More

    ಉಡುಪಿ ವಿದ್ಯೋದಯ ಕಾಲೇಜಿಗೆ ನಾಲ್ಕು ರ್ಯಾಂಕ್

    ಉಡುಪಿ: ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆ ವಿದ್ಯೋದಯ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸಿದೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ, 4ನೇ, 5ನೇ ಮತ್ತು 9ನೇ ರ‌್ಯಾಂಕ್, ವಾಣಿಜ್ಯ ವಿಭಾಗದ 9ನೇ ರ‌್ಯಾಂಕ್ ಸಂಸ್ಥೆ ಪಾಲಾಗಿದೆ.

    ವಿಜ್ಞಾನ ವಿಭಾಗದಲ್ಲಿ 285 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 190 ಮಂದಿ ವಿಶಿಷ್ಟ ಶ್ರೇಣಿ, 94 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 168 ವಿದ್ಯಾರ್ಥಿಗಳಲ್ಲಿ 72 ವಿಶಿಷ್ಟ ಶ್ರೇಣಿ, 92 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಎ.ಎಲ್.ಛಾತ್ರ ತಿಳಿಸಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಅಭಿಜ್ಞಾ ರಾವ್ 596 ಅಂಕಗಳೊಂದಿಗೆ ಪ್ರಥಮ ರ‌್ಯಾಂಕ್, ಗ್ರೀಷ್ಮಾ 593 ಅಂಕಗಳೊಂದಿಗೆ ನಾಲ್ಕನೇ ರ‌್ಯಾಂಕ್, ಪದ್ಮಿಕಾ ಕೆ. ಶೆಟ್ಟಿ 592 ಅಂಕ ಗಳಿಸಿ 5ನೇ ರ‌್ಯಾಂಕ್ ಪಡೆದು ವಿದ್ಯಾಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಇದೇ ವಿಭಾಗದಲ್ಲಿ ಮೈಥಿಲಿ ಪದವು 588 ಅಂಕ ಗಳಿಸಿ ರಾಜ್ಯಕ್ಕೆ 9ನೇ ರ‌್ಯಾಂಕ್ ಪಡೆದಿದ್ದಾರೆ. ಅವರು ಇಂಗ್ಲಿಷ್‌ನಲ್ಲಿ 95, ಹಿಂದಿ 98, ಭೌತಶಾಸ್ತ್ರದಲ್ಲಿ 97, ರಸಾಯನ ಶಾಸ್ತ್ರದಲ್ಲಿ 98, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ 100 ಅಂಕ ಪಡೆದಿದ್ದಾರೆ.

    ವಾಣಿಜ್ಯ ವಿಭಾಗದಲ್ಲಿ ಅಯೋನಾ ಲೆವಿಸ್ ಇಂಗ್ಲಿಷ್ 93, ಹಿಂದಿ 97, ವ್ಯವಹಾರ ಅಧ್ಯಯನ 100, ಲೆಕ್ಕಶಾಸ್ತ್ರದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100, ಮೂಲಗಣಿತದಲ್ಲಿ 99 ಅಂಕವನ್ನು ಗಳಿಸಿ ಒಟ್ಟು 589 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ರ‌್ಯಾಂಕ್ ಗಳಿಸಿದ್ದಾರೆ.
    ಅಭಿಜ್ಞಾ ರಾವ್ ಸುಬ್ರಹ್ಮಣ್ಯದ ಕೆಎಸ್‌ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಪತ್ರಕರ್ತ ದಿ. ವಿಠಲ ರಾವ್ ಮತ್ತು ಆಶಾ ರಾವ್ ಪುತ್ರಿ. ಗ್ರೀಷ್ಮಾ ಕಿದಿಯೂರಿನ ಕರುಣಾಕರ ಕೊಡವೂರು ಹಾಗೂ ಚಂದ್ರಿಕಾ ದಂಪತಿ ಪುತ್ರಿ. ಪದ್ಮಿಕಾ ಶೆಟ್ಟಿ ಬ್ರಹ್ಮಾವರದ ಸಾಲಿಕೇರಿ ನಿವಾಸಿ ಕುಶಲ ಶೆಟ್ಟಿ – ನಿಶ್ಚಲ ಶೆಟ್ಟಿ ದಂಪತಿ ಪುತ್ರಿ.

    ಸಿಎ ಆಗಬೇಕೆಂಬ ಗುರಿ
    ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿನಿ ಕುಂದಾಪುರ ಸ್ವಾತಿ ಪೈ 594 (99) ಅಂಕ ಪಡೆದು ರಾಜ್ಯಕ್ಕೆ 4ನೇ ರ‌್ಯಾಂಕ್ ಪಡೆದಿದ್ದಾರೆ. ಈಕೆ ಕುಂದಾಪುರ ಹೊಸ ಬಸ್ ನಿಲ್ದಾಣ ಬಳಿಯ ಜವಳಿ ಉದ್ಯಮಿ ಶಿವಾನಂದ ಪೈ- ಶಿಲ್ಪಾ ಪೈ ದಂಪತಿ ಪುತ್ರಿ.

    ‘ಕಾಲೇಜಿನಿಂದ ಹಾಗೂ ಮನೆಯವರಿಂದ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ನಾನು ನಿತ್ಯವೂ ಅಭ್ಯಾಸ ಮಾಡುತ್ತಿದ್ದೆ. ಪ್ರಾಕ್ಟಿಕಲ್ ವಿಷಯಗಳನ್ನು ತರಗತಿ ಮುಗಿದ ನಂತರವೂ ಅಭ್ಯಾಸ ಮಾಡುತ್ತಿದ್ದೆ. ಸಿಎ ಮಾಡಬೇಕು ಅಂದುಕೊಂಡಿದ್ದೇನೆ. ಈಗಾಗಲೇ ಆನ್‌ಲೈನ್ ಮೂಲಕ ತರಬೇತಿ ಪಡೆದುಕೊಳ್ಳುತ್ತಿದ್ದೇನೆ’ ಎಂದು ಸ್ವಾತಿ ಪ್ರತಿಕ್ರಿಯಿಸಿದ್ದಾರೆ.

    ವಕೀಲೆಯಾಗಬೇಕು
    ಕಾರ್ಕಳ: ಕುಕ್ಕುಂದೂರು ಜ್ಞಾನಸುಧಾ ವಿದ್ಯಾಸಂಸ್ಥೆಯ ವಾಣಿಜ್ಯ ವಿಭಾಗ ವಿದ್ಯಾರ್ಥಿನಿ ಬಿ. ರಿತಿಕಾ ಕಾಮತ್ 594 ಅಂಕ (ಶೇ.99) ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 4ನೇ ರ‌್ಯಾಂಕ್ ಪಡೆದಿದ್ದಾರೆ.

    ಕಾರ್ಕಳದ ತೆಳ್ಳಾರ್ ರಸ್ತೆ ನಿವಾಸಿ, ಅನಂತಶಯನ ರಸ್ತೆಯ ದಿನಸಿ ವ್ಯಾಪಾರಿ ಸುಧೀರ್ ಕಾಮತ್ – ಗೀತಾ ಕಾಮತ್ ದಂಪತಿ ಪುತ್ರಿ ಈಕೆ. ಎನ್‌ಎಸ್‌ಎಸ್ ವಿದ್ಯಾರ್ಥಿನಿಯಾಗಿರುವ ರಿತಿಕಾ ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ ಜರುಗಿದ್ದ ಗಣರಾಜೋತ್ಸವದಲ್ಲಿ ಪಾಲ್ಗೊಂಡಿದ್ದರು. ಮುಂದೆ ಕಾನೂನು ಪದವಿ ಓದಿ ವಕೀಲರಾಗಬೇಕೆಂಬುದು ಬಯಕೆ. ಶ್ರದ್ಧೆ ಇದ್ದಾಗ ಯಾವುದರಲ್ಲೂ ಪ್ರಗತಿ ಹೊಂದಬಹುದೆಂಬ ಎಂಬುದು ರಿತಿಕಾ ಅಭಿಪ್ರಾಯ.

    ಆಟೋ ಡ್ರೈವರ್ ಮಗಳು ಕಾಲೇಜಿಗೇ ಫಸ್ಟ್
    ಗಂಗೊಳ್ಳಿ: ಆಟೋ ಚಾಲಕನ ಪುತ್ರಿ, ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪಪೂ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹಫ್ಸಾ 586 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.

    ಹಫ್ಸಾ ಗುಜ್ಜಾಡಿ ಗ್ರಾಮದ ಸಯ್ಯದ್ ಜಮೀರ್ ಅಹಮ್ಮದ್ – ಶಬನಾ ದಂಪತಿಯ ಪುತ್ರಿ. ವೈದ್ಯೆಯಾಗುವ ಬಯಕೆಯಿದೆ. ಸಿಇಟಿ ಪರೀಕ್ಷಾ ಫಲಿತಾಂಶದ ಬಳಿಕ ಅಂತಿಮ ನಿರ್ಧಾರ ಮಾಡುತ್ತೇನೆ. ಶಿಕ್ಷಕರ, ಪಾಲಕರ ಸಹಕಾರ ಮತ್ತು ಕಾಲೇಜಿನಲ್ಲಿರುವ ಉತ್ತಮ ಸೌಲಭ್ಯದಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದು ಹಫ್ಸಾ ಸಂತಸ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts