More

    ಪಾಕ್ ಹುಡುಗಿಗೆ ಮೈಸೂರು ಪಾಕ್!; ಪಾಕಿಸ್ತಾನ ಮೂಲದ ಗರ್ಲ್‌ಫ್ರೆಂಡ್​ಗೆ ಬಾದ್‌ಶಾ ಉಡುಗೊರೆ

    ಬಾಲಿವುಡ್ ಗಾಯಕ, ರ‌್ಯಾಪರ್ ಬಾದ್‌ಶಾ, ಪಾಕಿಸ್ತಾನದ ನಟಿ ಹಾನಿಯಾ ಆಮಿರ್ ಜತೆ ಡೇಟಿಂಗ್‌ನಲ್ಲಿದ್ದಾರಾ? ಇಂತಹ ಒಂದು ಪ್ರಶ್ನೆ ಕೆಲ ದಿನಗಳಿಂದ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

    ‘ಜನಾನ್’, ‘ಲೋಡ್ ವೆಡ್ಡಿಂಗ್’, ‘ಪರ್ದೇ ಮೇ ರೆಹ್ನೇ ದೋ’ ಸಿನಿಮಾ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ 26 ವರ್ಷದ ಹಾನಿಯಾ ಜತೆ ಬಾದ್‌ಶಾ ಇತ್ತೀಚೆಗಷ್ಟೆ ದುಬೈನಲ್ಲಿ ಶಾಪಿಂಗ್, ಡಿನ್ನರ್ ಅಂತ ಓಡಾಡಿದ್ದಾರೆ. ಜತೆಗೆ ಬಾದ್‌ಶಾ ಪಾಕ್ ನಟಿಗೆ ಮೈಸೂರು ಪಾಕ್ ನೀಡಿರುವ ೆಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಈ ಹಿಂದೆ ಬಾದ್‌ಶಾ ತನ್ನ ಗರ್ಲ್‌ರ್ೆಂಡ್ ಇಶಾ ರಿಖಿ ಜತೆ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು.

    ಆ ಬಳಿಕ ಬಾದ್‌ಶಾ ಮತ್ತು ನಟಿ ಮೃಣಾಲ್ ಠಾಕುರ್ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದರ ಬೆನ್ನಲ್ಲೇ ಬಾದ್‌ಶಾ, ‘ನೀವು ಅಂದುಕೊಂಡಂತೆ ನಾನು ಮೃಣಾಲ್ ಡೇಟ್ ಮಾಡುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಪಾಕಿಸ್ತಾನಿ ನಟಿ ಹಾನಿಯಾ ಖಾನ್ ಹಾಗೂ ಬಾದ್‌ಶಾ ಒಟ್ಟಿಗೆ ಓಡಾಡುತ್ತಿರುವ ೆಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts