More

    ಅಪರೂಪದ ಸಂತ ಶಿವಶಾಂತವೀರ ಶ್ರೀಗಳು- ಗವಿಸಿದ್ಧೇಶ್ವರ ಟ್ರಸ್ಟ್ ಕಾರ್ಯದರ್ಶಿ ಡಾ.ಆರ್.ಮರೇಗೌಡ ಅಭಿಮತ

    ಕೊಪ್ಪಳ: ಶಿವಶಾಂತವೀರ ಶಿವಯೋಗಿಗಳು ನಾಡು ಕಂಡ ಅಪರೂಪದ ಸಂತರಾಗಿದ್ದರು. ಅವರ ಆದರ್ಶ, ಪಾಂಡಿತ್ಯ ಹಾಗೂ ಭಕ್ತರ ಮೇಲಿನ ಕಾಳಜಿ ಸದಾ ಸ್ಮರಣೀಯವಾದದ್ದು ಎಂದು ಗವಿಸಿದ್ಧೇಶ್ವರ ಟ್ರಸ್ಟ್ ಕಾರ್ಯದರ್ಶಿ ಡಾ.ಆರ್.ಮರೇಗೌಡ ಹೇಳಿದರು. ನಗರದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಮ ಪೂಜ್ಯ ಲಿಂ.ಶಿವಶಾಂತ ಶಿವಯೋಗಿಗಳ 17ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಗವಿಮಠದ ಪರಂಪರೆ ಬಹಳ ಹಿರಿಯದಾಗಿದೆ. ನಾಡಿಗೆ ಶ್ರೀ ಮಠವು ನೀಡಿದ ಕೊಡುಗೆ ಅಪಾರ. ಲಿಂ.ಶಿವಶಾಂತವೀರ ಶಿವಯೋಗಿಗಳು ಮಠದ ಶ್ರೆಯೋಭಿವೃದ್ಧಿಗೆ ಈ ನಾಡಿಗೆ ತಮ್ಮ ಬದುಕನ್ನು ಅರ್ಪಿಸಿದ ಸಂತ. ಶಿಕ್ಷಣ ಪ್ರೇಮಿಗಳಾದ ಅವರು ಅನ್ನ, ಅಧ್ಯಾತ್ಮ, ಜ್ಞಾನದ ಜತೆಗೆ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸ್ಥಾಪಿಸಿ ಆರೋಗ್ಯ ದಾಸೋಹಗೈದ ಪುಣ್ಯಾತ್ಮರು ಎಂದರು.

    ಪ್ರಾಚಾರ್ಯ ಎಂ.ಎಸ್.ದಾದ್ಮಿ ಮಾತನಾಡಿ, ಶಿವಶಾಂತವೀರ ಶಿವಯೋಗಿಗಳ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಸೇವೆ ಅವಿಸ್ಮರಣೀಯ. ಶೈಕ್ಷಣಿಕವಾಗಿ ಬಳಲುತ್ತಿದ್ದ ಈ ನಾಡಿಗೆ ಶಿಕ್ಷಣವೊಂದೆ ಆಸರೆ ಎಂದು ಭಾವಿಸಿ ಮಠದ ಶೈಕ್ಷಣಿಕ ಸಂಸ್ಥೆಗಳನ್ನು ಬೆಳೆಸುವುದಕ್ಕೆ ತುಂಬಾ ಶ್ರಮಿಸಿದವರು. ಮಠದ ಶೈಕ್ಷಣಿಕ ಸಂಸ್ಥೆಗಳಿಗೆ ಅಧಾರ ಸ್ತಂಭವಾಗಿ ನಿಂತವರು ಎಂದರು. ಪಿಯು ಕಾಲೇಜು ಸಂಯೋಜಕ ಪರಿಕ್ಷೀತರಾಜ, ನಿವೃತ್ತ ಪ್ರಾಧ್ಯಾಪಕರಾದ ಎಸ್.ಬಿ ಹೀರೇಮಠ, ಜಿ. ಎನ್.ಪಾಟೀಲ್, ಸಹ ಪ್ರಾಧ್ಯಾಪಕರಾದ ಡಾ.ಜೆ.ಎಸ್ ಪಾಟೀಲ್, ಡಾ.ಬಸವರಾಜ ಪೂಜಾರ, ಡಾ.ದಯಾನಂದ ಸಾಳುಂಕೆ, ಶಫಿ ಸರ್ದಾರ, ಶರಣಬಸಪ್ಪ ಬಿಳಿಯಲೆ, ಡಾ.ನಾಗರಾಜ ದಂಡೋತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts