More

    ನಿವೇಶನ ರಹಿತರ ದಿಢೀರ್ ಪ್ರತಿಭಟನೆ

    ಬ್ಯಾಡಗಿ: ವಸತಿ ರಹಿತರಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ನಿವೇಶನ ನೀಡದೆ, ಹತ್ತಾರು ವರ್ಷಗಳಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಮೂಲನೆ ಸಮಿತಿ ತಾಲೂಕು ಘಟಕದ ಕಾರ್ಯಕರ್ತರು ಹಾಗೂ ನಿರಾಶ್ರಿತರು ಸೋಮವಾರ ಪ್ರತಿಭಟನೆ ನಡೆಸಿದರು.

    ತಹಸೀಲ್ದಾರ್ ಕಾರ್ಯಾಲಯದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ಕಾಗಿನೆಲೆ ಗ್ರಾಮದ ನಿರಾಶ್ರಿತರು, ಅಧಿಕಾರಿಗಳ ನಿರ್ಲಕ್ಷವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮಸ್ಥೆ ಪ್ರೇಮಾ ಜೋಗುಳ ಮಾತನಾಡಿ, ಹತ್ತು ವರ್ಷಗಳಿಂದ ಗ್ರಾಮ ನೂರಾರು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿವೆ. ಬಡವರು ಕೂಲಿ ಮಾಡಿ ಹೊಟ್ಟೆ ಹೊರೆಯುವುದು ಕಷ್ಟಕರವಾಗಿದೆ. ನಾವು ಬಾಡಿಗೆ ಮನೆಯಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದೇವೆ. ಸ್ಥಳೀಯವಾಗಿ ಲಭ್ಯವಿರುವ ಭೂಮಿಯನ್ನಾಗಲಿ ಅಥವಾ ಭೂಮಿ ಖರೀದಿಸಿ ಬಡ ಕೂಲಿ ಕಾರ್ವಿುಕರಿಗೆ ತ್ವರಿತವಾಗಿ ನಿವೇಶನ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇಲ್ಲವಾದರೆ, ನಿವೇಶನ ರಹಿತ ಕೂಲಿ ಕಾರ್ವಿುಕರೊಂದಿಗೆ ಸ್ಥಳೀಯ ಗ್ರಾ. ಪಂ. ಕಾರ್ಯಾಲಯದ ಮುಂದೆ ಅಥವಾ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮತ್ತು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಬಳಿಕ ಶಿರಸ್ತೇದಾರ್ ಆರ್.ಎಂ. ಮಲ್ಲಾಡದ ಅವರಿಗೆ ಮನವಿ ಸಲ್ಲಿಸಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಭರವಸೆ ಮೇರೆಗೆ ಪ್ರತಿಭಟನೆ ವಾಪಸ್ ಪಡೆದರು.

    ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ, ನಿವಾಸಿಗಳಾದ ಹನುಮವ್ವ ದೇವಗಿರಿ, ಗೌರಮ್ಮ ಸುಣಗಾರ, ಕರಿಯಮ್ಮ ರ್ಬಾ, ಶಂಭಣ್ಣ ಈಳಿಗೇರ, ಪರೀಧಾಬಾನು ನದಿಮುಲ್ಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts