದೆ.

    ಇದು ನಿಜವೇ ಆದರೆ, ಕನ್ನಡದ ನಟಿಯೊಬ್ಬರಿಗೆ ಸಿಗುತ್ತಿರುವ ಅತೀ ಹೆಚ್ಚು ಸಂಭಾವನೆ ಇದಾಗಿದ್ದು, ಹಾಗೆ ಹೆಚ್ಚು ಸಂಭಾವನೆ ಪಡೆಯುವ ಕನ್ನಡತಿಯರ ಸಾಲಿನಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಎನ್ನುವುದು ವಿಶೇಷ. (- ಏಜನ್ಸೀಸ್)

    ಜಮ್ಮು-ಕಾಶ್ಮೀರದ 33 ರಾಜಕಾರಣಿಗಳ ವಿದೇಶ ಪ್ರವಾಸಕ್ಕೆ ನಿಷೇಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts