More

    ಸಾರಿಗೆ ಮುಷ್ಕರದಲ್ಲಿ ಕುಟುಂಬಸ್ಥರು ಭಾಗಿ

    ಬೈಲಹೊಂಗಲ: ಇಲ್ಲಿನ ಸಾರಿಗೆ ನೌಕರರು ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ನಡೆಸುತ್ತಿರುವ ಮುಷ್ಕರ ಮೂರನೇ ದಿನವೂ ಮುಂದುವರಿಯಿತು.

    ಭಾನುವಾರ ಕುಟುಂಬ ಸಮೇತ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಮೂಲಕ ಧರಣಿ ನಡೆಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.ಬಸ್ ಓಡಾಟವಿಲ್ಲದ್ದರಿಂದ ನಿಲ್ದಾಣ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಜನಸಂದಣಿ ಕಾಣಲಿಲ್ಲ.

    ಯರಗಟ್ಟಿ ವರದಿ: ರಾಜ್ಯ ಸಾರಿಗೆ ನೌಕರರ ಪ್ರತಿಭಟನೆಯಿಂದಾಗಿ ಒಂದು ಕಡೆ ಸಾರ್ವಜನಿಕರು ಪರದಾಡುತ್ತಿದ್ದರೆ ಇತ್ತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ದುಬಾರಿ ಬಾಡಿಗೆ ಕಟ್ಟಿ ಅಂಗಡಿ ನಡೆಸುತ್ತಿರುವ ಅಂಗಡಿಕಾರರು ಮೂರು ದಿನಗಳಿಂದ ವ್ಯಾಪಾರ ಇಲ್ಲದೆ ಕಂಗಾಲಾಗಿದ್ದಾರೆ.

    ಕರೊನಾ ಹೊಡೆತದಿಂದ ಈಗಷ್ಟೇ ಸುಧಾರಿಸಿಕೊಂಡು ಅಂಗಡಿ ತೆರೆದಿದ್ದ ವ್ಯಾಪಾರಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೌಕರರ ಪ್ರತಿಭಟನೆಯಿಂದ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ನಿಲ್ದಾಣದ ಅಂಗಡಿಗಳಿಗೆ ವರ್ಷಕ್ಕೆ ಲಕ್ಷಾಂತರ ರೂ. ಬಾಡಿಗೆ ಇದ್ದು, ಕೈಯಲ್ಲಿ ಹಣವಿಲ್ಲದೆ ಬಾಡಿಗೆ ಪಾವತಿಸುವುದು ಹೇಗೆ ಎಂದು ಅಂಗಡಿಕಾರರು ಚಿಂತೆಗೀಡಾಗಿದ್ದಾರೆ. ತಿಂಗಳ ಕೊನೆಗೆ ಇಲಾಖೆಗೆ ಬಾಡಿಗೆ ಹಣ ಕಟ್ಟಲೇ ಬೇಕು. ಈಗ ಮೂರು ದಿನಗಳ ಕಾಲ ವ್ಯಾಪಾರ ಇಲ್ಲದೆ ಅಂಗಡಿ ಮುಚ್ಚಿಕೊಂಡು ಕೂತಿದ್ದೇವೆ. ಆದರೆ, ಇಲಾಖೆ ಮೇಲಧಿಕಾರಿಗಳು ಬಂದ್ ಆಗಿರುವುದನ್ನು ಪರಿಗಣಿಸದೆ ಸಂಪೂರ್ಣ ಬಾಡಿಗೆ ತುಂಬಲು ಒತ್ತಾಯಿಸುತ್ತಾರೆ. ಸಂಸಾರ ಸಾಗಿಸಲು ಪರದಾಡುತ್ತಿರುವಾಗ ಬಾಡಿಗೆ ಕಟ್ಟುವುದು ಹೇಗೆ ಎಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಾರಿಗೆ ಮುಷ್ಕರದಿಂದ ಸಾರಿಗೆ ನೌಕರರು ಅಷ್ಟೆ ಅಲ್ಲದೆ ಬಡ ವ್ಯಾಪಾರಿಗಳಿಗೂ ತೊಂದರೆಯಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts